Advertisment

ಮದುವೆಯಾಗಲು ನಿರಾಕರಿಸಿದ ಬಾಯ್​ಫ್ರೆಂಡ್​​.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ

author-image
AS Harshith
Updated On
ಮದುವೆಯಾಗಲು ನಿರಾಕರಿಸಿದ ಬಾಯ್​ಫ್ರೆಂಡ್​​.. ಸಿಟ್ಟಿಗೆದ್ದು ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಪ್ರಿಯತಮೆ
Advertisment
  • ಚಾಕುವಿನಿಂದ ಲವ್ವರ್​ನ ಖಾಸಗಿ ಅಂಗ ಕತ್ತರಿಸಿದ ಪ್ರಿಯತಮೆ
  • ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ ವೈದ್ಯೆ
  • ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿ ಮೋಸ

ಮಹಿಳಾ ವೈದ್ಯೆಯೊಬ್ಬಳು ಮದುವೆಯಾಗಲು ನಿರಾಕರಿಸಿದನೆಂದು ಬಾಯ್​ಪ್ರೆಂಢ್​ನ ಖಾಸಗಿ ಅಂಗವನ್ನು ಕತ್ತರಿಸಿದ ಘಟನೆ ನಡೆದಿದೆ. ಬಿಹಾರದ ಸರಣ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

Advertisment

ವೈದ್ಯೆ ಮತ್ತು 30 ವರ್ಷದ ಬಾಯ್​​ಫ್ರೆಂಡ್‌ ಕಳೆದೆರೆಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರಂತೆ ಜುಲೈ 1 ರಂದು ಚಪ್ರಾ ಜಿಲ್ಲೆಯ ಕೋರ್ಟ್ ನಲ್ಲಿ ರಿಜಿಸ್ಟರ್ ಮದುವೆ ಆಗಬೇಕಾಗಿತ್ತು. ಆದರೆ ಮದುವೆಯ ದಿನ ಬಾಯ್​​ಫ್ರೆಂಡ್ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವೈದ್ಯೆ ಆತನ ಖಾಸಗಿ ಅಂಗ ಕತ್ತರಿಸಿದ್ದಾಳೆ.

ಮದುವೆಯಾಗಿ ನಂಬಿಸಿ ಮೋಸ ಮಾಡಿದ ಬಾಯ್​ಫ್ರೆಂಡನ್ನು ವೈದ್ಯೆ ನರ್ಸಿಂಗ್ ಹೋಮ್ ಗೆ ಕರೆಸಿಕೊಂಡಿದ್ದಾಳೆ.ಬಳಿಕ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ್ದಾಳೆ. ಸರಣ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಖಾಸಗಿ ಅಂಗ ಕತ್ತರಿಸಿ ವಿಕೃತಿ ಮೆರೆದಿದ್ದಾಳೆ.

ಇದನ್ನೂ ಓದಿ: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ಇಲ್ಲಿದೆ ನೋಡಿ ಮಾಹಿತಿ

ಪ್ರಿಯಕರ ಮದುವೆಯಾಗುವುದಾಗಿ ನಂಬಿಸಿ ವೈದ್ಯೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಕೈ ಕೊಟ್ಟಿದ್ದನು. ಮಾತ್ರವಲ್ಲದೆ, ಬಾಯ್ ಫ್ರೆಂಡ್‌ನಿಂದಾಗಿ ತನಗೆ 2 ಭಾರಿ ಅಬಾರ್ಷನ್ ಆಗಿತ್ತು, ಮದುವೆಯಾಗದೇ ಮೋಸ ಮಾಡಿದ್ದಕ್ಕೆ ಸಿಟ್ಟು ಬಂದಿತ್ತು ಎಂದು ವೈದ್ಯೆ ಹೇಳಿಕೊಂಡಿದ್ದಾಳೆ.

Advertisment

ಇದನ್ನೂ ಓದಿ: ಬ್ಯಾರಿಕೇಡ್​​​ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್​ ಸವಾರರು.. ಸ್ಥಳದಲ್ಲೇ ಸಾವು

ಕೊನೆಗೆ ಸಿಟ್ಟಿಗೆದ್ದು ವೈದ್ಯೆ ಚಾಕುವಿನಿಂದ ಬಾಯ್​​ಫ್ರೆಂಡ್ ನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ಸದ್ಯ ಮಹಿಳಾ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ. ರಕ್ತಸಿಕ್ತ ಚಾಕು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿಯ ಕರ್ನಾಟಕ ಭವನದ ನೌಕರ ಆತ್ಮಹತ್ಯೆ.. ಹುಣಸೆ ಮರಕ್ಕೆ ನೇಣುಬಿಗಿದುಕೊಂಡಂತೆ ಪತ್ತೆ

Advertisment

ಅತ್ತ ಸಂತ್ರಸ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಬಾಯ್ ಫ್ರೆಂಡ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಹೆಚ್ಚಿನ ಚಿಕಿತ್ಸೆಗೆ ಪಾಟ್ನಾಗೆ ರವಾನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment