newsfirstkannada.com

×

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ.. ಸಿದ್ದು 2.O ಸರ್ಕಾರದ ಅಸಲಿ ಲೆಕ್ಕಾಚಾರ ಏನು?

Share :

Published February 12, 2024 at 6:48am

Update February 12, 2024 at 6:49am

    ಸಿಎಂ ಸಿದ್ದರಾಮಯ್ಯ 2.O ಸರ್ಕಾರದ ಎರಡನೇ ಬಜೆಟ್ ಇದು

    ರಾಜ್ಯದ ಪ್ರಗತಿ, ಗ್ಯಾರಂಟಿ ಹೊರೆ, ಲೋಕ ಗೆಲ್ಲುವ ಚಾಲೆಂಜ್​

    ಇಂದಿನಿಂದ ಬಜೆಟ್​ ಅಧಿವೇಶನ, 16ಕ್ಕೆ ಸಿದ್ದು ಹೊಸ ದಾಖಲೆ

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ ಆರಂಭವಾಗುತ್ತಿದೆ. ಬಜೆಟ್​​ ಮಂಡನೆಯಲ್ಲಿ ದಾಖಲೆ ಬರೆದ ಸಿದ್ದರಾಮಯ್ಯಗೆ, ಈ ಬಜೆಟ್​​ ಅಧಿವೇಶನ ಹಿಂದಿನಂತಲ್ಲ. ಗ್ಯಾರಂಟಿಗಳ ಯುಗದಲ್ಲಿ ರಾಜ್ಯದ ಪ್ರಗತಿ ಜೊತೆಗೆ ಹೆಜ್ಜೆ ಇರಿಸುವ ಬಹುದೊಡ್ಡ ಸವಾಲು ಸಿದ್ದು ಮುಂದಿದೆ. 10 ದಿನಗಳ ಕಾಲ ನಡೆಯುವ ಜಂಟಿ ಅಧಿವೇಶನ, ಕಾಂಗ್ರೆಸ್​​ನಂತೆ ವಿಪಕ್ಷಗಳು ಎಚ್ಚರಿಕೆ ಹೆಜ್ಜೆ ಇಡುವ ಚಾಲೆಂಜ್​​ ಇದೆ.

ಲೋಕಸಭೆ ಎಲೆಕ್ಷನ್​​​ ಹೊಸ್ತಿಲಲ್ಲೇ ಮತ್ತೊಂದು ಮಹಾ ಸಂಗ್ರಾಮಕ್ಕೆ ವಿಧಾನಸೌಧ ಸಜ್ಜಾಗ್ತಿದೆ. ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಇಂದಿನಿಂದ ಫೆಬ್ರವರಿ 23ರವರೆಗೆ ಒಟ್ಟು 10 ದಿನಗಳ ಕಾಲ ಅಧಿವೇಶ ನಡೆಯಲಿದೆ. ಆಡಳಿತ-ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಅಧಿವೇಶನ ವೇದಿಕೆ ಆಗೋದು ಪಕ್ಕಾ ಆಗಿದೆ. ಲೋಕಸಭಾ ಚುನಾವಣೆಗೆ ಪೂರ್ವತಯಾರಿ ನಡೆಸ್ತಿರುವ ಕಾರಣ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆಗಲಿದೆ. ರಾಜಕೀಯ ಘಟಾನುಘಟಿಗಳ ಮುಖಾಮುಖಿಗೆ ವಿಧಾನ ಮಂಡಲದ ಬಜೆಟ್ ಅಧಿವೇಶನ ಸಜ್ಜಾಗ್ತಿದೆ.

