newsfirstkannada.com

ದೆಹಲಿಯಲ್ಲಿ ಪಟ್ಟು ಸಡಿಲಿಸದ ಸೈನಿಕ; ಬೈ ಎಲೆಕ್ಷನ್ ಬಗ್ಗೆ​ ಮೈತ್ರಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಏನು?

Share :

Published August 30, 2024 at 7:33am

    3 ಉಪ ಕದನ ಗೆಲ್ಲಲು ಒಗ್ಗಟ್ಟಿನ ಹೋರಾಟಕ್ಕೆ ನಿರ್ಧಾರ

    ಟಿಕೆಟ್​ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ.. ಪಟ್ಟು ಸಡಿಲಿಸದ ಸಿಪಿವೈ

    ಚನ್ನಪಟ್ಟಣದ ಮತದಾರರ ಮನಗೆಲ್ಲಲು ಕಾಂಗ್ರೆಸ್​ ತಂತ್ರ

ಕಮಲ-ದಳ ನಾಯಕರಿಗೆ ಚನ್ನಪಟ್ಟಣ ಬೈ ಎಲೆಕ್ಷನ್​ ದೊಡ್ಡ ತಲೆನೋವಾಗಿದೆ. ಸಿ.ಪಿ.ಯೋಗೇಶ್ವರ್​ ನಡೆಯಿಂದ ಜೆಡಿಎಸ್​ ಮತ್ತು ಬಿಜೆಪಿ ಮಧ್ಯೆ ಟಿಕೆಟ್​ ಗೊಂದಲ ಸೃಷ್ಟಿಯಾಗಿದ್ದು, ದೆಹಲಿ ಅಂಗಳದಲ್ಲೂ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ಬಿಜೆಪಿ ಐವರು ರಾಜ್ಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್​ ವಿಚಾರವಾಗಿ ದಳಪತಿಯ ಜೊತೆ ಮಾತುಕತೆ ನಡೆಸಿದ್ದಾರೆ. ದೆಹಲಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ವಿ ಸೋಮಣ್ಣ, ಬೊಮ್ಮಾಯಿ, ಅಶ್ವಥನಾರಾಯಣ್, ಸಿ ಟಿ ರವಿ, ಅರವಿಂದ್ ಬೆಲ್ಲದ್ ಭಾಗಿಯಾಗಿದ್ದರು. ಸದ್ಯ ಕ್ಷೇತ್ರದಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡೋದು ಬೇಡ. ಒಮ್ಮತದಿಂದ ಎಲ್ಲರ ಅಭಿಪ್ರಾಯ ಪಡೆದು ಚುನಾವಣೆ ಎದುರಿಸೋಣ ಎಂಬ ಅಭಿಪ್ರಾಯಕ್ಕೆ ಎಲ್ಲಾ ನಾಯಕರ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬಿಜೆಪಿಗೆ ಬಿಸಿ ತುಪ್ಪವಾದ ಚನ್ನಪಟ್ಟಣ ಬೈ ಎಲೆಕ್ಷನ್; ದೋಸ್ತಿಗಳ ನಿದ್ದೆಗೆಡಿಸಿದ ಸೈನಿಕ ಎಸೆದ ಆ ಬಾಣ..!

ಒಟ್ಟಿಗೆ ಹೋದರೆ ಇಬ್ಬರಿಗೂ ಲಾಭ ಎಂದ ಆರ್​.ಅಶೋಕ್​
ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್​.ಅಶೋಕ್​, ಉಪ ಚುನಾವಣೆಯಲ್ಲೂ ಒಟ್ಟಿಗೆ ಹೋಗುವ ಬಗ್ಗೆ ಚರ್ಚೆ ಮಾಡಲಾಗಿದೆ. ಬೈಎಲೆಕ್ಷನ್​ನಲ್ಲಿ ಗೆಲ್ಲಬೇಕು ಎನ್ನುವುದು ಒಂದೇ ಉದ್ದೇಶ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಆರ್​.ಅಶೋಕ್​ ಹೇಳಿದ್ದಾರೆ.

ಟಿಕೆಟ್​ಗಾಗಿ ಪಟ್ಟು ಹಿಡಿದು ದೆಹಲಿಯಲ್ಲಿ ಠಿಕಾಣಿ ಹೂಡಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಕಮಲ ನಾಯಕರ ಮುಂದೆ ಹೊಸ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗಿದೆ. ಜೆಡಿಎಸ್​ನಿಂದಾದರೂ ಓಕೆ.. ಬಿಜೆಪಿಯಿಂದಲಾದ್ರೂ ಓಕೆ.. ಒಟ್ಟು ನನಗೆ ಟಿಕೆಟ್​ ಬೇಕೆ ಬೇಕು.. ಟಿಕೆಟ್​ ಸಿಗದಿದ್ದರೆ ಬಿಎಸ್​ಪಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಪಕ್ಕಾ ಎಂದು ಜೋಷಿ ಮನೆಯಲ್ಲಿ ನಡೆದ ಬ್ರೇಕ್​ಫಾಸ್ಟ್​ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟಿಕೆಟ್​ ವಿಚಾರ ಹೈಕಮಾಂಡ್​ ನಿರ್ಧಾರ ಮಾಡುತ್ತೆ ಎಂದು ಆರ್​.ಅಶೋಕ್​ ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ಮೈತ್ರಿ ನಾಯಕರು ಟಿಕೆಟ್​ ಗೊಂದಲ ಬಗೆ ಹರಿಸುವುದರದಲ್ಲೇ ಬ್ಯುಸಿಯಾಗಿದ್ದಾರೆ. ಆದ್ರೆ ಕಾಂಗ್ರೆಸ್​ ನಾಯಕರು ಸೈಲೆಂಟ್​ ಆಗಿಯೇ ಚನ್ನಪಟ್ಟಣ ಕೈ ವಶಕ್ಕೆ ತಂತ್ರ-ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆಗೆ ಸರ್ಕಾರ ಮುಂದಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಈ ಮೇಳ ಆಯೋಜನೆ ಮಾಡಲಾಗಿದ್ದು, ಚನ್ನಪಟ್ಟಣ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಇದು ಚನ್ನಪಟ್ಟಣ ಉಪಚುನಾವಣೆಗೂ ಸಹ ಸಹಕಾರಿಯಾಗಲಿದೆ ಅನ್ನೋ ಲೆಕ್ಕಾಚಾರ ಕಾಂಗ್ರೆಸ್​ನದ್ದು.. ಈಗಾಗಲೇ 8 ಸಾವಿರಕ್ಕೂ ಹೆಚ್ಚು ಜನರು ನೊಂದಣಿ ಮಾಡಿಕೊಂಡಿದ್ದಾರೆ.

ಒಟ್ಟಾರೆ.. ಚನ್ನಪಟ್ಟಣ ಉಪ-ಕದನವನ್ನು ಗೆಲ್ಲಲು ಮೈತ್ರಿ ಪಡೆ ಮತ್ತು ಕಾಂಗ್ರೆಸ್​ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಟಿಕೆಟ್​ಗಾಗಿ ಸೈನಿಕ ಪಟ್ಟು ಹಿಡಿದಿದ್ರೂ, ಚನ್ನಪಟ್ಟಣ ಕುಮಾರಸ್ವಾಮಿ ಪ್ರತಿನಿಧಿಸಿದ್ದ ಕ್ಷೇತ್ರವಾಗಿರೋ ಕಾರಣ, ದಳಪತಿಯ ಮಾತಿಗೆ ಬಿಜೆಪಿ ಹೈಕಮಾಂಡ್​ ಮಣಿಯುತ್ತಾ.. ಇಲ್ಲ ಸೈನಿಕನ ಬೆನ್ನಿಗೆ ನಿಲ್ಲುತ್ತಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಿದೆ.

ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಯಲ್ಲಿ ಪಟ್ಟು ಸಡಿಲಿಸದ ಸೈನಿಕ; ಬೈ ಎಲೆಕ್ಷನ್ ಬಗ್ಗೆ​ ಮೈತ್ರಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಏನು?

https://newsfirstlive.com/wp-content/uploads/2024/08/NIKHIL.jpg

Load More