newsfirstkannada.com

ಹುಬ್ಬಳ್ಳಿಯ ಅಂಜಲಿ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗೆ ಕಾರಣವೇನು? ಅಸಲಿಗೆ ಆಗಿದ್ದೇನು?

Share :

Published May 15, 2024 at 12:25pm

Update May 15, 2024 at 12:35pm

    ಬೆಳ್ಳಂಬೆಳಗ್ಗೆ ಮನೆಯಲ್ಲಿ ಮಲಗಿದ್ದ ಯುವತಿಗೆ ಚಾಕು ಇರಿದ ಯುವಕ

    ವೀರಾಪುರ ಓಣಿಯಲ್ಲಿ ಅಂಜಲಿ ಎಂಬ ಯುವತಿಯ ಬರ್ಬರ ಹತ್ಯೆ

    ಅಂಜಲಿ ಮನೆಗೆ ಬಂದು ಬಾಗಿಲು ತಟ್ಟಿದ ಕೊಲೆಗಾರ ಮಾಡಿದ್ದೇನು?

ನೇಹಾ ಹಿರೇಮಠ್ ಬರ್ಬರ ಹತ್ಯೆ ಕೇಸ್‌ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಭಯಾನಕ ಕೊಲೆಯಾಗಿದೆ. ಬೆಳ್ಳಂಬೆಳಗ್ಗೆ ವೀರಾಪುರ ಓಣಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

ಮೃತ ಯುವತಿಯನ್ನು 20 ವರ್ಷದ ಅಂಜಲಿ ಅಂಬಿಗೇರ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮೃತ ಯುವತಿ ವೀರಾಪೂರ ಓಣಿಯ ಮನೆಯಲ್ಲಿ ಮಲಗಿದ್ದಳು. ಆರೋಪಿ ಗಿರೀಶ್ ಸಾವಂತ ಮನೆಗೆ ನುಗ್ಗಿ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಗಿರೀಶ್ ಸಾವಂತ ಕೊಲೆ ಮಾಡಿ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಗಿರೀಶ್ ಸಾವಂತ ಕೊಲೆ ಮಾಡಿ ಓಡಿ ಹೋಗುತ್ತಿರುವ ಸಿಸಿಟಿ ದೃಶ್ಯ

ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಈಗಾಗಲೇ ಆರೋಪಿ ಗಿರೀಶ್ ಸಾವಂತ ಪತ್ತೆಗೆ ಬಲೆ ಬೀಸಲಾಗಿದೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಲಿದೆ. ಮುಂದಿನ ಮಾಹಿತಿಯನ್ನ ತನಿಖೆಯ ನಂತರ ತಿಳಿಸಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್​ 

ಅಸಲಿಗೆ ಆಗಿದ್ದೇನು?
ಇಂದು ಬೆಳಗಿನ ಜಾವ ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ಓರ್ವ ಯುವಕ ಬಂದು ಬಾಗಿಲು ತಟ್ಟಿದ್ದಾನೆ. ಮನೆ ಬಾಗಿಲನ್ನು ಅಂಜಲಿಯೇ ತೆಗೆದಿದ್ದಾಳೆ. ಆಗ ಅವನು ಒಳಗಡೆ ಬಂದು ಏಕಾಏಕಿ ಚಾಕು ಹಾಕಿದ್ದಾನೆ ಎಂದು ಕೊಲೆಯಾದ ಅಂಜಲಿಯ ಅಜ್ಜಿ ಗಂಗಮ್ಮ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Rakhi Sawant: ಹಾಸಿಗೆ ಹಿಡಿದ ರಾಖಿ ಸಾವಂತ್.. ಮಾಜಿ ಪತಿ ಏನಂದ್ರು..? 

ಕೊಲೆ ಮಾಡಿದ ಹುಡುಗ ನನ್ನ ಮೊಮ್ಮಗಳಿಗೆ ಶಾಲೆಯಿಂದ ಪರಿಚಯವಿದ್ದ. ಅವನು ಅಂಜಲಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ನನ್ನ ಮೊಮ್ಮಗಳು ಅಂಜಲಿ ಒಪ್ಪಿರಲಿಲ್ಲ. ಫೋನ್‌ನಲ್ಲಿ ಮೊದಲು ನೀನು ಮೈಸೂರಿಗೆ ನನ್ನ ಜೊತೆ ಬರಬೇಕು ಇಲ್ಲ ಅಂದ್ರೆ ನೇಹಾ ಕೊಲೆ ಮಾಡಿದ ಹಾಗೇ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದನಂತೆ. ಈ ವಿಷಯವನ್ನು ನಾವು ಪೊಲೀಸರಿಗೆ ಹೇಳಿದ್ವಿ. ಇಂದು ಬೆಳ್ಳಂಬೆಳಗ್ಗೆ ಬಂದು ನನ್ನ ಮೊಮ್ಮಗಳನ್ನ ಕೊಲೆ ಮಾಡಿದ್ದಾನೆ. ಬಾಗಿಲನ್ನು ನನ್ನ ಮೊಮ್ಮಗಳು ಅಂಜಲಿ ತೆಗೆದ ವೇಳೆ ಅವನು ಒಳಗಡೆ ಬಂದು ಏಕಾಏಕಿ ಚಾಕು ಹಾಕಿದ್ದಾನೆ. ಅವನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅಂಜಲಿ ಅಜ್ಜಿ ಗಂಗಮ್ಮ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಬ್ಬಳ್ಳಿಯ ಅಂಜಲಿ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗೆ ಕಾರಣವೇನು? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/Hubbali-Girl-Death.jpg

Load More