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಅಂತ ಸಮರ ಸಾರಿದ್ದ ಕಾಂಗ್ರೆಸ್​​​, ಈಗ ಅದೇ ಅಸ್ತ್ರವನ್ನ ಸದಸದನಲ್ಲಿ ಬ್ರಹ್ಮಾಸ್ತ್ರವಾಗಿ ಹೂಡಲು ಸಜ್ಜಾಗಿದೆ. ಇನ್ನು, ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಹ ಹತ್ತಾರು ಹತಾರುಗಳನ್ನ ಸಿದ್ಧಪಡಿಸಿಕೊಂಡಿದೆ. ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನವು ರಾಜ್ಯಪಾಲರ ಭಾಷಣದ ಮೂಲಕ ಆರಂಭವಾಗಲಿದೆ. ರಾಜ್ಯಪಾಲ ಥಾವರ್​​ಚಂದ್ ಗೆಹಲೋತ್ ಇಂದು ಬೆಳಗ್ಗೆ 11 ಗಂಟೆಗೆ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಹೊಸ ಸರ್ಕಾರ ಬಂದ ಅಲ್ಲಿಂದ ಈವರೆಗಿನ ಪ್ರಗತಿ, ಗ್ಯಾರಂಟಿಗಳ ಅನುಷ್ಠಾನ ಹಾಗೂ ರಾಜ್ಯದ ಮುನ್ನೋಟವನ್ನ ಪ್ರಸ್ತಾಪಿಸಲಿದ್ದಾರೆ. ಮಂಗಳವಾರದಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಲಿದೆ. 16ರಂದು ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 15ನೇ ಬಜೆಟ್​​​ನ್ನ ಮಂಡಿಸಲಿದ್ದಾರೆ. ಕೇಂದ್ರ ಅನುದಾನ ದಕ್ಕದ ಕಾರಣ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಪಂಚ ಗ್ಯಾರಂಟಿ ಅನುಷ್ಠಾನದಿಂದ ವಿತ್ತ ಅಸ್ತವ್ಯಸ್ತ ಹೇಗೆ ನಿಭಾಯಿಸ್ತಾರೆ ಅನ್ನೋದು ಪ್ರಶ್ನೆ ಆಗಿದೆ.

ಈ ಹೊರೆಯ ಮಧ್ಯೆ ಮುಂದಿನ ವರ್ಷವೂ ಗ್ಯಾರಂಟಿಗಾಗಿ 58 ಸಾವಿರ ಕೋಟಿ ಹಣ ಮೀಸಲಿಡುವ ಹೊಣೆಗಾರಿಕೆ ಇದೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಬಜೆಟ್​​ನಲ್ಲಿ ಹೊಸತೇನನ್ನು ಕೊಡಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಇದರ ನಡುವೆ ರಾಜ್ಯದ ಪ್ರಗತಿ, ಸಮುದಾಯಗಳ ಅಭಿವೃದ್ಧಿ, ಬಿಜೆಪಿಯ ರಾಮಾಸ್ತ್ರಕ್ಕೆ ಪ್ರತ್ಯಸ್ತ್ರ ಹೂಡುವ ಸವಾಲು ಸಿದ್ದರಾಮಯ್ಯ ಹೆಗಲ ಮೇಲಿದೆ.

