Advertisment

ತಮಾಷೆ ಅಲ್ಲ.. ಜರ್ಮನಿಗೆ 20,000 ಆನೆ ನುಗ್ಗಿಸೋ ಎಚ್ಚರಿಕೆ ಕೊಟ್ಟ ಬೋಟ್ಸ್‌ವಾನಾ; ಕಾರಣವೇನು?

author-image
admin
Updated On
ತಮಾಷೆ ಅಲ್ಲ.. ಜರ್ಮನಿಗೆ 20,000 ಆನೆ ನುಗ್ಗಿಸೋ ಎಚ್ಚರಿಕೆ ಕೊಟ್ಟ ಬೋಟ್ಸ್‌ವಾನಾ; ಕಾರಣವೇನು?
Advertisment
  • ಬೋಟ್ಸ್‌ವಾನಾದಲ್ಲಿ ಆನೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳ
  • ಬೋಟ್ಸ್‌ವಾನಾದಲ್ಲಿರುವ ಆನೆಗಳ ಸಂಖ್ಯೆ ಈಗ 1 ಲಕ್ಷ 30 ಸಾವಿರ
  • ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುವ ಬೆದರಿಕೆ ಹಾಕಿದ ಅಧ್ಯಕ್ಷ

ಆನೆಗಳು ಅಂದ್ರೆ ನಮ್ಮ ದೇಶದಲ್ಲಿ ಬಹಳ ದೊಡ್ಡ ಗೌರವ ಇದೆ. ವಿನಾಯಕನ ಪ್ರತಿರೂಪದ ಗಜರಾಜನನ್ನ ನೂರಾರು ವರ್ಷಗಳಿಂದ ಪೋಷಿಸಿ, ಪೂಜಿಸುವ ಸಂಪ್ರದಾಯವಿದೆ. ಭಾರತದಲ್ಲಿ ಹಬ್ಬ, ಹರಿದಿನ, ಉತ್ಸವಗಳಲ್ಲಿ ಆನೆಗಳಿಗೆ ನೀಡುವ ಪ್ರಾಮುಖ್ಯತೆಯೇ ಬೇರೆ. ಆನೆಗಳು ಮನುಷ್ಯರನ್ನ ತುಳಿದು ಸಾಯಿಸಿದರೂ ಅದರ ರಕ್ಷಣೆಗೆ ನಮ್ಮ ದೇಶದಲ್ಲಿ ಕಾನೂನುಗಳಿವೆ. ಆದರೆ ಆನೆಗಳನ್ನು ಕಂಡರೆ ಹೊಂಚು ಹಾಕಿ ಕೊಲ್ಲುವ, ಆನೆಗಳ ಸಂತತಿಯನ್ನೇ ನಾಶ ಮಾಡಲು ಯತ್ನಿಸುವ ದೇಶವೂ ಒಂದಿದೆ. ಅದು ಯಾವ ದೇಶ, ಆನೆಗಳಿಂದ ತಪ್ಪಿಸಿಕೊಳ್ಳಲು ಅದು ಮಾಡುತ್ತಿರೋ ಸಾಹಸದ ಸ್ಟೋರಿ ಇಲ್ಲಿದೆ ನೋಡಿ.

Advertisment

ಬೋಟ್ಸ್‌ವಾನಾ.. ಇದು ದಕ್ಷಿಣ ಆಫ್ರಿಕಾದ ಪುಟ್ಟ ದೇಶ. ಈ ದೇಶಕ್ಕೆ ಪ್ರವಾಸೋದ್ಯಮವೇ ಮುಖ್ಯ. ಇಲ್ಲಿಗೆ ಬರುವ ಪ್ರವಾಸಿಗರು ಆನೆಗಳನ್ನ ನೋಡಿ ಆನಂದ ಪಡುತ್ತಾರೆ. ಆದರೆ ಅದೇ ಆನೆಗಳು ಬೋಟ್ಸ್‌ವಾನಾಕ್ಕೆ ತಲೆನೋವಾಗಿದೆ. ಆನೆಗಳನ್ನ ನಿಯಂತ್ರಣ ಮಾಡೋಕೆ ಆಗದೇ ಬೋಟ್ಸ್‌ವಾನಾ ಸರ್ಕಾರ ಸುಸ್ತಾಗಿ ಹೋಗಿದೆ.

publive-image

ಇತ್ತೀಚೆಗೆ ಬೋಟ್ಸ್‌ವಾನಾದಲ್ಲಿ ಆನೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸದ್ಯ ಬೋಟ್ಸ್‌ವಾನಾದಲ್ಲಿರುವ ಆನೆಗಳ ಸಂಖ್ಯೆ ಎಷ್ಟು ಅಂದ್ರೆ 1 ಲಕ್ಷ 30 ಸಾವಿರ. ಇದು ವಿಶ್ವದ ಮೂರನೇ ಒಂದರಷ್ಟು ಅನ್ನೋದು ಅಚ್ಚರಿಯ ಸಂಗತಿ. ವರ್ಷದಿಂದ ವರ್ಷಕ್ಕೆ ಈ ಆನೆಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಆನೆಗಳಿಂದ ಇಲ್ಲಿನ ಜನ ಬದುಕುವುದೇ ಕಷ್ಟವಾಗಿದೆ.

