/newsfirstlive-kannada/media/post_attachments/wp-content/uploads/2023/12/Kohli-and-Rohit.jpg)
ಟೀಮ್ ಇಂಡಿಯಾ, ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಈ ಮಹತ್ವದ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಬ್ಯಾಟಿಂಗ್​, ಬೌಲಿಂಗ್​​​ ಎರಡು ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರೋ ಟೀಮ್​ ಇಂಡಿಯಾ ಆಟಗಾರರು ಐಸಿಸಿ ಟೆಸ್ಟ್​​​ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.
ಇತ್ತೀಚೆಗೆ ರಿಲೀಸ್​ ಆಗಿರೋ ಐಸಿಸಿ ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಬೌಲರ್​​ ಜಸ್ಪ್ರಿತ್ ಬುಮ್ರಾ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ಇವರು ಒಟ್ಟು 870 ಅಂಕಗಳ ಮೂಲಕ ಮೊದಲನೇ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ 869 ಅಂಕಗಳೊಂದಿಗೆ ಅಶ್ವಿನ್​ ಇದ್ದಾರೆ.
ತಲಾ 11 ವಿಕೆಟ್​ ಪಡೆದಿದ್ದ ಅಶ್ವಿನ್​​, ಬುಮ್ರಾ!
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಆರ್​​. ಅಶ್ವಿನ್ ತಲಾ 11 ವಿಕೆಟ್ ಪಡೆದಿದ್ದರು. ಇಬ್ಬರೂ ಬಾಂಗ್ಲಾ ವಿರುದ್ಧದ ಅಮೋಘ ಪ್ರದರ್ಶನ ನೀಡಿದ್ರು. ಆದರೆ, ಬುಮ್ರಾಗೆ ಮಾತ್ರ ಶ್ರೇಯಾಂಕದಲ್ಲಿ ಬಡ್ತಿ ಸಿಕ್ಕಿದ್ದು, ಅಶ್ವಿನ್​​ ಕುಸಿತ ಕಂಡಿದ್ದಾರೆ.
ಜೈಸ್ವಾಲ್‌ಗೆ 3ನೇ ಸ್ಥಾನ
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 792 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಕ್ರಮವಾಗಿ ಇಂಗ್ಲೆಂಡ್ ತಂಡದ ಜೋ ರೂಟ್ ನಂಬರ್ 1 ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ 2ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