newsfirstkannada.com

ಲೋಕಸಭೆ ಮಧ್ಯೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್​​.. ಗೆಲ್ಲೋದ್ಯಾರು ಗೊತ್ತಾ?

Share :

Published April 20, 2024 at 6:08am

  ಬಿಸಿಲನ್ನು ಲೆಕ್ಕಿಸದೇ ಮತದಾರರ ಮನಗೆಲ್ಲಲ್ಲು ಕಸರತ್ತು

  ರಾಜಾ ವೇಣುಗೋಪಾಲ ನಾಯಕ VS ರಾಜುಗೌಡ ಫೈಟ್​

  ಶಾಸಕ ವೆಂಕಟಪ್ಪ ನಿಧನದಿಂದ ನಡೆಯುತ್ತಿರುವ ಬೈಎಲೆಕ್ಷನ್​

ಲೋಕಸಭಾ ಚುನಾವಣೆ ಮಧ್ಯೆ ಯಾದಗಿರಿಯ ಸುರಪುರ ವಿಧಾನಸಭೆ ಉಪಚುನಾವಣೆಗೂ ಅಖಾಡ ಸಿದ್ಧವಾಗಿದೆ. ಶಾಸಕ ವೆಂಕಟಪ್ಪ ನಾಯಕ ಸಾವಿನ ಹಿನ್ನೆಲೆ ತೆರವಾಗಿದ್ದ ಸುರಪುರ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಅಭ್ಯರ್ಥಿಗಳು ಮತದಾರರ ಮನಗೆಲ್ಲಲ್ಲು ಕಸರತ್ತು ನಡೆಸ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್‌; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ

ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ

ದೇಶದಾದ್ಯಂತ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಲೋಕ ಗೆದ್ದು ದಿಲ್ಲಿ ಸಂಸತ್​ ಪ್ರವೇಶಿಸಲು ಅಭ್ಯರ್ಥಿಗಳು ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಉಪಚುನಾವಣೆಯ ಅಖಾಡ ಸಿದ್ಧವಾಗಿದ್ದು, ಲೋಕಸಮರದ ಹೊತ್ತಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಉಪಚುನಾವಣೆಗೆ ಅಖಾಡ ಸಿದ್ಧವಾಗಿದೆ. ಕಾಂಗ್ರೆಸ್​​ನ ಹಿರಿಯ ಶಾಸಕ ವೆಂಕಟಪ್ಪ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸುರಪುರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಎಸ್​ಟಿ ಮೀಸಲು ಕ್ಷೇತ್ರವಾಗಿರುವ ಸುರಪುರದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಜೂನ್​ 4ರಂದು ಫಲಿತಾಂಶ ಹೊರಬರಲಿದೆ.

ಮೇ 7ರಂದು ಮತದಾನ, ಜೂನ್​ 4ರಂದು ರಿಸಲ್ಟ್​​​​

ಸುರಪುರ ವಿಧಾನಸಭೆ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಕಣಕ್ಕಿಳಿದರೆ ಬಿಜೆಪಿಯಿಂದ ರಾಜುಗೌಡ ಸ್ಪರ್ಧೆ ಮಾಡ್ತಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲ್ಲು ಕ್ಷೇತ್ರದಲ್ಲಿ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ.

ರಾಜ ವೇಣುಗೋಪಾಲ ನಾಯಕ ಶಕ್ತಿ ಪ್ರದರ್ಶನ

ಲೋಕಸಭೆ ಚುನಾವಣೆ ಮಧ್ಯದಲ್ಲಿ ಸದ್ದು ಮಾಡ್ತಿರೋ ಸುರಪುರ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಮೊನ್ನೆ ನಾಮಪತ್ರ ಸಲ್ಲಿಸಿದ್ರು, ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕೈ ಅಭ್ಯರ್ಥಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್​​​ ರೋಡ್​​ ಶೋ ನಡೆಸಿ ಶಕ್ತಿ ಪ್ರರ್ದಶಿಸುವ ಮೂಲಕ ತಮ್ಮ ಉಮೇದುವಾರಿಕೆ ಸಲ್ಲಿಸಿದ್ರು.

ಬಿಜೆಪಿಯಿಂದ ರಾಜುಗೌಡ ಸ್ಪರ್ಧೆ, ನಾಮಪತ್ರ ಸಲ್ಲಿಕೆ

ಇನ್ನು, ಬಿಜೆಪಿ ಪಕ್ಷದಿಂದ ರಾಜುಗೌಡ ಸ್ಪರ್ಧೆ ಮಾಡ್ತಿದ್ದು, ಅವರೂ ಕೂಡ ಮೊನ್ನೆ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಈ ಎರಡು ಅಭ್ಯರ್ಥಿಗಳು ಘಟಾನುಘಟಿ ನಾಯಕರಾಗಿದ್ದು, ಲೋಕಸಭೆ ಚುನಾವಣೆಯ ನಡುವೆ ಸುರಪುರ ಕ್ಷೇತ್ರದ ಉಪಚುನಾವಣೆ ಮಿನಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಒಟ್ಟಾರೆ, ಲೋಕ ಸಮರದ ನಡುವೆಯೂ ಸುರಪುರ ಕ್ಷೇತ್ರದ ಉಪಚುನಾವಣೆ ರಂಗೇರಿದೆ. ಎರಡು ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆಯಲ್ಲಿದ್ದು, ಮತದಾರರ ಯಾರ ಪರ ಎಂದು ಜೂನ್​ 4ರಂದು ತಿಳಿದು ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಮಧ್ಯೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್​​.. ಗೆಲ್ಲೋದ್ಯಾರು ಗೊತ್ತಾ?

https://newsfirstlive.com/wp-content/uploads/2024/02/RAJAVENKATAPPA_NAYAKA.jpg

Load More