newsfirstkannada.com

×

ಬಾಲಿವುಡ್​​​ ಡೈರೆಕ್ಟರ್​ ಕರಣ್​ ಜೋಹರ್​​ ಸಂಭಾವನೆ ಎಷ್ಟು? ಇವರ ಬಳಿ ಎಷ್ಟು ಸಾವಿರ ಕೋಟಿ ಇದೆ?

Share :

Published July 17, 2024 at 6:34am

    ಭೂ ಲೋಕವೇ ಸ್ವರ್ಗ ಅನ್ನೋ ರೇಂಜ್​ಗೆ ಅರೇಂಜ್​ಮೆಂಟ್ಸ್

    ಜಗತ್ತಿನ ಟಾಪ್ ಸೆಲೆಬ್ರಿಟಿಸ್​ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ರು

    ಸ್ಟಾರ್ ಮೇಕರ್ ಕರಣ್ ಜೋಹರ್ ಮಿಸ್ ಆಗೋಕೆ ಸಾಧ್ಯವಾ?

ಕೊರಳಲ್ಲಿ ಹಾರ.. ಮಿರ ಮಿರ ಮಿಂಚೋ ಷೇರ್ವಾನಿ.. ಬಾಲಿವುಡ್​ನ ಸ್ಟಾರ್ ಡೈರೆಕ್ಟರ್ ಕರಣ್ ಜೋಹರ್ ಒಳ್ಳೆ ಮದುಮಗನಂತೆ ಮಿಂಚಿದ್ದು, ತಮ್ಮ ಮದುವೆಯಲ್ಲಿ ಅಲ್ಲ. ಸದ್ಯ ವರ್ಲ್ಡ್ ವೈಡ್ ಟಾಕ್ ಆಗಿರೋ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿಯ ಮದುವೆಯಲ್ಲಿ.

ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್​ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಅಂಬಾನಿ ಕುಟುಂಬ ಖರ್ಚು ಮಾಡಿರೋದು ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ. ಭೂ ಲೋಕವೇ ಸ್ವರ್ಗ ಅನ್ನೋ ರೇಂಜ್​ಗೆ ಅರೇಂಜ್​ಮೆಂಟ್ಸ್ ಮಾಡಿದ್ರು. ಭಾರತ, ಜಗತ್ತಿನ ಟಾಪ್ ಸೆಲೆಬ್ರಿಟಿಗಳು ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ರು. ಇಡೀ ಬಾಲಿವುಡ್ ಅಲ್ಲಿ ನೆರೆದಿತ್ತು. ಅಂದ್ಮೇಲೆ ಬಾಲಿವುಡ್​ನಲ್ಲಿ ಸ್ಟಾರ್ ಮೇಕರ್ ಆಗಿರೋ ಕರಣ್ ಜೋಹರ್ ಮಿಸ್ ಆಗೋಕೆ ಸಾಧ್ಯವಾ? ಅಂದ್ಹಾಗೆ 5 ಸಾವಿರ ಕೋಟಿಯ ಈ ಮದುವೆಯಲ್ಲಿ ವಿಐಪಿ ಗೆಸ್ಟ್ ಆಗಿದ್ದ ಕರಣ್ ಜೋಹರ್ ಕೂಡ ಕಡಿಮೆ ಆಸಾಮಿ ಏನಲ್ಲ. ಕೋಟಿ ಕುಳವೇ. ಅದೂ ಒಂದೆರಡೋ, ಹತ್ತೋ, ನೂರು ಕೋಟಿಯ ಒಡೆಯನೋ ಅಲ್ಲ. ಸಾವಿರಾರು ಕೋಟಿಗೆ ಬಾಳುತ್ತಾರೆ ಕರಣ್ ಜೋಹರ್.

ಇದನ್ನೂ ಓದಿ: ರಕ್ಷ್‌ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?