ಬೋಟ್ಸ್‌ವಾನಾ ಕಾಡಿನಲ್ಲಿರುವ ಆನೆಗಳು ಸೀದಾ ನಾಡಿಗೆ ನುಗ್ಗುತ್ತವೆ. ಅಲ್ಲದೆ ಮನೆ, ಹೊಲಗಳ ಮೇಲೆ ದಾಳಿ ಸಿಕ್ಕ, ಸಿಕ್ಕವನ್ನೆಲ್ಲಾ ನಾಶ ಮಾಡಿ ಹೋಗುತ್ತವೆ. ಹೀಗಾಗಿ ಈ ಆನೆಗಳನ್ನ ದಾಳಿಯಿಂದ ತಪ್ಪಿಸಿಕೊಳ್ಳುವುದು ಬೋಟ್ಸ್‌ವಾನಾಗೆ ಕಷ್ಟಕರವಾಗಿದೆ.

Advertisment

ಇದನ್ನೂ ಓದಿ: ಸಫಾರಿಗೆ ಬಂದಿದ್ದ ವಾಹನದ ಮೇಲೆ ಆನೆ ಅಟ್ಯಾಕ್; 80 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು

ಆನೆಗಳ ಸಂಖ್ಯೆ ಏರಿಕೆಗೆ ಕಾರಣವೇನು?
ಕಾಡು ಪ್ರಾಣಿಗಳನ್ನು ಬೇಟೆಯಾಡಬಾರದು. ಪ್ರಾಣಿಗಳೊಂದಿಗೆ ಮನುಷ್ಯರು ಒಟ್ಟಿಗೆ ಬದುಕಬೇಕು ಅನ್ನೋದು ಜರ್ಮನ್‌ ಸರ್ಕಾರದ ನೀತಿ. ಹೀಗಾಗಿ ಜರ್ಮನ್ ದೇಶದ ಬೇಟೆಯಾಡುವ ನಿರ್ಬಂಧಗಳಿಂದ ಬೋಟ್ಸ್‌ವಾನಾದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಆನೆಗಳ ಸಂಖ್ಯೆ ಹೆಚ್ಚಾಗಿ ಬೋಟ್ಸ್‌ವಾನಾದ ಜನರು ಬಡವರಾಗುತ್ತಿದ್ದಾರೆ.

ಬೋಟ್ಸ್‌ವಾನಾದಲ್ಲಿ ಆನೆಗಳ ಬೇಟೆಯ ಮೇಲಿದ್ದ ನಿಷೇಧವನ್ನು 2019ರಲ್ಲೇ ತೆಗೆದು ಹಾಕಿದೆ. ಬೋಟ್ಸ್‌ವಾನಾಕ್ಕೆ ಬರುವ ಪ್ರವಾಸಿರು ಆನೆಗಳನ್ನ ಬೇಟೆಯಾಡಿ ಸಾಯಿಸಲು ಅನುಮತಿ ಇದೆ. ಇದರ ಜೊತೆಗೆ ಆನೆಗಳ ಬೇಟೆಗೆ ವಿರೋಧಿಸುವ ದೇಶಗಳಿಗೆಲ್ಲಾ ಬೋಟ್ಸ್‌ವಾನಾ ಬೆದರಿಕೆ ಹಾಕಲು ಆರಂಭಿಸಿದೆ.

Advertisment

publive-image

ಬೋಟ್ಸ್‌ವಾನಾ ಅಧ್ಯಕ್ಷ ಮೊಕ್ಗ್ವೀಟ್ಸಿ ಮಸಿಸಿ ಅವರು ಜರ್ಮಿನಿಗೆ ಒಂದು ಬೆದರಿಕೆ ಹಾಕಿದ್ದಾರೆ. ಆನೆಗಳ ಕಾಟದಿಂದ ಸುಸ್ತಾಗಿ ಹೋಗಿರುವ ಬೋಟ್ಸ್‌ವಾನಾ ಇದೀಗ ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುವ ಬೆದರಿಕೆ ಹಾಕಿದೆ. ಇದು ತಮಾಷೆಯೇ ಅಲ್ಲ ಎಂದು ಜರ್ಮನಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಬೋಟ್ಸ್‌ವಾನಾ ಈ ಹಿಂದೆ ಅಂಗೋಲಾಕ್ಕೆ 8000, ಮೊಜಾಂಬಿಕ್‌ಗೆ 500 ಆನೆಗಳನ್ನು ಕಳಿಸಿತ್ತು. ಬೇಟೆಗಾರರ ಮೇಲೆ ನಿಷೇಧ ಹೇರಿದ್ದ ಇಂಗ್ಲೆಂಡ್‌ ದೇಶಕ್ಕೂ 10,000 ಆನೆಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment