ಪಂತ್, ಗಿಲ್ ಬ್ಯಾಟಿಂಗ್ಗೆ ಬಾಂಗ್ಲಾದೇಶ ಆಟಗಾರರು ತಬ್ಬಿಬ್ಬು
4 ಸಿಕ್ಸ್, 13 ಬೌಂಡರಿ ಸಮೇತ 109 ರನ್ಗಳಿಸಿದ ರಿಷಬ್ ಪಂತ್
ಭಾರತದ ಬ್ಯಾಟಿಂಗ್ಗೆ ತಲೆ ಕೆಡಿಸಿಕೊಂಡಿದ್ದ ಬಾಂಗ್ಲಾ ಪ್ಲೇಯರ್ಸ್
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದೆ. ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ರಿಷಬ್ ಪಂತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ರಿಷಬ್ ಪಂತ್ ಬ್ಯಾಟಿಂಗ್ ಮಾಡುವಾಗ ಮೈದಾನದಲ್ಲಿ ಕುತೂಹಲಕಾರಿ ಸಂಗತಿಯೊಂದು ನಡೆದಿದ್ದು ಬಾಂಗ್ಲಾ ಪ್ಲೇಯರ್ಸ್ ಅನ್ನು ಫ್ಲೀಲ್ಡಿಂಗ್ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಸೀಕ್ರೆಟ್ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್ನಲ್ಲಿ ಏನ್ ಮಾಡ್ತಿದ್ರು?
ಮೈದಾನದಲ್ಲಿ ಬಾಂಗ್ಲಾ ಬೌಲರ್ಗಳ ಎಸೆತಗಳನ್ನು ಪಂತ್ ಹಾಗೂ ಗಿಲ್ ಮನ ಬಂದಂತೆ ಚಚ್ಚುತ್ತಿದ್ದರು. ಇವರನ್ನು ಔಟ್ ಮಾಡುವುದು ಹೇಗೆ ಎಂದು ಬಾಂಗ್ಲಾ ಕ್ಯಾಪ್ಟನ್ಗೆ ತಲೆ ಕೆಟ್ಟು ಹೋಗಿತ್ತು. ಮೈದಾನದಲ್ಲಿ ತಮ್ಮ ಪ್ಲೇಯರ್ಸ್ ಅನ್ನು ಎಲ್ಲಿ ನಿಲ್ಲಿಸಿದರು ಪಂತ್ ಹಾಗೂ ಗಿಲ್ ಅವರ ಬ್ಯಾಟಿಂಗ್ ಇನ್ನಷ್ಟು ಪ್ರಬಲವಾಗತ್ತಿತ್ತು. ಇದರಿಂದ ಬೇಸರಗೊಂಡಿದ್ದ ಬಾಂಗ್ಲಾ ಆಟಗಾರರು ನಿಯಮದಂತೆ ಫೀಲ್ಡಿಂಗ್ ಸರಿಯಾಗಿ ನಿಂತಿರಲಿಲ್ಲ ಎನ್ನಲಾಗಿದೆ.
Rishabh Pant setting the field for Bangladesh. 😆🔥
– What a character, Pant. pic.twitter.com/sRL69LPgco
— Johns. (@CricCrazyJohns) September 21, 2024
ಈ ವೇಳೆ ಪಂತ್ ಸ್ಟ್ರೈಕ್ ಬಂದಾಗ ಲೆಗ್ಸೈಡ್ ಫ್ರಂಟ್ನಲ್ಲಿ ಫೀಲ್ಡರ್ ಯಾರು ಇರಲಿಲ್ಲ. ಹೀಗಾಗಿ ಆಫ್ಸೈಡ್ನಲ್ಲಿದ್ದ ಫೀಲ್ಡರ್ನನ್ನು ರಿಷಬ್ ಪಂತ್ ಕರೆದು, ಒಬ್ಬ ಫಿಲ್ಡರ್ ಇಲ್ಲಿ ಬಂದು ನಿಲ್ಲಬೇಕು (ಭಾಯ್ ಏಕ್ ಇದಾರ್ ಆಯಾಗ ಏಕ್) ಎಂದು ಹೇಳುತ್ತಾರೆ. ಆಗ ಪಂತ್ ಹೇಳಿದ ಸ್ಥಳಕ್ಕೆ ಓಡೋಡಿ ಬಂದು ಫೀಲ್ಡರ್ ನಿಲ್ಲುತ್ತಾನೆ. ಮತ್ತೆ ಪಂತ್, ಗಿಲ್ ಬಿರುಸಿನ ಬ್ಯಾಟಿಂಗ್ ಮುಂದುವರೆಯುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಅಭಿಮಾನಿಗಳು ಪಂತ್ರನ್ನ ಹಾಡಿ ಹೊಗಳುತ್ತಿದ್ದಾರೆ.
ಇನ್ನು ಟೀಮ್ ಇಂಡಿಯಾ ಈ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ಗೆ 287 ರನ್ಗಳನ್ನ ಗಳಿಸಿತ್ತು. ಆಗ ರೋಹಿತ್ ಶರ್ಮಾ ಡಿಕ್ಲೈರ್ ಮಾಡಿಕೊಂಡರು. ಸದ್ಯ ಭಾರತ 514 ರನ್ಗಳ ಮುನ್ನಡೆ ಸಾಧಿಸಿದ್ದು ಬಾಂಗ್ಲಾ ಗೆಲ್ಲಬೇಕು ಎಂದರೆ 515 ರನ್ಗಳನ್ನು ಗಳಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