newsfirstkannada.com

ಬಸ್​ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. 6 ಜನರು ಸಾವು, 20 ಮಂದಿಗೆ ಗಾಯ

Share :

Published April 29, 2024 at 7:28am

Update April 29, 2024 at 7:29am

  ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ತೆತ್ತ ಆರು ಜನರು

  ಲಾರಿ ಗುದ್ದಿದ ರಭಸಕ್ಕೆ ಬಸ್‌ನ ಒಂದು ಬದಿ ಛಿದ್ರಗೊಂಡಿದೆ

  ಅಪಘಾತದಲ್ಲಿ 20 ಜನರಿಗೆ ಗಾಯ.. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ

ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಆರು ಜನ ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಜಮಾಲ್‌ಪುರ ಗ್ರಾಮದ ಬಳಿಯ ಹರ್ದೋಯಿ-ಉನ್ನಾವೋ ಹೆದ್ದಾರಿಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಬಸ್‌ನ ಒಂದು ಬದಿ ಛಿದ್ರಗೊಂಡು ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಇನ್​ಸ್ಟಾ ಬಳಸೋ ಯುವತಿಯರೇ ಎಚ್ಚರ! ವಿಡಿಯೋ, ಫೋಟೋ ಶೇರ್ ಮಾಡಿದ್ರೆ ಅಪಾಯ ಗ್ಯಾರಂಟಿ!

ಮೊದಲು ಗಾಯಾಳುಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರ ಮತ್ತು ಉನ್ನಾವೊಗೆ ಕಳುಹಿಸಲಾಗಿದೆ. ಪ್ರಸ್ತುತ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದ್ದು, ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ.. 6 ಜನರು ಸಾವು, 20 ಮಂದಿಗೆ ಗಾಯ

https://newsfirstlive.com/wp-content/uploads/2024/04/Unnavo-bus-Accident.jpg

Load More