Advertisment

‘ನೀನಂದ್ರೆ ನನಗಿಷ್ಟ’ ಪ್ರಪೋಸ್​ ಮಾಡೋದರಲ್ಲಿ ಹುಡಗರೇ ಫಸ್ಟ್​? ಹುಡುಗೀರು ಯಾಕೆ ಲಾಸ್ಟ್​?

author-image
Ganesh
Updated On
‘ನೀನಂದ್ರೆ ನನಗಿಷ್ಟ’ ಪ್ರಪೋಸ್​ ಮಾಡೋದರಲ್ಲಿ ಹುಡಗರೇ ಫಸ್ಟ್​? ಹುಡುಗೀರು ಯಾಕೆ ಲಾಸ್ಟ್​?
Advertisment
  • ಬಹುತೇಕ ಲವ್ ಕೇಸ್​ನಲ್ಲಿ ಹುಡುಗರೇ ಫಸ್ಟ್ ಪ್ರಪೋಸ್
  • ಹುಡುಗಿಯರು ಪ್ರೀತಿಯ ಭಾವನೆಯನ್ನು ಮುಚ್ಚಿಡ್ತಾರಾ?
  • ಈ ಬಗ್ಗೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ?

ಬಹುಶಃ ಪ್ರೀತಿಯ ತೊಳಲಾಟಗಳಿಗೆ ರೆಕ್ಕೆ ಪುಕ್ಕವಿದ್ದಷ್ಟು ಮತ್ಯಾವುದಕ್ಕೂ ಇಲ್ಲ. ಅಷ್ಟರ ಮಟ್ಟಿಗೆ ಮನಸ್ಸು ಬಿಸಿಲು ಕುದುರೆಯಂತೆ ಕುಣಿಯುತ್ತಿರುತ್ತದೆ. ಎರಡು ಹೃದಯಗಳು ಒಂದಾಗುವುದಕ್ಕೂ ಮೊದಲು ನಡೆಯುವ ಮಧುರ ಕ್ಷಣಗಳಿಗೆ, ಜೋಡಿ ಹಕ್ಕಿಯಾದ ಮೇಲೆ ತೇಲಾಡುವ ಮನಸ್ಸುಗಳಿಗೆ, ಪ್ರೇಮದ ಬಲೆಯಲ್ಲಿ ಸಿಕ್ಕಿ ಕಳೆದು ಹೋಗುವ ಹೃದಯಗಳಿಗೆ ಲಂಗರು ಹಾಕಲು ಲಗಾಮು ಇಲ್ಲ. ಅದೇನೇ ಇರಲಿ, ಪ್ರೀತಿಯಲ್ಲಿ ಬಿದ್ದ ಪ್ರೇಮ ಹಕ್ಕಿಗಳಿಗೆ ಇಲ್ಲೊಂದು ಪ್ರಶ್ನೆ ಇದೆ!

Advertisment

ಹುಡುಗರಿಗೆ ಯಾಕೆ ಈ ಉಸಾಬರಿ?
ನೀವು ಈಗಲೇ ಪ್ರೇಮಿಗಳನ್ನ ಕೇಳಿ ಬಿಡಿ! ಮೊದಲು ಪ್ರಪೋಸ್ ಮಾಡಿದ್ದು ನೀನಾ? ಅವಳಾ?. ಮೊದಲು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದು ಯಾರು ಎಂದು. ಬಹುತೇಕ ಲವ್​ ಬರ್ಡ್ಸ್​ ಹೇಳೋದು ಹುಡುಗನ ಹೆಸರು. ಜಗತ್ತಿನಲ್ಲಿ ನಡೆಯುವ ಲಕ್ಷಾಂತರ ಪ್ರೇಮ ಪ್ರಕರಣಗಳಲ್ಲಿ ಮೊದಲು ಪ್ರಪೋಸ್ ಮಾಡಿರೋದು ಹುಡುಗರೇ ಅಂತೆ. ಆದರೂ, ಇಂದು ಕಾಲ ಬದಲಾಗಿದೆ! ಹೆಣ್ಮಕ್ಕಳು ಕೂಡ ಲವ್ ಪ್ರಪೋಸ್ ಮಾಡಲು ಹಿಂದೇಟು ಹಾಕಲ್ಲ. ಆದರೂ ಹೆಚ್ಚಾಗಿ ಮೊದಲು ಪ್ರಪೋಸ್ ಮಾಡೋದು ಗಂಡು ಮಕ್ಕಳೇ.

