newsfirstkannada.com

ಪ್ರೀತಿಸಿ ಮದುವೆ.. 2 ವರ್ಷದ ಬಳಿಕ ಗಂಡ-ಹೆಂಡತಿ ಇಬ್ಬರೂ ಸಾವಿಗೆ ಶರಣು; ಕಾರಣವೇನು?

Share :

Published May 15, 2024 at 1:08pm

  ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದ ವೇಳೆ ನಡೆದಿರುವ ದುರಂತ

  ತಡರಾತ್ರಿ ಊಟ ಮಾಡಿದ ಬಳಿಕ ಇಬ್ಬರು ನೇಣಿಗೆ ಶರಣಾಗಿರುವ ಶಂಕೆ

  ಯುವಕನ ತಾಯಿ ಬೆಳಗ್ಗೆ ವಾಪಸ್ ಮನೆಗೆ ಬಂದಾಗ ದುರಂತ ಬೆಳಕಿಗೆ

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನೇಣಿಗೆ ಶರಣಾಗಿರುವ ದಾರುಣ ಘಟನೆ ವಿಜಯಪುರ ‌ನಗರ ಹೊರಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ನಡೆದಿದೆ. ಮನೋಜಕುಮಾರ ಪೋಳ (30) ರಾಖಿ (23) ಸಾವನ್ನಪ್ಪಿದ ಜೋಡಿ.

ಮನೋಜಕುಮಾರ ಪೋಳ ಹಾಗೂ ರಾಖಿ ಪರಸ್ಪರ ಪ್ರೀತಿಸಿ ಮದುವೆಯಾಗಿ 2 ವರ್ಷಗಳಾಗಿತ್ತು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಊಟ ಮಾಡಿದ ಬಳಿಕ ಇಬ್ಬರು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮನೋಜಕುಮಾರ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದರು. ಇಂದು‌ ಬೆಳಗ್ಗೆ ವಾಪಸ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಹುಬ್ಬಳ್ಳಿಯ ಅಂಜಲಿ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗೆ ಕಾರಣವೇನು? ಅಸಲಿಗೆ ಆಗಿದ್ದೇನು? 

ಮನೋಜಕುಮಾರ ಹಾಗೂ ರಾಖಿ ಮದುವೆಯಾಗಿ ಎರಡು ವರ್ಷ ಆಗಿತ್ತು. ಮಕ್ಕಳಾಗಲಿಲ್ಲ ಎಂದು ಇಬ್ಬರ ಮಧ್ಯೆ ಜಗಳಾಡುತ್ತಿದ್ದರು. ಹೀಗಾಗಿ ಇಬ್ಬರು ನೇಣಿಗೆ ಶರಣಾಗಿರಬಹುದು ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿ ಮದುವೆ.. 2 ವರ್ಷದ ಬಳಿಕ ಗಂಡ-ಹೆಂಡತಿ ಇಬ್ಬರೂ ಸಾವಿಗೆ ಶರಣು; ಕಾರಣವೇನು?

https://newsfirstlive.com/wp-content/uploads/2024/05/Vijayapura-Couple-Death-1.jpg

Load More