ದಿ ಒನ್ ಌಂಡ್ ಓನ್ಲಿ ಕರಣ್ ಜೋಹರ್, 20 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ತಮ್ಮ ಚಿತ್ರಗಳಿಂದ, ತಮ್ಮ ಫ್ಯಾಷನ್ ಸೆನ್ಸ್​ನಿಂದ ಎಷ್ಟು ಹೆಸರು ಮಾಡಿದ್ದಾರೋ, ಕಾಂಟ್ರವರ್ಸಿಗಳಿಂದಲೂ ಕರಣ್ ಅಷ್ಟೇ ಹೆಸರು ಮಾಡಿದ್ದಾರೆ. ಬಾಲಿವುಡ್​ನಲ್ಲಿ ಸ್ಟಾರ್​ ಕಿಡ್​ಗಳನ್ನ ಲಾಂಚ್ ಮಾಡೋ ನಿರ್ಮಾಪಕ ಕರಣ್ ಜೋಹರ್. ಒಂದೇ ಒಂದು ಫ್ಲಾಪ್ ಸಿನಿಮಾವನ್ನೂ ಕೊಡದ ಸ್ಟಾರ್ ಡೈರೆಕ್ಟರ್ ಕರಣ್ ಜೋಹರ್. ತಮ್ಮ ತಂದೆಯ ಕಾಲದಿಂದಲೂ ಸಿನಿಮಾ ರಂಗದಲ್ಲಿ ತೊಡಗಿರುವ ಕುಟುಂಬ ಜೋಹರ್ ಕುಟುಂಬ. ಹಾಗಿದ್ರೆ ಕರಣ್ ಜೋಹರ್ ಆಸ್ತಿ ಎಷ್ಟು? ಅವ್ರು ಒಂದು ಫಿಲ್ಮ್​ಗೆ ತಗೊಳ್ಳೋ ಸಂಭಾವನೆ ಎಷ್ಟು? ಇದೆಲ್ಲಾ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಮೊಹರಂ ಆಚರಣೆಯಲ್ಲಿ ಅವಘಡ.. ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಾವು

ನಟನೆಯಲ್ಲೂ ತಮ್ಮ ಲಕ್ ಟ್ರೈ ಮಾಡಿದ ಕರಣ್, ಅಲ್ಲಿ ಸಕ್ಸಸ್ ಆಗ್ಲಿಲ್ಲ. ಸಿನಿಮಾ ನಿರ್ಮಾಣ ಹಾಗೂ ನಿರ್ದೇಶದಲ್ಲಿ ನಂಬರ್ ಒನ್. ಯಶ್ ಜೋಹರ್, ಹೀರೂ ಜೋಹರ್ ಪುತ್ರ ಕರಣ್, ಜನಿಸಿದ್ದು ಮೇ 25, 1972ರಲ್ಲಿ. ಆದಿತ್ಯ ಚೋಪ್ರಾರ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ 1995ರಲ್ಲಿ ತಮ್ಮ ಸಿನಿ ಕರಿಯರ್ ಶುರು ಮಾಡಿದ್ರು. 1998ರಲ್ಲಿ ತಮ್ಮ ಮೊದಲ ಚಿತ್ರ ಕುಚ್ ಕುಚ್ ಹೋತಾ ಹೈ ಡೈರೆಕ್ಟ್ ಮಾಡಿದ್ದು. ಶಾರುಖ್, ಕಾಜೋಲ್, ರಾಣಿ ಮುಖರ್ಜಿ, ಸಲ್ಮಾನ್ ಖಾನ್ ಇದ್ದ ಈ ಚಿತ್ರ ಭರ್ಜರಿ ಸಕ್ಸಸ್ ಕಂಡಿತ್ತು. ಬೆಸ್ಟ್ ಪಾಪ್ಯುಲರ್ ಫಿಲ್ಮ್ ಕ್ಯಾಟಗರಿಯಲ್ಲಿ ನ್ಯಾಷನಲ್ ಅವಾರ್ಡ್ ಕೂಡ ಬಂದಿತ್ತು.

ಇದನ್ನೂ ಓದಿ: ಫಿಲ್ಮಿ ರೇಂಜ್​​ನಲ್ಲಿ ಶೆಡ್​​ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..

ಕುಚ್ ಕುಚ್ ಹೋತಾ ಹೈ ಸಿಕ್ಕಾಪಟ್ಟೆ ಸಕ್ಸಸ್ ಆದ್ಮೇಲೆ ಮತ್ತೆ ಕರಣ್ ನಿರ್ದೇಶನ ಮಾಡಿದ 2001ರಲ್ಲಿ ತೆರೆ ಕಂಡ ಕಭಿ ಖುಷಿ ಕಭಿ ಘಮ್, 2006ರ ಕಭಿ ಅಲ್ವಿದ ನಾ ಕೆಹನಾ, 2010ರಲ್ಲಿ ಮೈ ನೇಮ್ ಈಸ್ ಖಾನ್, 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್, 2013ರಲ್ಲಿ ಕ್ರಿಟಿಕ್ಸ್​ನಿಂದಲೂ ಮೆಚ್ಚುಗೆ ಪಡೆದ ಬಾಂಬೆ ಟಾಕೀಸ್ ಸಿನಿಮಾದ ಒಂದು ಭಾಗವನ್ನ ನಿರ್ದೇಶಿಸಿದ್ರು. ನಂತರ 2016ರಲ್ಲಿ ಏ ದಿಲ್ ಹೈ ಮುಷ್ಕಿಲ್, 2018ರಲ್ಲಿ ಮತ್ತೊಮ್ಮೆ ಬಾಂಬೆ ಟಾಕೀಸ್​ನಂತೆಯೇ ಲಸ್ಟ್ ಸ್ಟೋರೀಸ್​ನ ಒಂದು ಭಾಗ, 2020ರಲ್ಲಿ ಲಸ್ಟ್ ಸ್ಟೋರೀಸ್​ನ ಸೀಕ್ವೆಲ್ ಘೋಸ್ಟ್ ಸ್ಟೋರೀಸ್​ನ ಒಂದು ಭಾಗ, 2023ರಲ್ಲಿ ರಿಲೀಸ್ ಆದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಗೂ ಌಕ್ಷನ್ ಕಟ್ ಹೇಳಿದ್ದು ಇದೇ ಕರಣ್ ಜೋಹರ್. ಹಂತ ಹಂತವಾಗಿ ನಿರ್ದೇಶನದಲ್ಲಿ ಸಕ್ಸಸ್ ಕಂಡ ಕರಣ್ ಇಲ್ಲಿವರೆಗೂ ನಿರ್ದೇಶಕನಾಗಿ ಒಂದೂ ಫ್ಲಾಪ್ ಚಿತ್ರವನ್ನ ಕೊಟ್ಟಿಲ್ಲ. ಕರಣ್ ಜೋಹರ್​ರ ಸಿನಿಮಾಗಳಲ್ಲಿ ಮತ್ತೊಂದು ವಿಶೇಷ ಅಂದ್ರೆ, ಎಲ್ಲವೂ ಮಲ್ಟಿ ಸ್ಟಾರರ್ ಸಿನಿಮಾಗಳು. ತಮ್ಮ ಮೊದಲ ಚಿತ್ರದಲ್ಲಿ ಶಾರುಖ್, ಕಾಜೋಲ್, ಸಲ್ಮಾನ್, ರಾಣಿ ಮುಖರ್ಜಿಯನ್ನ ಕಾಸ್ಟ್ ಮಾಡಿದ್ರು. ಅಮಿತಾಬ್ ಬಚ್ಚನ್, ಪ್ರೀತಿ ಝಿಂಟಾರಿಂದ ಹಿಡಿದು ರಣ್ವೀರ್ ಸಿಂಗ್, ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರಾ ತನಕ ಬಿ ಟೌನ್​ನ ಬಹುತೇಕ ಸ್ಟಾರ್​ಗಳು ಕರಣ್ ಜೋಹರ್​ರ ಚಿತ್ರಗಳಲ್ಲಿ ಌಕ್ಟ್ ಮಾಡಿದ್ದಾರೆ.