ಇದನ್ನೂ ಓದಿ:ಬಿಗ್​ಬಾಸ್​ ಮನೆಯಿಂದ ರಂಜಿತ್, ಜಗದೀಶ್ ಔಟ್​; ಗಲಾಟೆಗೆ ಕಾರಣ ಇಲ್ಲಿದೆ..!

ಎಂದಾದರೂ ಯೋಚನೆ ಮಾಡಿದ್ದೀರಾ?
ಪ್ರೀತಿ ಮಾಡುತ್ತಿದ್ದರೂ ಹುಡುಗಿಯರು ಏಕೆ ಮೊದಲು ಪ್ರಪೋಸ್ ಮಾಡಲ್ಲ ಅಂತಾ ಎಂದಾದರೂ ಯೋಚಿಸಿದ್ದೀರಾ? ಹೆಚ್ಚಿನ ಹುಡುಗಿಯರು ಪ್ರೇಮ ನಿವೇದನೆಯನ್ನ ಮೊದಲ ಬಾರಿಗೆ ವ್ಯಕ್ತಪಡಿಸಲು ಹಿಂದೇಟು ಹಾಕ್ತಾರೆ. ಕೆಲವು ತಜ್ಞರ ಪ್ರಕಾರ.. ಈ ವಿಚಾರದಲ್ಲಿ ಹುಡುಗಿಗೆ ಪ್ರೀತಿಯಾಗಿದ್ದರೂ ಹುಡುಗನೇ ಆ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತಾ ಬಯಸುತ್ತಾಳಂತೆ. ಅದಕ್ಕೆ ಆಸಕ್ತಿದಾಯಕ ಕಾರಣಗಳು ಹೀಗಿವೆ.

Advertisment

ನಿರಾಕರಣೆ ಬಯಸಲ್ಲ
ಪ್ರೀತಿಯ ನಿವೇದನೆ ತೋಡಿಕೊಂಡಾಗ ಆತ ನಿರಾಕರಣೆ ಮಾಡಿಬಿಟ್ಟರೆ ಎಂಬ ಅಳುಕು ಅವರಲ್ಲಿ ಇರುತ್ತದೆ. ಹೆಣ್ಮಕ್ಕಳು ಯಾವತ್ತೂ ಈ ನಿರಾಕರಣೆಯನ್ನು ಬಯಸಲ್ಲ. ಒಂದು ವೇಳೆ ಹುಡುಗ ಲವ್ ಪ್ರಪೋಸಲ್ ಒಪ್ಪಿಕೊಂಡಿಲ್ಲ ಅಂದರೆ ಅದಕ್ಕಿಂತ ದೊಡ್ಡ ಆಘಾತ ಮತ್ತೊಂದಿಲ್ಲ ಎಂಬ ಭಾವನೆ ಹೆಣ್ಮಕ್ಕಳದ್ದಾಗಿರುತ್ತದೆ.

ಆಘಾತದ ಭಯ
ಹುಡುಗಿ ಮೊದಲು ಹುಡುಗನಿಗೆ ಪ್ರಪೋಸ್ ಮಾಡುವುದನ್ನು ತಪ್ಪಿಸಿಕೊಳ್ತಾಳೆ. ಹುಡುಗಿಯೇ ಪ್ರಪೋಸ್ ಮಾಡಿದರೆ ಆತ ನನ್ನನ್ನು ಗೌರವಿಸುತ್ತಾನೋ ಇಲ್ಲವೋ ಎಂಬ ಭಯ ಇರುತ್ತದೆಯಂತೆ.

