/newsfirstlive-kannada/media/post_attachments/wp-content/uploads/2024/03/tapse-pannu.webp)
ಬಾಲಿವುಡ್​ ನಟಿ ಕೃತಿ ಕರಬಂಧ ಬಹುಕಾಲದ ಗೆಳೆಯ ಪುಲ್ಕಿತ್​​ರನ್ನು ಇತ್ತೀಚೆಗೆ ವಿವಾಹವಾದರು. ಇವರ ವಿವಾಹ ಬಳಿಕ ಇದೀಗ ತಾಪ್ಸಿ ಪನ್ನು ವಿವಾಹದ ಸುದ್ದಿ ವೈರಲ್​ ಆಗಿದೆ. ಬಹುಕಾಲದ ಗೆಳೆಯ, ಬ್ಯಾಡ್ಮಿಂಟನ್​ ಆಟಗಾರನನ್ನು ‘ತಪ್ಪಡ್​​’ ಹೀರೋಯಿನ್​ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ನಟಿ ತಾಪ್ಸಿ ಪನ್ನು ಮಥಿಯಾಸ್​​ ಬೋ ಅವನ್ನು ವಿವಾಹವಾಗಿದ್ದಾರೆ. ಬಾಲಿವುಡ್​ ಬೆಡಗಿ ಮಾರ್ಚ್​ 23ರಂದು ಸದ್ದಿಲ್ಲದೆ ವಿವಾಹವಾಗಿದ್ದಾರೆ. ಸದ್ಯ ಇವರ ವಿವಾಹ ಸುದ್ದಿ 2 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ತಾಪ್ಸಿ ತನ್ನ ಮದುವೆಗೆ ಕೆಲವೇ ಕೆಲವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ, ಅನುರಾಗ್​ ಕಶ್ಯಪ್​​, ಕನಿಕಾ ಧಿಲ್ಲೋನ್​ ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ನಟ ಪಾವೈಲ್​​ ಗುಲಾಟಿ ತಾಪ್ಪಿ ಮತ್ತು ಮಥಿಯಾಸ್​ ಬೋ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
‘ತಪ್ಪಡ್’​ ಸಹನಟ ಪಾವೈಲ್​ ಗುಲಾಟಿ ತಾಪ್ಸಿ ಮದುವೆಯ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ‘ಟ್ಬಿಂಕಲ್​ ಟ್ವಿಂಕಲ್​ ಲಿಟಲ್​ ಸ್ಟಾರ್​, ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ತಾಪ್ಸಿ ಮತ್ತು ಮಥಿಯಾಸ್​ ಅನೇಕ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರು. ಇವರು 2013ರಲ್ಲಿ ಇಂಡಿಯನ್​ ಬ್ಯಾಡ್ಮಿಂಟನ್​​ ಲೀಗ್​ನಲ್ಲಿ ಮೊದಲು ಭೇಟಿಯಾದರು. ಸದ್ಯ ಈ ಜೋಡಿ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಅಂದಹಾಗೆಯೇ ನವ ಜೋಡಿ ಸಿಖ್​ ಮತ್ತು ಕ್ರಿಶ್ಚಿಯನ್​ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ ಎಂದು ವರದೀಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us