newsfirstkannada.com

ಬಿಜೆಪಿಗೆ ಬಿಸಿ ತುಪ್ಪವಾದ ಚನ್ನಪಟ್ಟಣ ಬೈ ಎಲೆಕ್ಷನ್; ದೋಸ್ತಿಗಳ ನಿದ್ದೆಗೆಡಿಸಿದ ಸೈನಿಕ ಎಸೆದ ಆ ಬಾಣ..!

Share :

Published August 29, 2024 at 8:10am

    ದೆಹಲಿಯಲ್ಲಿ ಬೀಡುಬಿಟ್ಟ ಐವರು ರಾಜ್ಯ ನಾಯಕರು

    ದೆಹಲಿಯ ಕರ್ನಾಟಕ ಭವನದಲ್ಲಿ ಚನ್ನಪಟ್ಟಣ ಟಿಕೆಟ್ ಚರ್ಚೆ

    ಚನ್ನಪಟ್ಟಣ ಟಿಕೆಟ್​ ವಿಚಾರದಲ್ಲಿ ಎನ್​ಡಿಎ ತೀರ್ಮಾನ

ಚನ್ನಪಟ್ಟಣ ಉಪ ಚುನಾವಣೆಗೆ ಇನ್ನೂ ಮುಹೂರ್ತ ಫಿಕ್ಸ್​ ಆಗಿಲ್ಲ.. ಆದ್ರೆ ಈಗಾಗಲೇ ಮೂರು ಪಕ್ಷಗಳ ಅಖಾಡವನ್ನು ಹುರಿಗೊಳಿಸುತ್ತಿದ್ದಾರೆ.. ಬಿಜೆಪಿಯ ಸೈನಿಕ ಎಸೆದ ಬಂಡಾಯದ ಗುಂಡು, ಮೈತ್ರಿ ಪಡೆಯ ನಿದ್ದೆಯನ್ನು ಗೆಡಿಸಿದ್ದು, ಬಿಜೆಪಿ ಹೈಕಮಾಂಡ್​ಗೆ ತಲೆನೋವು ತರಿಸಿದೆ. ಹೈಕಮಾಂಡ್​ ಬುಲಾವ್​ ಮೇರೆಗೆ ಐವರು ರಾಜ್ಯ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕುತೂಹಲವನ್ನು ಹೆಚ್ಚಿಸಿದೆ.

ಚನ್ನಪಟ್ಟಣದ ಟಿಕೆಟ್​ಗಾಗಿ ಪಟ್ಟು ಹಿಡಿದಿರುವ ಸಿ.ಪಿ.ಯೋಗೇಶ್ವರ್​ ದೆಹಲಿ ಮಟ್ಟದಲ್ಲೇ ಟಿಕೆಟ್​ ಗಿಟ್ಟಿಸಿಕೊಳ್ಳಲು ಮುಂದಾಗಿದೆ. ಕಳೆದೊಂದು ವಾರದಿಂದ ದೆಹಲಿಯಲ್ಲೇ ಡೇರೆ ಹೂಡಿರುವ ಸೈನಿಕ, ಟಿಕೆಟ್​ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇನ್ನು ರಾಜ್ಯದಿಂದ ಬಂದ ಐವರು ನಾಯಕರ ಜೊತೆಗೆ ದೆಹಲಿ ಕರ್ನಾಟಕ ಭವನದಲ್ಲಿ ಸಿಪಿವೈ ಚರ್ಚೆ ನಡೆಸಿದ್ದಾರೆ. ಇನ್ನು ಕೇಂದ್ರಸಚಿವ ಪ್ರಹ್ಲಾದ್ ಜೋಷಿ ನಿವಾಸದಲ್ಲಿ ತಡರಾತ್ರಿ ಸಭೆ ನಡೆಸಿದ ನಾಯಕರು, ಹೈಕಮಾಂಡ್​ ಭೇಟಿಗಾಗಿ ಎರಡು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಇವತ್ತು ಹೈ ನಾಯಕರ ಭೇಟಿಗೆ ಅವಕಾಶ ಸಿಗದಿದ್ದರೆ, ನಾಳೆ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ವರಿಷ್ಟರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಇಂದು ಮಹತ್ವದ ದಿನ; ಡಿಸಿಎಂ ಡಿಕೆಶಿಗೂ ಟೆನ್ಷನ್, ಟೆನ್ಷನ್..!

ವಿಪಕ್ಷ ನಾಯಕ ಆರ್​.ಅಶೋಕ್​ ಸೇರಿದಂತೆ ಬಿಜೆಪಿ ನಾಯಕರು ಸಿ.ಪಿ.ಯೋಗೇಶ್ವರ್​ ಪರ ಹೈಕಮಾಂಡ್​ ಮನವೊಲಿಕೆಗೆ ಚಿಂತನೆ ನಡೆಸಿದ್ದಾರೆ. ಮೂರು ಕ್ಷೇತ್ರಗಳ ಬೈ ಎಲೆಕ್ಷನ್​ನಲ್ಲಿ ಬಿಜೆಪಿಗೆ ಟಿಕೆಟ್​ ಬೇಕು ಅನ್ನೋ ಆಸೆ ಇದೆ. ಈ ಬಾರಿ ನಾವು ಎನ್​ಡಿಎ ಮೈತ್ರಿ ಕೂಟದಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಟಿಕೆಟ್​ ವಿಚಾರವನ್ನು ಎನ್​ಡಿಎ ನಾಯಕರೇ ತೀರ್ಮಾನ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್​.ಅಶೋಕ್​ ಸ್ಪಷ್ಟ ಪಡಿಸಿದ್ದಾರೆ.

ಒಟ್ಟಾರೆ.. ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೇ ರೋಚಕ ತಿರುವು ಪಡೆದುಕೊಳ್ತಿದೆ. ಮೈತ್ರಿ ಪಡೆಯಲ್ಲಿ ಟಿಕೆಟ್ ಕಿತ್ತಾಟ ಜೋರಾಗಿದೆ. ಇದನ್ನು ಹೈಕಮಾಂಡ್​ ಯಾವ ರೀತಿ ಬಹೆಹರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ದರ್ಶನ್​​ಗೆ ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿನ ದರ್ಶನ; ಜೈಲು ಸವಾರಿ ರೂಟ್ ಮ್ಯಾಪ್ ಹೇಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ಬಿಸಿ ತುಪ್ಪವಾದ ಚನ್ನಪಟ್ಟಣ ಬೈ ಎಲೆಕ್ಷನ್; ದೋಸ್ತಿಗಳ ನಿದ್ದೆಗೆಡಿಸಿದ ಸೈನಿಕ ಎಸೆದ ಆ ಬಾಣ..!

https://newsfirstlive.com/wp-content/uploads/2024/08/CP_YOGESHWARA_NIKHIL.jpg

Load More