ಇದನ್ನೂ ಓದಿ:Breaking: ಬಿಗ್​​ ಬಾಸ್​ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್​ ಮತ್ತು ರಂಜಿತ್​ ಔಟ್​

Advertisment

ವಿಶೇಷ ಅನುಭವ
ಹುಡುಗಿಯರು ಯಾವಾಗಲೂ ವಿಶೇಷ ಭಾವನೆ ಹೊಂದಲು ಬಯಸುತ್ತಾರೆ. ತನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಆಕೆ ಭಾವಿಸ್ತಾಳೆ. ಪ್ರತಿಯೊಬ್ಬ ಹೆಣ್ಮಕ್ಕಳು ಕೂಡ ಇಂಥ ಭಾವನೆ ಹೊಂದಿರುತ್ತಾರೆ. ಜೊತೆಗೆ ತಮ್ಮ ಆದ್ಯತೆಯನ್ನು ಬಯಸುತ್ತಾರೆ. ಅದಕ್ಕಾಗಿಯೇ ಮೊದಲು ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿಕೊಳ್ತಾರೆ.

ಆಕೆ ತುಂಬಾ ಬೋಲ್ಡ್ ಪಟ್ಟ
ನೇರವಾಗಿ ಮಾತನಾಡುವ ಹುಡುಗಿ ಕಂಡರೆ ಅವಳು ಸಖತ್ ಬೋಲ್ಡ್ ಅನ್ನೋರು ಜಾಸ್ತಿ. ಈ ಹಣೆಪಟ್ಟಿಯಿಂದ ದೂರು ಇರಲು ಕೆಲವು ಹೆಣ್ಮಕ್ಕಳು ಬಯಸುತ್ತಾರಂತೆ. ಮೊದಲು ಪ್ರಪೋಸ್ ಮಾಡುವ ಹುಡುಗಿಯರಿಗೆ ಬೋಲ್ಡ್ ಎಂಬ ಟ್ಯಾಗ್ ನೀಡಲಾಗುತ್ತದೆ. ಈ ರೀತಿಯ ಆಲೋಚನೆಯನ್ನು ಯಾವುದೇ ಹುಡುಗಿ ಸಹಿಸುವುದಿಲ್ಲ. ಅದಕ್ಕಾಗಿಯೇ ಅವಳು ಯಾವಾಗಲೂ ಸುಳಿವುಗಳನ್ನು ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುತ್ತಾಳೆ.

ಹತಾಶ ಎಂಬ ಟ್ಯಾಗ್ ಬೇಡ
ಹುಡುಗರು ಯಾವಾಗಲೂ ತಮ್ಮ ಭಾವನೆಗಳನ್ನು ಹುಡುಗಿಯರಿಗೆ ಹೇಳುತ್ತಿರುತ್ತಾರೆ. ಒಬ್ಬ ಹುಡುಗ ತನ್ನ ಪ್ರೀತಿಯನ್ನು ಪಡೆಯಲು ವಿಭಿನ್ನ ಕೆಲಸಗಳನ್ನು ಮಾಡಿದರೆ, ಆತನನ್ನು ರೊಮ್ಯಾಂಟಿಕ್ ಎಂದು ಕರೆಯುತ್ತಾರೆ. ಆದರೆ ಹುಡುಗಿ ಅದೇ ಕೆಲಸ ಮಾಡಿದ್ರೆ ಜನ ಆಕೆಯನ್ನು ಬೇರೆ ಬೇರೆ ರೀತಿಯಲ್ಲಿ ನಿಂದಿಸುವ ಪದಗಳಿಂದ ಜನ ನೋಡ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಹುಡುಗಿಯರು ಭಾವನೆಗಳನ್ನು ಮೊದಲು ವ್ಯಕ್ತಪಡಿಸುವುದಿಲ್ಲ.

Advertisment

ಇದನ್ನೂ ಓದಿ:BBK11; ರಣರಂಗವಾದ ಮನೆ.. ಲಾಯರ್ ಜಗದೀಶ್​- ತ್ರಿವಿಕ್ರಮ್, ಮಂಜು, ಮಾನಸ ನಡುವೆ ಗಲಾಟೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment