newsfirstkannada.com

ಕಲರ್ ಕ್ಯಾಂಡಿ, ಗೋಬಿ ಬಳಿಕ ಮತ್ತೊಂದು ಆಪತ್ತು.. ಈ ಟೀ ಪುಡಿಗಳಿಂದಲೂ ಜೀವಕ್ಕೆ ಇದೆ ಸಂಚಕಾರ..!

Share :

Published June 6, 2024 at 9:58am

    ಕಡಿಮೆ ಬೆಲೆಯಲ್ಲಿ ಸಿಗುತ್ತೆಂದು ಟೀ ಕುಡಿದ್ರೆ ಪ್ರಾಣಕ್ಕೆ ಅಪಾಯ

    ತನ್ನ ಬ್ರಾಂಡ್ ಮೂಲ ಉಳಿಸಿಕೊಳ್ಳುವುದು ಮಾಲೀಕರ ಕೆಲಸ

    ಚಹಾ ಪುಡಿಯಷ್ಟೇ ಅಲ್ಲ, ಸಾಂಬಾರು ಪುಡಿಗಳಿಂದಲೂ ಆಪತ್ತು

ಬೆಂಗಳೂರು: ಬೆಳಗ್ಗೆ ಎದ್ದು ಮೊದಲು ಕುಡಿಯುವುದೇ ಚಹಾ. ಇದನ್ನು ಕುಡಿದ ಮೇಲೆ ಸಾಕಷ್ಟು ಜನರು ಮುಂದಿನ ಕೆಲಸ ಮಾಡಲು ಶುರು ಮಾಡ್ತಾರೆ. ಮನೆಯಲ್ಲಿ ಟೀ ಕುಡಿದಿಲ್ಲ ಎಂದರೂ ಬಿದಿ ಬದಿಯ ಅಂಗಡಿಗಳಲ್ಲಿ ಕುಡಿಯುವುದು ಅಭ್ಯಾಸ ಆಗಿ ಬಿಟ್ಟಿದೆ. ಈ ರೀತಿ ಹೊರಗೆ ಟೀ ಕುಡಿಯುವ ಮುನ್ನ ಕೊಂಚ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ ಚಹಾಗೆ ಹಾಕುವ ಪುಡಿಗಳಿಂದಲೂ ನಮ್ಮ ಜೀವಕ್ಕೆ ಆಪತ್ತು ಕಾದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುವ ಟೀ ಪುಡಿಗಳಿಂದಲೂ ಅಪಾಯ ಕಾದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಚಹಾ ಸಿಗುತ್ತದೆ ಎಂದು ಕುಡಿದರೆ ಪ್ರಾಣಕ್ಕೆ ಆಪತ್ತು ಇದೆ. ಟೀ ಪುಡಿ ಅಷ್ಟೇ ಅಲ್ಲ, ಸಾಂಬಾರ್ ಪುಡಿಗಳಿಂದಲೂ ಭಾರೀ ಅಪಾಯ ನಮಗೆಲ್ಲ ಕಾದಿದೆ. ಹೀಗಂತ ಹೇಳುತ್ತಿರುವುದು ನಾವಲ್ಲ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಹೇಳಿದ್ದಾರೆ.

ಇದನ್ನೂ ಓದಿ: ಟ್ರಕ್ಕಿಂಗ್​ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ

ಟೀ ಪುಡಿಗಳ ಪ್ರತಿಷ್ಠಿತ ಕಂಪನಿಗಳಿಂದಲೇ ಸದ್ಯಕ್ಕೆ ಯಡವಟ್ಟು ಆಗುತ್ತಿದೆ. ಇದು ಒಂದೋ, ಎರಡೋ ಕಂಪನಿಗಳಿಂದ ಈ ರೀತಿ ಆಗುತ್ತಿಲ್ಲ. 10ಕ್ಕೂ ಹೆಚ್ಚು ಚಹಾ ಕಂಪನಿಗಳಿಂದ ಸಮಸ್ಯೆ ಆಗುತ್ತಿದೆ. ಯಾವುದೇ ಪ್ರಾಡಕ್ಟ್​ ಬ್ರ್ಯಾಂಡ್​ ಹೆಸರಲ್ಲಿ ರಿಜಿಸ್ಟರ್ ಆಗುವಾಗ ಯಾವ ಪ್ರಮಾಣದಲ್ಲಿ ಅದರಲ್ಲಿ ಸಾಮಾಗ್ರಿಗಳನ್ನು, ಕೆಮಿಕಲ್​ಗಳನ್ನ, ಕಲರ್​ಗಳನ್ನ ಹಾಕಲಾಗುತ್ತದೆ ನಮೂದು ಮಾಡಿಸುತ್ತಾರೆ. ಆದರೆ ಮಾಲೀಕರು ತನ್ನ ಬ್ರ್ಯಾಂಡ್​ ಮೂಲವನ್ನು ಉಳಿಸಿಕೊಳ್ಳುವುದು ಕರ್ತವ್ಯ ಆಗಿರುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬ್ರ್ಯಾಂಡ್​ನ ವಸ್ತು ಕಳಪೆ ಆಗಿ ಬಿಡುತ್ತದೆ. ಇಂತಹ ಬ್ರ್ಯಾಂಡ್​ ವಸ್ತುಗಳನ್ನು ಬಳಸುವುದು ಅಪಾಯ ಆಗಿರುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲರ್ ಕ್ಯಾಂಡಿ, ಗೋಬಿ ಬಳಿಕ ಮತ್ತೊಂದು ಆಪತ್ತು.. ಈ ಟೀ ಪುಡಿಗಳಿಂದಲೂ ಜೀವಕ್ಕೆ ಇದೆ ಸಂಚಕಾರ..!

https://newsfirstlive.com/wp-content/uploads/2024/06/TEA-1.jpg

Load More