newsfirstkannada.com

ಬಜೆಟ್​​ಗೂ ಮುನ್ನವೇ ಕೇಂದ್ರ ಸರ್ಕಾರಕ್ಕೆ ಗುಡ್​ನ್ಯೂಸ್​; ಖಜಾನೆಗೆ ಹರಿದು ಬಂತು ಲಕ್ಷಾಂತರ ಕೋಟಿ ರೂಪಾಯಿ..!

Share :

Published February 1, 2024 at 9:27am

    ನಿರ್ಮಲಾ ಸೀತಾರಾಮನ್​ರಿಂದ ಇವತ್ತು ಬಜೆಟ್ ಮಂಡನೆ

    2024ನೇ ಸಾಲಿನ ಆಯವ್ಯಯ ಪಟ್ಟಿ ಮಂಡನೆ ಆಗಲಿದೆ

    ಬಜೆಟ್​​ಗೂ ಮೊದಲು ಜನವರಿಯ ಜಿಎಸ್​ಟಿ ಡೇಟಾ ರಿಲೀಸ್

ಸಂಸತ್​​ನಲ್ಲಿ ಇಂದು 2024ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಆಗಲಿದ್ದು, ಅದಕ್ಕಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಭಾರತ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಬಜೆಟ್​ ಮಂಡನೆಗೂ ಮೊದಲೇ ಕೇಂದ್ರ ಸರ್ಕಾರಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ಸರ್ಕಾರದ ಖಜಾನೆಗೆ ನಿರೀಕ್ಷೆಗೂ ಮೀರಿ ಜಿಎಸ್​​ಟಿ ಹಣ ಹರಿದುಬಂದಿದೆ.

ಎಷ್ಟು ಕೋಟಿ ಜಿಎಸ್​ಟಿ ಸಂಗ್ರಹ..?
ಜಿಎಸ್​ಟಿ ಸಂಗ್ರಹದ ಅಂಕಿ-ಅಂಶಗಳು ಬಿಡುಗಡೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರತಿಶತ 10 ರಷ್ಟು ಜಿಗಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ಹರಿದುಬಂದಿದೆ. ಸರಕು ಮತ್ತು ಸೇವಾ ತೆರಿಗೆ (GST) ಆದಾಯದಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ. 2024 ಜನವರಿಯಲ್ಲಿ 1.72 ಲಕ್ಷ ಕೋಟಿ ಸಂಗ್ರಹವಾಗಿದೆ. ಇದು ಎರಡನೇ ಅತೀ ಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ.

ಇದನ್ನೂ ಓದಿ: ಈ ಸಲ ಏನೂ ಇಲ್ಲ ಅಂತ ಹೇಳಂಗೇ ಇಲ್ಲ.. 2019 ಮಧ್ಯಂತರ ಬಜೆಟ್​ನಲ್ಲಿ ಆಗಿದ್ದವು 5 ದೊಡ್ಡ ಘೋಷಣೆಗಳು..!

2024ರ ಹಣಕಾಸು ವರ್ಷದ ಸಂದರ್ಭದಲ್ಲಿ ಮೂರನೇ ಬಾರಿಗೆ ಜಿಎಸ್​ಟಿ ಅಂಕಿ-ಅಂಶವು 1.7 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. 2024ರ ಜನವರಿ ತಿಂಗಳಿನಲ್ಲಿ 1.72, 129 ಕೋಟಿ ರೂಪಾಯಿ ಜಿಎಸ್​ಟಿ ಹಣ ಬಂದಿದೆ. ಇದು ಕಳೆದ ತಿಂಗಳಿನಿಂದ ಶೇಕಡಾ 10.4 ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ಜನವರಿಯಲ್ಲಿ 1,55,922 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಒಟ್ಟು GST ಸಂಗ್ರಹ ಎಷ್ಟು..?
ಏಪ್ರಿಲ್ 2023, ಜನವರಿ 2024ರ ಅವಧಿಯಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹವು 16.69 ಲಕ್ಷ ಕೋಟಿ ರೂಪಾಯಿ ಆಗಿದೆ. 2022 ಅವಧಿಗೆ ಹೋಲಿಸಿದರೆ ಇದರ ಬೆಳವಣಿಗೆಯು ಶೇಕಡಾ 11.6 ರಷ್ಟಾಗಿದೆ. 2022-2023 ಅವಧಿಯಲ್ಲಿ 14.96 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜೆಟ್​​ಗೂ ಮುನ್ನವೇ ಕೇಂದ್ರ ಸರ್ಕಾರಕ್ಕೆ ಗುಡ್​ನ್ಯೂಸ್​; ಖಜಾನೆಗೆ ಹರಿದು ಬಂತು ಲಕ್ಷಾಂತರ ಕೋಟಿ ರೂಪಾಯಿ..!

https://newsfirstlive.com/wp-content/uploads/2024/02/GST.jpg

Load More