newsfirstkannada.com

ಅಯ್ಯೋ.. ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಸೇತುವೆಯಿಂದ ಬಸ್ ಪಲ್ಟಿ​.. ಪ್ರಯಾಣಿಕರಿಗೆ ಏನಾಯ್ತು?

Share :

Published April 30, 2024 at 7:53am

    ಸೇತುವೆಯಿಂದ ಪಲ್ಟಿ ಹೊಡೆದ 40 ಜನರಿದ್ದ ಬಸ್​

    ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಪಲ್ಟಿ ಹೊಡೆದ ಬಸ್​

    ಬಸ್​​ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ ಪೊಲೀಸರು

ಸೇತುವೆಯಿಂದ ಬಸ್ ಪಲ್ಟಿಯಾಗಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿ ನಡೆದಿದೆ. ಬಸ್​ 10 ಮಹಿಳೆಯರು ಮತ್ತು 7 ಮಕ್ಕಳು ಸೇರಿದಂತೆ 35 ಕ್ಕೂ ಹೆಚ್ಚು ಜನರನ್ನು ಹೊತ್ತು ಸಾಗಿಸುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ.

ಬಸ್ ಧನುರಬೆಳರಿಯಲ್ಲಿ ಮದುವೆ ಕಾರ್ಯಕ್ರಮದಿಂದ ಬಲಿಕುಡದ ಬೂದಿಸಾಹಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೂಡಲೇ ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಭೀಕರ ಮಳೆಗೆ ಡ್ಯಾಂ ಕುಸಿತ.. ಅಲ್ಲಿ 155, ಇಲ್ಲಿ 40 ಮಂದಿ ಸಾವು.. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಜನರ ಪರದಾಟ

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಸೇತುವೆಯಿಂದ ಬಸ್ ಪಲ್ಟಿ​.. ಪ್ರಯಾಣಿಕರಿಗೆ ಏನಾಯ್ತು?

https://newsfirstlive.com/wp-content/uploads/2024/04/Bus-Overturn.jpg

Load More