ಶಿವಾನಂದ ಸರ್ಕಲ್ ಸರ್ಕಾರಿ ನಿವಾಸದಲ್ಲಿ ಮಾತ್ನಾಡಿದ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಅಧಿವೇಶನಕ್ಕೆ ಎಲ್ಲ ತಯಾರಿ ಆಗಿದೆ. ಈ ಬಾರಿ ಹೆಚ್ಚು ಮಾತನಾಡಲು ಅವಕಾಶ ಸಿಗಲಿದೆ ಎಂದಿದ್ದಾರೆ. ಎಲ್ಲರೂ ಚುನಾವಣೆ ಮೂಡ್​ನಲ್ಲಿದ್ದಾರೆ ಎಂದಿದ್ದಾರೆ. ಸುಖಾಸುಮ್ಮನೆ ಸದನದ ಬಾವಿಗೆ ಇಳಿದ್ರೆ ನಿರ್ದಿಷ್ಟವಾಗಿ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಇನ್ನು, ಮುಖ್ಯವಾಗಿ ಕೇಂದ್ರದ ಜೊತೆಗೆ ಅನುದಾನ ಕದನಕ್ಕೆ ಇಳಿದಿರುವ ಸಿದ್ದರಾಮಯ್ಯ, ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸುವ ಸಾಧ್ಯತೆ ಇದೆ. ಕೇಂದ್ರದಿಂದ ಈವರೆಗೆ ರಿಲೀಸ್​​​ ಆದ ಅನುದಾನದ ದಾಖಲೆ ಬಹಿರಂಗಪಡಿಸುವ ಸುಳಿವು 2 ದಿನದ ಹಿಂದಷ್ಟೇ ನೀಡಿದ್ದರು. ಇತ್ತ, ರಾಜ್ಯಪಾಲರಿಂದ ತಿರಸ್ಕರಿಸಲ್ಪಟ್ಟ ನಾಮಫಲಕ ಸುಗ್ರೀವಾಜ್ಞೆಯನ್ನ ಮಸೂದೆಯಾಗಿ ಸದನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಧಿವೇಶನ ನಡೆಯುತ್ತಿರುವ ಕಾರಣ ಸಹಜವಾಗಿ ಸಿದ್ದು ಬಜೆಟ್​​ ಮೇಲೆ ಎಲ್ಲರ ಕಣ್ಣಿದೆ.

ಸಿದ್ದು ಬಜೆಟ್​​​ ಲೆಕ್ಕಚಾರ!

  • ಸಿಎಂ ಸಿದ್ದರಾಮಯ್ಯ 2.O ಸರ್ಕಾರದ ಎರಡನೇ ಬಜೆಟ್
  • ಕಳೆದ ಸಲ ಮಂಡಿಸಿದ ಬಜೆಟ್ ಗಾತ್ರ 3.27 ಲಕ್ಷ ಕೋಟಿ
  • ಕಳೆದ ಬಾರಿಗಿಂತ ಈ ಸಲ ಬಜೆಟ್​ ಗಾತ್ರ ಏರಿಕೆ ಸಾಧ್ಯತೆ
  • ಈ ಬಾರಿ 50 ಸಾವಿರ ಕೋಟಿ ಗಾತ್ರ ಹೆಚ್ಚಾಗುವ ನಿರೀಕ್ಷೆ
  • 3.80 ಲಕ್ಷ ಕೋಟಿ ಬಜೆಟ್ ಗಾತ್ರ ಹಿಗ್ಗುವ ಸಾಧ್ಯತೆ ಇದೆ
  • ಗಿಮಿಕ್ ಯೋಜನೆಗಳ ಘೋಷಣೆಗೆ ಕಡಿವಾಣ ಖಚಿತ
  • ರೈತ, ಕಾರ್ಮಿಕ, ಮಹಿಳೆ, ಯುವ, ನಿರುದ್ಯೋಗಿಗಳಿಗೆ ಬಲ
  • ಪ್ರಸಕ್ತ ವರ್ಷ ಐದೂ ಗ್ಯಾರಂಟಿ ಯೋಜನೆ ಮುಂದುವರಿಕೆ
  • ರಾಜ್ಯದಲ್ಲಿ ಸುವರ್ಣ ಸಂಭ್ರಮ ಹೊತ್ತಲ್ಲಿ ಹೊಸ ಯೋಜನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಇಂದಿನಿಂದ ರಾಜ್ಯ ಬಜೆಟ್‌ ಅಧಿವೇಶನ.. ಸಿದ್ದು 2.O ಸರ್ಕಾರದ ಅಸಲಿ ಲೆಕ್ಕಾಚಾರ ಏನು?

https://newsfirstlive.com/wp-content/uploads/2024/02/Joint-session.jpg

Load More