newsfirstkannada.com

ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

Share :

Published May 10, 2024 at 10:45am

Update May 10, 2024 at 11:21am

  ಕಳೆದ 20 ವರ್ಷಗಳಿಂದ ಜಮೀನು ವಿಚಾರವಾಗಿ ಜಗಳ

  ಮೊದಲಿಗೆ ಎಣ್ಣೆ ಪಾರ್ಟಿ ಮಾಡಿ ನಂತರ ಕೊಂದೇ ಬಿಟ್ಟ ಮಗ

  ಕೊಲೆ ಮಾಡಲು ಕಾರಣವೇನು ಗೊತ್ತಾ? ಈ ಘಟನೆ ನಡೆದಿದ್ದೆಲ್ಲಿ?

ಚಿಕ್ಕೋಡಿ: ಆಸ್ತಿ ವಿಚಾರವಾಗಿ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ದಬದಬಹಟ್ಟಿ ಗ್ರಾಮದ ಕೇಶವ ಬೊಸಲೆ (47) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಖಂಡೊಬಾ ಬೊಸಲೆ (27) ಕೊಲೆ ಮಾಡಿದ ವ್ಯಕ್ತಿ. ಆರೋಪಿ ಹಾಗೂ ಕೊಲೆಯಾದ ದುರ್ದೈವಿ ದಬದಬಹಟ್ಟಿ ಗ್ರಾಮದ ನಿವಾಸಿಗಳು. ಕಳೆದ 20 ವರ್ಷಗಳಿಂದ ಜಮೀನಿನ ಸಲುವಾಗಿ ಚಿಕ್ಕಪ್ಪ ಹಾಗೂ ಮಗನ ಜೊತೆ ಜಗಳವಾಡುತ್ತಾ ಬಂದಿದ್ದಾರೆ. ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಲೆ ಇತ್ತು.

ಇದನ್ನೂ ಓದಿ: ವಾರೆ ವ್ಹಾ.. ಅಂತು ಇಂತು ಬಂತು ಹೊಸ ಬಜಾಜ್​ ಪಲ್ಸರ್​ NS400Z ಬೈಕ್​.. ಫೀಚರ್ಸ್​ ಅದ್ಭುತ! ಬೆಲೆ ಎಷ್ಟಿದೆ?

ನಿನ್ನೆ ಇಬ್ಬರು ದಾಯಾದಿಗಳು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ನಿನ್ನೆ ಮದ್ಯ ಸೇವನೆ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಖಂಡೊಬಾ ಬೊಸಲೆ (27) ಕೊಲೆ ಮಾಡಿದ ವ್ಯಕ್ತಿ

ಇದನ್ನೂ ಓದಿ: ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ಕುರಿಗಾಯಿ ಸಾವು.. ಅನ್ಯಾಯವಾಗಿ ಸಾವನ್ನಪ್ಪಿದ 55 ವರ್ಷದ ವ್ಯಕ್ತಿ

ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆ ಐಗಳಿಯನ್ನು ಪೋಲಿಸರು ಬಂಧಿಸಿದ್ದಾರೆ. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

https://newsfirstlive.com/wp-content/uploads/2024/05/Kandoba-baosale.jpg

Load More