Advertisment

‘ಬೃಂದಾವನ’ ನಟನಿಗೆ ಒಲಿದ ಲಕ್; ಅಭಿಮಾನಿಗಳಿಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ವರುಣ್​ ಆರಾಧ್ಯ..!

author-image
Veena Gangani
Updated On
ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್​​ ಟ್ವಿಸ್ಟ್​​! ಇನ್​​ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್​
Advertisment
  • ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದ ವರುಣ್​ ಆರಾಧ್ಯ
  • ವರುಣ್​ ಆರಾಧ್ಯ ಇದ್ದರೆ ಸೀರಿಯಲ್​ ನೋಡಲ್ಲ ಎಂದು ಹೇಳಿದ್ದ ವೀಕ್ಷಕರು
  • ಸೀರಿಯಲ್​ ಲೋಕಕ್ಕೆ ಕಾಲಿಟ್ಟಿದ್ದ ವರುಣ್​ ಆರಾಧ್ಯ ಈಗ ಖಡಕ್​ ಹೀರೋ

ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ ತನ್ನದೆಯಾದ ಅಭಿಮಾನಿ ಬಳಗವನ್ನು ಹೊಂದಿತ್ತು. ವೀಕ್ಷಕರು ಈ ಕೂಡು ಕುಟುಂಬವನ್ನು ಒಳ್ಳೆ ರೀತಿಯಲ್ಲಿ ಸ್ವೀಕರಿಸಿದ್ದರು. 36 ಜನರ ತುಂಬು ಕುಟುಂಬದ ಸ್ಟೋರಿಯ ಹೊಸ ರೀತಿಯಲ್ಲಿ ತೋರಿಸವ ಪ್ರಯತ್ನದಲ್ಲಿತ್ತು ಬೃಂದಾವನ ತಂಡ. ಆದರೆ ಲಾಂಚ್​ ಆದ ಕೆಲವೇ ಅವಧಿಯಲ್ಲಿ ಧಾರಾವಾಹಿಯ ಅಂತ್ಯ ಕಂಡಿತ್ತು.

Advertisment

ಇದನ್ನೂ ಓದಿ:ವೀಕ್ಷಕರಿಗೆ ಬ್ಯಾಡ್​ನ್ಯೂಸ್​ ಕೊಟ್ಟ ಬೃಂದಾವನ ಸೀರಿಯಲ್​​.. ಅಂಥದ್ದೇನಾಯ್ತು?

ಇದೇ ಸೀರಿಯಲ್​ ಮೂಲಕ ನಟ ವರುಣ್​ ಆರಾಧ್ಯ ಖ್ಯಾತಿ ಪಡೆದುಕೊಂಡರು. ಬೃಂದಾವನ ಸೀರಿಯಲ್​ಗೆ ಎಂಟ್ರಿ ಕೊಟ್ಟ ಬಳಿಕ ತನ್ನದೇಯಾದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ದೊಡ್ಡ ಕನಸ್ಸನ್ನು ಇಟ್ಟುಕೊಂಡು ಸೀರಿಯಲ್​ ಲೋಕಕ್ಕೆ ಕಾಲಿಟ್ಟಿದ್ದ ವರುಣ್​ ಆರಾಧ್ಯ ಈಗ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಜನರು ಅದು ಎಷ್ಟೇ ನೆಗೆಟಿವ್ ಆಗಿ ಮಾತಾಡಿದ್ದರೂ ಅದನ್ನು ಪಾಸಿಟಿವ್​ ರೀತಿಯಲ್ಲಿ ತೆಗೆದುಕೊಂಡು ಮುಂದೆ ಸಾಗುತ್ತಿರೋ ವರುಣ್​ ಆರಾಧ್ಯ ಈಗ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್​​ ಮೂಲಕ ತಮ್ಮದೇ ಆದ ಹವಾ ಕ್ರಿಯೇಟ್‌ ಮಾಡಿದ್ದ ವರುಣ್ ಆರಾಧ್ಯ ಅವರು ಸೂರ್ಯ ಎಂಬ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ವರುಣ್ ಆರಾಧ್ಯ ಅವರೇ ಯ್ಯೂಟೂಬ್ ಚಾನೆಲ್​ನಲ್ಲಿ ರಿವೀಲ್ ಮಾಡಿದ್ದಾರೆ.

Advertisment

ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್‌ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?

ಸೋಷಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ವರುಣ್ ಆರಾಧ್ಯ ಯಾರು ಅನ್ನೋದು ಚೆನ್ನಾಗಿ ಗೊತ್ತಿದೆ. ರೀಲ್ಸ್ ವಿಡಿಯೋಸ್​​ ಮೂಲಕ ವರುಣ್ ಸೋಷಿಯಲ್ ಮೀಡಿಯಾದ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ವರುಣ್ ಆರಾಧ್ಯ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಮಿಕ್ಸ್ ಒಪಿನಿಯನ್ ಇದೆ. ಅವರ ವೈಯಕ್ತಿಕ ಕಾರಣಗಳಾಗಿರಬಹುದು ಅಥವಾ ಬೇರೆ ಬೇರೆ ವಿಚಾರಗಳಲ್ಲಿ ಅಭಿಮಾನಿಗಳು ಎಷ್ಟಿದ್ದಾರೋ ಅಷ್ಟೇ ವರುಣ್ ಅವರನ್ನ ಇಷ್ಟ ಪಡದೇ ಇರುವವರೂ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment