Advertisment

200 ಕೋಟಿ ರೂಪಾಯಿ ಮೌಲ್ಯದ ಎಲ್ಲಾ ಆಸ್ತಿಗಳನ್ನೂ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಕೋಟ್ಯಾಧಿಪತಿ..!

author-image
Ganesh
Updated On
200 ಕೋಟಿ ರೂಪಾಯಿ ಮೌಲ್ಯದ ಎಲ್ಲಾ ಆಸ್ತಿಗಳನ್ನೂ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಕೋಟ್ಯಾಧಿಪತಿ..!
Advertisment
  • ಗುಜರಾತ್​ನ ದಂಪತಿಯಿಂದ ಅಚ್ಚರಿಯ ನಿರ್ಧಾರ
  • ಜೈನ ಧರ್ಮ ಸ್ವೀಕಾರ ಮಾಡೋದಕ್ಕಾಗಿ ಆಸ್ತಿ ದಾನ
  • ಕೋಟ್ಯಾಧಿಪತಿ ಆಗಿದ್ದ ದಂಪತಿಯ ಹಿನ್ನೆಲೆ ಏನು ಗೊತ್ತಾ?

ಗುಜರಾತ್​​ನ ಉದ್ಯಮಿಯೊಬ್ಬರು ಸನ್ಯಾಸತ್ವ ಸ್ವೀಕರಿಸಲು ತಾವು ಜೀವಮಾನದಲ್ಲಿ ಗಳಿಸಿದ್ದ ಎಲ್ಲಾ ಆಸ್ತಿ, ಹಣವನ್ನು ತ್ಯಜಿಸಲು ಮುಂದಾಗಿದ್ದಾರೆ. ವರದಿಗಳ ಪ್ರಕಾರ, ಒಟ್ಟು 200 ಕೋಟಿ ರೂಪಾಯಿ ಮೌಲ್ಯದ ಗಳಿಕೆಯನ್ನು ದಾನ ಮಾಡಲು ನಿರ್ಧರಿಸಿದ್ದಾರಂತೆ.

Advertisment

ಉದ್ಯಮಿ ಭವೇಶ್ ಭಾಯ್ ಮತ್ತು ಅವರ ಪತ್ನಿ ತಮ್ಮ ಎಲ್ಲಾ ಆಸ್ತಿ-ಪಾಸ್ತಿಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಗುಜರಾತ್​​ನ ಸಬರ್ಕಾಂಥ ಪ್ರದೇಶದ ಈ ದಂಪತಿ, ತಮ್ಮ ಎಲ್ಲ ಸಂಪತ್ತುಗಳನ್ನು ತ್ಯಜಿಸಿ ಸನ್ಯಾಸಿಗಳಾಗಲು ಹೊರಟಿದ್ದಾರೆ ಎಂಬ ವರದಿ ಇದೆ. ಜೈನ ಧರ್ಮದಲ್ಲಿ ದೀಕ್ಷೆ ತೆಗೆದುಕೊಳ್ಳುವುದೆಂದರೆ ಸನ್ಯಾಸ ತೆಗೆದುಕೊಳ್ಳುವುದು. ಅಂದರೆ ಭೌತಿಕ ಪ್ರಪಂಚದಿಂದ ದೂರ ಸರಿಯುವುದಾಗಿದೆ.

publive-image

ಯಾರು ಭವೇಶ್ ಭಾಯ್ ಭಂಡಾರಿ..?
ಬಾಲ್ಯದಿಂದಲೂ ಸುಸ್ಥಿರ ಕುಟುಂಬದಿಂದ ಬಂದಿರುವ ಭವೇಶ್ ಭಾಯ್, ಸುಕಕರ ಜೀವನ ನಡೆಸಿದವರು. ಗುಜರಾತ್‌ನ ಹಿಮ್ಮತ್‌ನಗರದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಬ್ಯುಸಿನೆಸ್ ನಡೆಸುತ್ತಿದ್ದರು. ಪ್ರಸ್ತುತ ಅವರು ಅಹಮದಾಬಾದ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಇದೀಗ ಎಲ್ಲ ಕೆಲಸಗಳಿಂದ ದೂರ ಸರಿದು ಜೈನ ಧರ್ಮದಲ್ಲಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:RCB ಪಾಳೆಯದಲ್ಲಿ ಮನೆ ಮಾಡಿದ ಆತಂಕ; ಗೆಲುವಿನ ಆತ್ಮವಿಶ್ವಾಸಕ್ಕೆ ಅಡ್ಡಿಯಾದ SRHನ ಈ ದಾಂಡಿಗರು..!

Advertisment

publive-image

ಭಂಡಾರಿ ಕುಟುಂಬವು ಹಿಂದಿನಿಂದಲೂ ಜೈನ ಧರ್ಮದೊಂದಿಗೆ ಅಪಾರ ನಂಟು ಹೊಂದಿದೆ. ಈ ಕುಟುಂಬದ ಅನೇಕ ಸದಸ್ಯರು ಜೈನ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. 2022ರಲ್ಲಿ ಇವರಿಬ್ಬರ ಮಕ್ಕಳು ಕೂಡ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ. 16 ವರ್ಷದ ಪುತ್ರ ಹಾಗೂ 19 ವರ್ಷದ ಮಗಳು ಜೈನ ದೀಕ್ಷೆ ಪಡೆದುಕೊಂಡಿದ್ದಾರೆ. ಇದೀಗ ಮಕ್ಕಳಂತೆ ತಾವೂ ಕೂಡ ಅದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:Video: ಭರ್ಜರಿ 3 ಸಿಕ್ಸರ್ ಬಾರಿಸಿ ಪೆವಿಲಿಯನ್​ಗೆ ಹೋಗುವಾಗ ಅಭಿಮಾನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಧೋನಿ..!

publive-image

ಜೈನ ದೀಕ್ಷೆ ನಿಮಿತ್ತ ಹಿಮ್ಮತ್‌ನಗರದಲ್ಲಿ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಅವರು ಏಪ್ರಿಲ್ 22 ರಂದು ಔಪಚಾರಿಕವಾಗಿ ದೀಕ್ಷೆ ಪಡೆಯಲಿದ್ದಾರೆ. ವರದಿಗಳ ಪ್ರಕಾರ, ಭವೇಶ್ ಭಂಡಾರಿ ಮತ್ತು ಅವರ ಪತ್ನಿ ಸೇರಿ ಒಟ್ಟು 35 ಮಂದಿ ಏಕಕಾಲಕ್ಕೆ ದೀಕ್ಷೆ ಪಡೆಯಲಿದ್ದಾರೆ ಎನ್ನಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment