/newsfirstlive-kannada/media/post_attachments/wp-content/uploads/2024/08/BSNL-2.jpg)
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ನೂತನ ಪ್ಲಾನ್ ಮೂಲಕ ಗ್ರಾಹಕರು 105 ದಿನಗಳವರೆಗೆ 2ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಅಂದಹಾಗೆಯೇ ಬಿಎಸ್ಎನ್ಎಲ್ ಪರಿಚಯಿಸಿರುವ ಈ ಪ್ಲಾನ್ನಲ್ಲಿ ಬೇರೇನಿದೆ? ತಿಳಿಯೋಣ.
ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ವಿಸ್ಕೃತ ವ್ಯಾಲಿಡಿಟಿಯನ್ನು ನೀಡುವ ಸಲುವಾಗಿ 666 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ನೂತನ ಪ್ಲಾನ್ 105 ದಿನಗಳ ಅವಧಿಯವರೆಗೆ ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸಲಿದೆ. ಹೆಚ್ಚುವರಿಯಾಗಿ ಬಳಕೆದಾರರು ಪ್ರತಿದಿನ 100 ಉಚಿತ ಎಸ್ಎಮ್ಎಸ್ ಪ್ರಯೋಜನವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ: Robotaxi: ಸ್ಟೀರಿಂಗ್ ಇಲ್ಲ, ಪೆಡಲ್ ಇಲ್ಲ.. AI ಚಾಲಿತ ರೋಬೋಟ್ಯಾಕ್ಸಿ ಪರಿಚಯಿಸಿದ ಎಲಾನ್ ಮಸ್ಕ್
ಗ್ರಾಹಕರಿಗಾಗಿ ಈ ಪ್ಲಾನ್ ಮೂಲಕ ಸಾಕಷ್ಟು ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದೆ. 105 ದಿನಗಳವರೆಗೆ ಒಟ್ಟು 210 ಜಿಬಿ ಡೇಟಾ ನೀಡುತ್ತಿದೆ. ಅಂದರೆ ದಿನಕ್ಕೆ 2ಜಿಬಿಯಷ್ಟು ಬಳಸಬಹುದಾಗಿದೆ.
ಇದನ್ನೂ ಓದಿ: Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ
ಸದ್ಯ ಖಾಸಗಿ ಟೆಲಿಕಾಂ ಕಂಪನಿಗಳ ಮುಂದೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹೊಸ ಯೋಜನೆಗಳು ಬಳಕೆದಾರರ ಗಮನ ಸೆಳೆಯುತ್ತಿದೆ. ಅದರಲ್ಲೂ ಹೆಚ್ಚಿನ ಬೆನಿಫಿಟ್ಸ್ ಒದಗಿಸುವ ಕಾರಣ ಮತ್ತಷ್ಟು ಹೊಸ ಗ್ರಾಹಕರನ್ನು ಬಿಎಸ್ಎನ್ಎಲ್ ತನ್ನತ್ತ ಸೆಳೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