BBMP ಗ್ರೌಂಡ್‌ನಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 10 ವರ್ಷದ ಬಾಲಕ ಸಾವು!

author-image
Bheemappa
Updated On
BBMP ಗ್ರೌಂಡ್‌ನಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 10 ವರ್ಷದ ಬಾಲಕ ಸಾವು!
Advertisment
  • ಆಟವಾಡಲು ಮೈದಾನಕ್ಕೆ ಹೋಗಿದ್ದಾಗ ಜೀವ ಪಡೆದ ಜವರಾಯ
  • ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಮೃತ ಬಾಲಕನ ತಂದೆ
  • ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರಿಂದ ಪರಿಶೀಲನೆ

ಬೆಂಗಳೂರು: ಆಟದ ಮೈದಾನದ ಗೇಟ್​​ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಮಲ್ಲೇಶ್ವರಂನ ಬಿಬಿಎಂಪಿ ಗ್ರೌಂಡ್​ನಲ್ಲಿ ನಡೆದಿದೆ.

ವಿಜಯಕುಮಾರ್ ಮತ್ತು ಪ್ರಿಯಾ ದಂಪತಿ ಮಗ ನಿರಂಜನ್ (10) ಮೃತ ಬಾಲಕ. ಇವರು ಮಲ್ಲೇಶ್ವರಂನ ಫೈಪ್​​ಲೈನ್​​ನಲ್ಲಿ ವಾಸವಾಗಿದ್ದು ತಂದೆ ಆಟೋ ಚಾಲಕನಾಗಿದ್ದಾರೆ. ಬಿಬಿಎಂಪಿ ಶಾಲೆಯಲ್ಲಿ ಬಾಲಕ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಸಂಜೆ 4ರ ಸುಮಾರಿಗೆ ಆಟ ಆಡಲೆಂದು ಎಂದಿನಂತೆ ಬಿಬಿಎಂಪಿ ಗ್ರೌಂಡ್​ಗೆ ಹೋಗಿದ್ದಾನೆ. ಈ ವೇಳೆ ಒಬ್ಬನೇ ಗೇಟ್ ತೆಗೆಯಬೇಕಾದರೆ ಮೇಲೆ ಬಿದ್ದಿದೆ. ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿತ್ತು.

ಇದನ್ನೂ ಓದಿ:ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್​ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!

publive-image

ತಕ್ಷಣ ಸ್ಥಳೀಯರು ಬಾಲಕನನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮಾಹಿತಿ ತಿಳಿದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇನ್ನು ಮಲ್ಲೇಶ್ವರಂ ಠಾಣೆಯ ಪೊಲೀಸರು ಇದೇ ವೇಳೆ ಇದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment