newsfirstkannada.com

ನಾ ನಿನ್ನ ಬಿಡಲಾರೆ.. ಟಿವಿ ನಿರೂಪಕನ ಕಿಡ್ನಾಪ್ ಮಾಡಿ ಧಮ್ಕಿ ಹಾಕಿದ ಚೆಲುವೆ; ಅಸಲಿಗೆ ಆಗಿದ್ದೇನು?

Share :

Published February 24, 2024 at 5:00pm

  ತೆಲುಗು ಮ್ಯೂಸಿಕ್ ಚಾನೆಲ್​ನಲ್ಲಿ ಌಂಕರ್ ಆಗಿದ್ದ ಪ್ರಣವ್ ಸಿಸ್ಲಾ

  ಟಿವಿ ನಿರೂಪಕನನ್ನೇ ಕಿಡ್ನ್ಯಾಪ್ ಮಾಡಿಸಿದ ಯುವತಿ ಸ್ಟೋರಿ ಇದು

  ಫೋಟೋ ನೋಡಿ ಇಷ್ಟ ಪಟ್ಟು ಆತನೊಂದಿಗೆ ಯುವತಿ ಚಾಟಿಂಗ್

ಹೈದರಾಬಾದ್: ಮದುವೆಯಾಗುವ ಆಸೆಯಿಂದ ಉದ್ಯಮಿ ಯುವತಿಯೊಬ್ಬರು ಟಿವಿ ಌಂಕರ್​ನನ್ನು ಕಿಡ್ನ್ಯಾಪ್ ಮಾಡಿಸಿದ ಅಚ್ಚರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹುಡುಗಿಯರ ಹಿಂದೆ ಹುಡುಗರು ಲವ್​ ಮಾಡು ಅಂತಾ ಬೀಳೋದನ್ನು ನೋಡಿರುತ್ತೇವೆ. ಆದ್ರೆ ಈ ಸ್ಟೋರಿಯಲ್ಲಿ ಎಲ್ಲ ರಿವರ್ಸ್ ಆಗಿದೆ. ಇದರ ಜೊತೆಗೆ ಸಿನಿಮಾ ಸಿನಿಮಾ ಶೈಲಿಯಲ್ಲಿ ಕಿಡ್ನ್ಯಾಪ್ ಕೂಡ ಮಾಡಿಸಿರೋ ಸಖತ್​ ಸ್ಟೋರಿ ಇದು.

ಏನಿದು ಪ್ರಕರಣ..?

ತ್ರಿಷ್ನಾ ಭೋಗಿರೆಡ್ಡಿ (31) ಎಂಬಾಕೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರ ನಡೆಸುತ್ತಿದ್ದಳು. ಹೀಗೆ ನೋಡುತ್ತಿದ್ದಾಗ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಟಿವಿ ಆ್ಯಂಕರ್ ಪ್ರಣವ್ ಸಿಸ್ಲಾ ಫೋಟೋಗಳನ್ನು ನೋಡಿ ಸಖತ್​ ಇಂಪ್ರೆಸ್ ಆಗಿದ್ದಳು. ಹೀಗಾಗಿ 2 ವರ್ಷಗಳಿಂದ ತೆಲುಗು ಟಿವಿ ಆ್ಯಂಕರ್ ಪ್ರಣವ್ ಸಿಸ್ಲಾರ ಜೊತೆ ಚಾಟಿಂಗ್​ ಮಾಡುತ್ತಿದ್ದಳು. ಆದರೆ ಆ ಯುವತಿಗೆ ಗೊತ್ತೇ ಆಗಲ್ಲಿಲ್ಲ ಅದು ವಂಚಕನ ಜಾಲ ಅಂತಾ. ಹೀಗೆ ಪ್ರಣವ್ ಸಿಸ್ಲಾ ಅಂತಾ ನಂಬಿದ ಯುವತಿ ಚೈತನ್ಯ ರೆಡ್ಡಿ ಎಂಬಾತನ ಜೊತೆ ಚಾಟ್ ಮಾಡಲು ಆರಂಭಿಸಿದ್ದಳು. ಆದರೆ ವಂಚಕ ಚೈತನ್ಯ ರೆಡ್ಡಿ ತನ್ನ ಸ್ವಂತ ಫೋಟೋ ಬದಲಿಗೆ ಌಂಕರ್​ ಪ್ರಣವ್ ಸಿಸ್ಲಾರ ಫೋಟೋವನ್ನು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡಿದ್ದ.

ಇದನ್ನು ಓದಿ: ಪ್ರಿಯಾ ಜೊತೆ ರೊಮ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್.. ‘ಮೀಟದೇನೆ ವೀಣೆ’ ಸಾಂಗ್‌ ವಿಶೇಷ ಏನು?

