Advertisment

ದಲ್ಲಾಳಿಗಳ ಕಳ್ಳಾಟ.. ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ

author-image
AS Harshith
Updated On
ದಲ್ಲಾಳಿಗಳ ಕಳ್ಳಾಟ.. ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ
Advertisment
  • ದಲ್ಲಾಳಿಗಳ ಕಾಟದಿಂದ ಬೇಸತ್ತ ನಾಲ್ವರು ರೈತರು
  • 1 ಕೋಟಿ 93 ಲಕ್ಷ ರೂಪಾಯಿಯನ್ನ ಬಾಕಿ ಉಳಿಸಿಕೊಂಡ ದಲ್ಲಾಳಿಗಳು
  • ರೈತರ ಹಣವನ್ನೇ 8 ತಿಂಗಳಿಂದ ನೀಡದೆ ಸತಾಯಿಸುತ್ತಿರುವ ದಲ್ಲಾಳಿಗಳು

ಹೊಲದಲ್ಲಿ ಬೆಳೆದ ಮೆಣಸಿನಕಾಯಿ ಮಾರಾಟ ಮಾಡಿ ಜೀವನ ನಡೆಸೋ ಕನಸು ಕಟ್ಟಿದ್ದ ರೈತರಿಗೆ ದಲ್ಲಾಳಿಗಳ ಕಳ್ಳಾಟ ಖಾರವಾಗಿ ಪರಣಿಮಸಿದೆ. ಲಕ್ಷ ಲಕ್ಷ ಹಣ ಬಾಕಿ ಉಳಿಸಿಕೊಂಡು ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದ ದಲ್ಲಾಳಿಗಳು, ನಾಲ್ವರು ರೈತರನ್ನ ವಿಷ ಸೇವಿಸುವಂತೆ ಮಾಡಿದೆ.

Advertisment

ಅನ್ನದಾತ ದೇಶದ ಬೆನ್ನೆಲುಬು ಅಂತಾರೆ ಆದ್ರೆ ಸದ್ಯ ಇದೇ ಅನ್ನದಾತ ದಲ್ಲಾಳಿಗಳ ಮುಂದೆ ಅಂಗಲಾಚೋ ದುಸ್ಥಿತಿ ಎದುರಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ದಲ್ಲಾಳಿಗಳ ಕಾಟದಿಂದ ಬೇಸತ್ತು ನಾಲ್ವರು ರೈತರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.

ಆತ್ಮಹತ್ಯೆ ಹಾದಿ ಹಿಡಿದ ರೈತರು

ದಲ್ಲಾಳಿಗಳು ಹಣ ನೀಡದಕ್ಕೆ ಬೇಸತ್ತ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ನಾಲ್ವರು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಈ ರೈತರ 1 ಕೋಟಿ 93 ಲಕ್ಷ ರೂಪಾಯಿಯನ್ನ ದಲ್ಲಾಳಿಗಳು ಬಾಕಿ ಉಳಿಸಿಕೊಂಡಿದ್ರು. ಕಳೆದ 18 ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದ್ರು. ಇದರಿಂದ ನೊಂದ ರೈತರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ: ‘ಡಿಕೆಶಿ​ಗೆ ಸಿಎಂ ಆಗೋ ಯೋಗವಿದೆ..’ ಕುತೂಹಲದ ಜೊತೆಗೆ ಚರ್ಚೆಗೆ ಕಾರಣವಾಯ್ತು ಮತ್ತೊಬ್ಬ ಸ್ವಾಮೀಜಿ ಹೇಳಿಕೆ

Advertisment

ರುದ್ರೇಶ್, ಶೇಖರಪ್ಪ, ಹನುಮಂತ, ಕೋಣೇರಪ್ಪ ಎಂಬ ನಾಲ್ವರು ರೈತರು ಕಳೆದ ವರ್ಷ ಅಗ್ರಿಗ್ರೇಡ್ ಕಂಪನಿಯ ದಲ್ಲಾಳಿಗಳ ಮೂಲಕ ಮೆಣಸಿನಕಾಯಿ ಮಾರಾಟ ಮಾಡಿದ್ರು. ಆಶಾರಾಣಿ, ಅಶೋಕ್​ ಕುಮಾರ್, ಶಿವಮೂರ್ತಿ ಎಂಬುವವರು ಈ ಮೆಣಸಿನಕಾಯಿಯನ್ನ ಖರೀದಿ ಮಾಡಿದ್ರು. ಆದ್ರೆ ಮೆಣಸಿನಕಾಯಿ ಮಾರಾಟದ 1 ಕೋಟಿ 93 ಲಕ್ಷ ರೂಪಾಯಿ ಹಣವನ್ನು ದಲ್ಲಾಳಿಗಳು ಬಾಕಿ ಉಳಿಸಿಕೊಂಡಿದ್ರು ಅಂತ ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು

ಇನ್ನೂ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ನಾಲ್ವರು ರೈತರನ್ನು ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗ್ತಿದೆ. ದಲ್ಲಾಳಿಗಳು ಬಾಕಿ ಹಣ ನೀಡದಿದ್ದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment