newsfirstkannada.com

ಭಾರತದಲ್ಲಿ ಸ್ತನ ಕ್ಯಾನ್ಸರ್​​​ ಹೆಚ್ಚಳ.. ಹೆಣ್ಣುಮಕ್ಕಳು ಓದಲೇಬೇಕಾದ ಸ್ಟೋರಿ ಇದು!

Share :

Published March 26, 2024 at 5:59am

    ಮಹಿಳೆಯರೇ ಎಚ್ಚರ! ಸ್ತನ ಕ್ಯಾನ್ಸರ್ ಬರೋ ಮುನ್ನ ಎಚ್ಚರವಹಿಸಿ

    ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಏಕೆ ಗೊತ್ತಾ?

    ಸ್ತನ ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಹಾರ ಕೊರತೆಯಿಂದ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಆಹಾರ ಕ್ರಮದಲ್ಲಿ ಬದಲಾವಣೆ, ಅತಿಯಾದ ಆಯಾಸ, ನಿದ್ರಾಹೀನತೆ ಹೀಗೆ ಹಲವಾರು ಸಮಸ್ಯೆಗಳು ಎಲ್ಲರನ್ನು ಕಾಡುತ್ತಲೇ ಇದೆ. ಅತೀ ಭಯಾನಕ ರೋಗವಾಗಿರೋ ಕ್ಯಾನ್ಸರ್​​ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ: VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

ಅದರಲ್ಲೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮೂಲಕ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು, ಇತ್ತೀಚಿನ ದಿನಗಳಲ್ಲಿ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿಯ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್​ ಹೆಚ್ಚಿನ ರೀತಿಯಲ್ಲಿ ವರದಿಯಾಗುತ್ತಿವೆ ಎಂದು ICMR ಅಧ್ಯಯನದ ಮೂಲಕ ತಿಳಿದು ಬಂದಿದೆ. ಇನ್ನು, 2025ರ ವೇಳೆಗೆ ಭಾರತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗಣನೀಯ ಏರಿಕೆಯಾಗಲಿದೆ ಎಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಗಂಭೀರ ಕಾಯಿಲೆಯು ಯಾರಿಗೂ ಬಾರದಿರಲಿ ಎಂದುಕೊಳ್ಳುವವರೇ ಹೆಚ್ಚು. ಆದರೆ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಪ್ರಮಾಣವು ಹೆಚ್ಚಳವಾಗುತ್ತಿದೆ ಎನ್ನಲಾಗಿದೆ. ಈ ರೋಗ ಲಕ್ಷಣವು ಕಂಡು ಬಂದ ತಕ್ಷಣವೇ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಮಾರಕ ಕಾಯಿಲೆಯಿಂದ ಗುಣಮುಖರಾಗಬಹುದು.

ಆದರೆ ಮಹಿಳೆಯಲ್ಲಿ ಈ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಏಕೆ?

ಮಹಿಳೆಯರು ಅತಿಯಾದ ಮದ್ಯಪಾನ ಮತ್ತು ಧೂಮಪಾನದಂತಹ ಸೇವನೆಯಿಂದ ಈ ಸ್ತನ ಕ್ಯಾನ್ಸರ್​ ಬರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಮೊದಲ ಲಕ್ಷಣ ಎಂದರೆ ಸ್ತನಗಳು ಊದಿಕೊಳ್ಳುವುದು. ಬಳಿಕ ಆ ಸ್ತನಗಳ ಸುತ್ತ ಕೆಂಪು ಬಣ್ಣದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸ್ತನದ ಸುತ್ತ ಮುತ್ತ ಚರ್ಮ ಸಿಪ್ಪೆ ಸುಲಿದುಕೊಳ್ಳುತ್ತದೆ. ಇದಲ್ಲದೇ ಸ್ತನದ ಕಡೆ ಇದ್ದಕ್ಕಿದ್ದಂತೆ ಚರ್ಮ ಗಟ್ಟಿಯಾದಂತೆ ಅನುಭವ ಆಗುತ್ತದೆ. ಇದಲ್ಲದೇ ಈ ರೋಗವು ಅನುವಂಶಿಕವಾಗಿ ಬರಬಹುದು. ದಿನನಿತ್ಯದ ಆಹಾದ ಶೈಲಿಯಲ್ಲಿ ಬದಲಾವಣೆ ಹಾಗೂ ಅತಿಯಾದ ಡಯಟ್ ಮಾಡುವುದು ಕೂಡ ಇದಕ್ಕೆ ಮುಖ್ಯ ಕಾರಣ. ಮುಖ್ಯವಾಗಿ ಮಹಿಳೆಯರು ಮಗುವಿಗೆ ಹಾಲು ಉಣಿಸದೇ ಇರುವುದು. ಹಾರ್ಮೋನ್​ ಬದಲಾವಣೆಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಇಂತಹ ಅಂಶಗಳಿಂದ ಈ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯು ಅಧಿಕವಾಗಿರುತ್ತದೆ.

ಈ ರೋಗವು ಬಾರದಂತೆ ಮಹಿಳೆಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳೇನು?

ಈ ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಕೆಲವೊಂದು ಕ್ರಮಗಳನ್ನು ಈಗಿನಿಂದಲೇ ಅನುಸರಿಸಿದರೇ ಒಳ್ಳೆಯದು. ಅದು ಹೇಗೆಂದರೆ ನಾವು ಸೇವಿಸುವ ಆಹಾರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಮಾಡಿಕೊಳ್ಳಬೇಕು. ಸೊಪ್ಪು, ತರಕಾರಿಗಳ ಸೇವನೆಯಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಪ್ರತಿದಿನ ಸರಿಯಾದ ಸಮಯಲ್ಲಿ ನಿದ್ದೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಕನಿಷ್ಠವಾಗಿ 7 ರಿಂದ 8 ಗಂಟೆಗಳ ಕಾಲ ದೇಹಕ್ಕೆ ವಿಶ್ರಾಂತಿ ನೀಡುವುದು ತುಂಬಾ ಮುಖ್ಯ. ಇದರ ಜೊತೆಗೆ ದಿನನಿತ್ಯವು ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಒಳ್ಳೆಯದು. ಇದರಿಂದ ಮನಸ್ಸಿಗೆ ಶಾಂತಿ ಸಿಗುವ ಜೊತೆಗೆ ನಮ್ಮ ದೇಹವನ್ನು ಒಂದೇ ಕಡೆ ಕೇಂದ್ರೀಕರಣ ಮಾಡಬಹುದಾಗಿದೆ. ಧೂಮಪಾನ, ಮದ್ಯಪಾನದ ಸೇವನೆ ಮಾಡುವುದು ಅಥವಾ ಅದರ ವಾಸನೆಯಿಂದ ದೂರವಿರುವ ಮೂಲಕ ಈ ಕಾಯಿಲೆ ಬರುವ ಮುಂಚಿತವಾಗಿ ಎಚ್ಚರಿಕೆ ಕ್ರಮಗಳನ್ನು ವಹಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದಲ್ಲಿ ಸ್ತನ ಕ್ಯಾನ್ಸರ್​​​ ಹೆಚ್ಚಳ.. ಹೆಣ್ಣುಮಕ್ಕಳು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/03/breast-cancer.jpg

Load More