ಇದನ್ನೇ ನಂಬಿದ ಯುವತಿ ಆ್ಯಂಕರ್ ಪ್ರಣವ್ ಸಿಸ್ಲಾನನ್ನು ಮದುವೆಯಾಗಬೇಕೇಂದು ನಿರ್ಧಸಿದ್ದಳು. ಬಳಿಕ ವಂಚಕ ಚೈತನ್ಯ ಬಲೆಗೆ ಬಿದ್ದು ಸುಮಾರು 40 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಳೆ. ಅದು ಹೇಗೆ ಎಂದರೆ, ವಂಚಕ ಚೈತನ್ಯ ಬ್ಯುಸಿನೆಸ್​ನಲ್ಲಿ ಹೂಡಿಕೆಗೆ ಒಳ್ಳೆಯ ರಿಟರ್ನ್ಸ್ ಬರುತ್ತೆ ಅಂತಾ ಯುವತಿಗೆ ಭರವಸೆ ಮೂಡಿಸಿದ್ದಾನೆ. ಇದನ್ನೇ ನಂಬಿ ಯುಪಿಐ ಮೂಲಕ ಸುಮಾರು 40 ಲಕ್ಷ ರೂಪಾಯಿ ಟ್ರಾನ್ಸ್​ಫರ್ ಮಾಡಿದ್ದಾಳೆ. ಹಣ ನೀಡಿದ ಬಳಿಕ ವಂಚಕ ಚೈತನ್ಯ ತ್ರಿಷ್ನಾಳ ಕಾಲ್​ ರಿಸೀವ್ ಮಾಡಿಲ್ಲ. ಕಡೆಗೆ ತ್ರಿಶ್ನಾ ಌಂಕರ್​ ಪ್ರಣವ್ ಸಿಸ್ಲಾರ ಟಿವಿಯಲ್ಲಿ ನೋಡಿ ಫೋನ್ ನಂಬರ್ ಪಡೆದಿದ್ದಾಳೆ. ಆತನ ಜೊತೆ ಕರೆ ಮಾಡಿ ಮಾತನಾಡಿದ್ದಾಳೆ. ಆಗ ತ್ರಿಶ್ನಾಳಿಗೆ ತನ್ನ ಫೋಟೋ ದುರ್ಬಳಕೆ ಆಗಿದೆ ಅಂತಾ ಪ್ರಣವ್ ಸಿಸ್ಲಾ ಹೇಳಿದ್ದಾನೆ. ಈ ಬಗ್ಗೆ ನಾನು ಸೈಬರ್ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಅಂತಾ ಹೇಳಿ ಭೋಗಿರೆಡ್ಡಿಯ ನಂಬರ್​ನ ಬ್ಲಾಕ್ ಮಾಡಿದ್ದಾನೆ.

View this post on Instagram

A post shared by Pranav Sistla (@sistlapranav)

ತ್ರಿಷ್ನಾ ಭೋಗಿರೆಡ್ಡಿ ಕಿಡ್ನ್ಯಾಪ್ ಮಾಡಿಸಿದ್ದೇಕೆ?

ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ತ್ರಿಷ್ನಾ ಪ್ರಣವ್​ನನ್ನು ಪ್ರೀತಿಸುತ್ತಿದ್ದಳು. ಌಂಕರ್ ಪ್ರಣವ್​ನನ್ನೇ ಫಾಲೋ ಮಾಡೋಕೆ ಆರಂಭಿಸಿದ ತ್ರಿಷ್ನಾ ಪ್ರಣವ್​ನ ಕಾರಿಗೆ ಏರ್ ಟ್ಯಾಗ್ ಹಾಕಿ ​ ಎಲ್ಲಿಗೆ ಹೋಗುತ್ತಾನೆ ಅಂತಾ ಫಾಲೋ ಮಾಡಲು ಶುರು ಮಾಡಿದ್ದಳು. ನಂತರ ಌಂಕರ್ ಪ್ರಣವ್​ನನ್ನ ಕಿಡ್ನ್ಯಾಪ್ ಮಾಡಬೇಕೇಂದು ಪ್ಲಾನ್​ ಮಾಡಿದ್ದಳು. ತನ್ನ ಕಚೇರಿಯಲ್ಲೇ ಕೆಲಸ ಮಾಡುವವರನ್ನ ಕಿಡ್ನ್ಯಾಪ್​ಗಾಗಿ ಬಳಕೆ ಮಾಡಿಕೊಂಡಿದ್ದಳು. ಒಬ್ಬೊಬ್ಬರಿಗೆ 50 ಸಾವಿರ ರೂಪಾಯಿ ನೀಡಿ ಌಂಕರ್​ ಪ್ರಣವ್​ನನ್ನು ಕಿಡ್ನ್ಯಾಪ್ ಮಾಡಿಸಿದ್ದಳು. ಕಿಡ್ನ್ಯಾಪ್ ಮಾಡಿಸಿ ತನ್ನ ಕಚೇರಿಗೆ ಕರೆದೊಯ್ದು ಮಾತನಾಡಿಸಿದ್ದಾಳೆ. ಫೋನ್ ಕಾಲ್ ರಿಸೀವ್ ಮಾಡುತ್ತಿಲ್ಲವೇಕೆ ಅಂತಲೂ ಪ್ರಶ್ನಿಸಿದ್ದಾಳೆ. ಕಡೆಗೆ ನಿನ್ನ ಫೋನ್ ರಿಸೀವ್ ಮಾಡಿ ಮಾತಾಡ್ತೀನಿ ಅಂತಾ ಹೇಳಿದ್ದಕ್ಕೆ ಆತನನ್ನ ಬಿಟ್ಟು ಕಳುಹಿಸಿಕೊಟ್ಟಿದ್ದಾಳೆ. ಅಲ್ಲಿಂದ ಎಸ್ಕೇಪ್ ಆದ ಪ್ರಣವ್ ಬಳಿಕ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾನೆ. ದೂರನ್ನು ದಾಖಲಿಸಿಕೊಂಡ ಹೈದರಾಬಾದ್ ಪೊಲೀಸರು ತ್ರಿಷ್ನಾ ಭೋಗಿರೆಡ್ಡಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾ ನಿನ್ನ ಬಿಡಲಾರೆ.. ಟಿವಿ ನಿರೂಪಕನ ಕಿಡ್ನಾಪ್ ಮಾಡಿ ಧಮ್ಕಿ ಹಾಕಿದ ಚೆಲುವೆ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/02/fake-love-7.jpg

Load More