ನಿರ್ದೇಶಕನಾಗಿ ಯಶಸ್ಸು ಸಿಕ್ಕ ನಂತರ ನಿರ್ಮಾಣದತ್ತಲೂ ಚಿತ್ತ ಹರಿಸಿದ್ರು. ತಮ್ಮ ತಂದೆ ಆರಂಭಿಸಿದ್ದ ಧರ್ಮಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹಲವು ಹಿಟ್ ಚಿತ್ರಗಳನ್ನ ಕರಣ್ ಸಿನಿ ಪ್ರಿಯರಿಗೆ ನೀಡಿದ್ದಾರೆ. ಕಲ್ ಹೋ ನಾ ಹೋ, ದೋಸ್ತಾನಾ, ವೇಕಪ್ ಸಿಡ್, ಯೇ ಜವಾನಿ ಹೈ ದಿವಾನಿ, 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಡಿಯರ್ ಝಿಂದಗಿ, ಸಿಂಬಾ, ಸೂರ್ಯವಂಶಿ ಹೀಗೆ ಹಲವು ಹಿಟ್ ಚಿತ್ರಗಳನ್ನ ಪ್ರೊಡ್ಯೂಸರ್ ಆಗಿ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.​

ಇದನ್ನೂ ಓದಿ: ರಿಷಬ್ ಪಂತ್​ಗೆ ಸಾಥ್ ಕೊಡ್ತಾರಾ ರಾಹುಲ್ ದ್ರಾವಿಡ್​.. ಡೆಲ್ಲಿ ಕ್ಯಾಪಿಟಲ್ಸ್​ಗೆ ಕೋಚ್ ಆಗ್ತಾರಾ ಕನ್ನಡಿಗ?

ಇವತ್ತು ಇಂಡಿಯಾದಲ್ಲಿ ಶ್ರೀಮಂತ ಫಿಲ್ಮ್ ಮೇಕರ್​ಗಳಲ್ಲಿ ಕರಣ್ ಜೋಹರ್ ಹೆಸರು ಅಗ್ರ ಸ್ಥಾನದಲ್ಲಿದೆ. ಈಗ ಕರಣ್ ಜೋಹರ್ ಒಂದು ಸಿನಿಮಾ ನಿರ್ದೇಶನ ಮಾಡೋದಕ್ಕೆ 2 ರಿಂದ 3 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರಂತೆ. ಜೊತೆಗೆ ತಮ್ಮದೇ ಟಾಕ್ ಶೋ ಕಾಫಿ ವಿತ್ ಕರಣ್​ನ ಒಂದೊಂದು ಎಪಿಸೋಡ್​ಗೂ 1 ರಿಂದ 2 ಕೋಟಿ ರೆಮ್ಯುನರೇಷನ್ ಪಡೆಯುತ್ತಾರೆ ಅನ್ನೋ ಮಾಹಿತಿ ಇದೆ. ಮುಂಬೈನಲ್ಲಿರುವ ಇವರ ಮನೆ ಬೆಲೆಯೇ ಬರೋಬ್ಬರಿ 32 ಕೋಟಿ ರೂಪಾಯಿ. ಬಾಲಿವುಡ್​ನ ಶ್ರೀಮಂತ ನಿರ್ದೇಶಕ ಅಂತ ಕರೆಸಿಕೊಳ್ತಿರುವ ಕರಣ್ ಜೋಹರ್​ರ ಒಟ್ಟು ಆಸ್ತಿಯ ಮೌಲ್ಯ 1,700 ಕೋಟಿ ರೂಪಾಯಿ ಅಂತ ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​​​ ಡೈರೆಕ್ಟರ್​ ಕರಣ್​ ಜೋಹರ್​​ ಸಂಭಾವನೆ ಎಷ್ಟು? ಇವರ ಬಳಿ ಎಷ್ಟು ಸಾವಿರ ಕೋಟಿ ಇದೆ?

https://newsfirstlive.com/wp-content/uploads/2024/07/karan_johar_shahrukh_khan.jpg

Load More