newsfirstkannada.com

ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟ ಹೀರೋ ನಂ.1 ಖ್ಯಾತಿಯ ಗೋವಿಂದ; ಯಾವ ಕ್ಷೇತ್ರದಿಂದ ಸ್ಪರ್ಧೆ?

Share :

Published March 28, 2024 at 5:46pm

    2024ರ ಲೋಕಸಭಾ ಚುನಾವಣೆಗೆ ಹೀರೋ ನಂ.1 ನಟ ಗೋವಿಂದ ರೀ ಎಂಟ್ರಿ!

    2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲು

    ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನೆ ವರ್ಸಸ್ ಶಿವಸೇನೆ

ಮುಂಬೈ: ಹೀರೋ ನಂ.1 ಖ್ಯಾತಿಯ ಬಾಲಿವುಡ್ ಹಿರಿಯ ನಟ ಗೋವಿಂದ ಅವರು ರಾಜಕೀಯಕ್ಕೆ ರೀ ಎಂಟ್ರಿ ಆಗಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದ ಗೋವಿಂದ ಅವರು ಇಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆ ಪಕ್ಷವನ್ನು ಸೇರಿಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋವಿಂದ ಅವರು ಸ್ಪರ್ಧಿಸುವ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗಿತ್ತು. ಗೋವಿಂದ ಅವರು ಯಾವ ಪಾರ್ಟಿ ಸೇರಿಕೊಳ್ತಾರೆ. ಎಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋದು ಸಸ್ಪೆನ್ಸ್ ಆಗಿತ್ತು. ಅಂತಿಮವಾಗಿ ಏಕನಾಥ್ ಶಿಂಧೆ ಅವರ ಶಿವಸೇನೆಗೆ ಗೋವಿಂದ ಅವರು ಜೈ ಎಂದಿದ್ದಾರೆ. ಶಿವಸೇನೆ ಕಚೇರಿ ಬಾಳಸಾಹೇಬ್ ಭವನದಲ್ಲಿ ಪಕ್ಷ ಸೇರಿಕೊಂಡ ಗೋವಿಂದ ಅವರು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಾನಿಯಾ ಮಿರ್ಜಾ ಸ್ಪರ್ಧಿಸ್ತಾರಾ? ಯಾವ ಪಕ್ಷ? ಎದುರಾಳಿ ಯಾರು?

2004ರ ಲೋಕಸಭಾ ಚುನಾವಣೆಯಲ್ಲಿ ಗೋವಿಂದ ಅವರು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗೋವಿಂದ ಅವರನ್ನ ಬಿಜೆಪಿ ನಾಯಕ ರಾಮ್‌ ನಾಯ್ಕ್ ಅವರು ಸೋಲಿಸಿದ್ದರು. 2004ರ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಗೋವಿಂದ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದರು.

ಗೋವಿಂದ ಅವರನ್ನ ಮನವೊಲಿಸುವಲ್ಲಿ ಏಕನಾಥ್ ಶಿಂಧೆ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ. ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನೆ ವರ್ಸಸ್ ಶಿವಸೇನೆಯ ಜಿದ್ದಾಜಿದ್ದಿನ ಫೈಟ್ ಇದೆ. ಉದ್ಧವ್ ಠಾಕ್ರೆ ಬಣದ ಶಿವಸೇನೆಯಿಂದ ಅಮೊಲ್ ಕಿರ್ತಿಕರ್ ಅವರು ಸ್ಪರ್ಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟ ಹೀರೋ ನಂ.1 ಖ್ಯಾತಿಯ ಗೋವಿಂದ; ಯಾವ ಕ್ಷೇತ್ರದಿಂದ ಸ್ಪರ್ಧೆ?

https://newsfirstlive.com/wp-content/uploads/2024/03/Actor-Govinda.jpg

Load More