newsfirstkannada.com

ಸಿಎಂ ಸಿದ್ದರಾಮಯ್ಯಗೆ ಇಂದು ಮಹತ್ವದ ದಿನ; ಡಿಸಿಎಂ ಡಿಕೆಶಿಗೂ ಟೆನ್ಷನ್, ಟೆನ್ಷನ್..!

Share :

Published August 29, 2024 at 7:41am

    ಪ್ರಾಸಿಕ್ಯೂಷನ್​​​ ರಿಟ್​​​.. ಏನಾಗಲಿದೆ ಸಿದ್ದರಾಮಯ್ಯ ಭವಿಷ್ಯ?

    ಇವತ್ತಿನ ಹೈಕೋರ್ಟ್​​​ ಬೆಳವಣಿಗೆಯತ್ತ ದೇಶದ ಚಿತ್ತ!

    ಮುಡಾ ಕೇಸಲ್ಲಿ ತಾತ್ಕಾಲಿಕ ತಡೆ ವಿಸ್ತರಣೆ ಆಗುತ್ತಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಪ್ರಾಸಿಕ್ಯೂಷನ್​​ ಅನುಮತಿ ಪ್ರಕರಣದ ವಿಚಾರಣೆಯನ್ನು ಇವತ್ತು ಹೈಕೋರ್ಟ್​​ ಮತ್ತೆ ಕೈಗೆತ್ತಿಕೊಳ್ತಿದೆ. ಹೈಕೋರ್ಟ್​​ ನೀಡುವ ತೀರ್ಪಿನ ಮೇಲೆ ರಾಜ್ಯ ರಾಜಕೀಯದ ಮುಂದಿನ ಆಗು ಹೋಗುಗಳು ನಿರ್ಧಾರವಾಗಲಿವೆ. ಮತ್ತೊಂದೆಡೆ ಡಿಸಿಎಂ ಡಿ.ಕೆ.ಶಿಗೂ ಎದೆ ಬಡಿತ ಹೆಚ್ಚಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​. ಕಾಂಗ್ರೆಸ್​ ಪಕ್ಷದ ಜೋಡೆತ್ತುಗಳು. ಆದ್ರೆ ಕಾಂಗ್ರೆಸ್​ನ ಈ ಜೋಡೆತ್ತುಗಳಿಗೆ ಇವತ್ತು ಇಂಪಾರ್ಟ್​ಂಟ್​ ಡೇ. ಮುಡಾ ಇಡೀ ರಾಜ್ಯ ರಾಜಕಾರಣದ ಮೂಡ್​​​ ಬದಲಿಸುತ್ತಾ? ಕ್ಷಿಪ್ರಕ್ರಾಂತಿಗೆ ಮುನ್ನುಡಿ ಬರೆಯುತ್ತಾ? ಸಿದ್ದರಾಮಯ್ಯ ಕಾನೂನು ಕದನ ಏನಾಗಲಿದೆ? ಸಿಎಂ ಸಿಂಹಾಸನದ ಕಥೆ ಏನು? ಇವತ್ತು ಹೈಕೋರ್ಟ್​ನ ಕಟಕಟೆಯಲ್ಲಿ ಮುಡಾ ಮಹಾಯುದ್ಧದ ರಿಸಲ್ಟ್​​ ಮೇಲೆ ಇಡೀ ಕಥನವೇ ನಿಂತಿದೆ. ಇವತ್ತು ಏನಾಗಲಿದೆ ಅನ್ನೋ ದೇಶದ ಕುತೂಹಲದ ಕಣ್ಣು, ಕರ್ನಾಟಕ ಹೈಕೋರ್ಟ್​​ನತ್ತ ನೆಟ್ಟಿದೆ.

ಇದನ್ನೂ ಓದಿ:ದರ್ಶನ್​​ಗೆ ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿನ ದರ್ಶನ; ಜೈಲು ಸವಾರಿ ರೂಟ್ ಮ್ಯಾಪ್ ಹೇಗಿದೆ..?

ಪ್ರಾಸಿಕ್ಯೂಷನ್​​​ ರಿಟ್​​​.. ಏನಾಗಲಿದೆ ಸಿದ್ದು ಭವಿಷ್ಯ?
ಮುಡಾ ಸೈಟ್ ಹಂಚಿಕೆ ಹಗರಣ ಸಿಎಂ ಸಿದ್ದು ಗದ್ದುಗೆಯನ್ನೇ ನಡುಗಿಸ್ತಿದೆ. ಹೈಕೋರ್ಟ್ 10 ದಿನಗಳ ಕಾಲ ರಿಲೀಫ್​​ಗೆ ಜಾರಿದ್ದ ಸಿದ್ದು ರಿಟ್​​ ಅರ್ಜಿ, ಇವತ್ತು ಮತ್ತೆ ವಿಚಾರಣೆಗೆ ಬರಲಿದೆ. ಈ ಅರ್ಜಿ ಮೇಲೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಅವಲಂಭಿಸಿವೆ. ಇವತ್ತು ಮಧ್ನಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಈ ಹಿಂದೆ ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಅಭಿಷೇಕ್​ ಮನು ಸಂಘ್ವಿ, ರಾಜ್ಯಪಾಲರ ಕಚೇರಿಯ ಪರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ವಾದ ಮಂಡಿಸಿದ್ದರು. ಇವತ್ತೂ ಕೂಡ ತಮ್ಮ ವಾದ ಪ್ರತಿವಾದವನ್ನು ಮುಂದುವರೆಯಲಿದೆ.

ಆಗಸ್ಟ್​ 29 ರವರೆಗೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸದಂತೆ ಕೆಳಹಂತದ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು. ಈ ಮೂಲಕ ತಾತ್ಕಾಲಿಕ ರಿಲೀಫ್ ಕೊಟ್ಟಿತ್ತು. ಆದ್ರೀಗ ಹೈಕೋರ್ಟ್‌ನ ಮುಂದಿನ ನಡೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ನ್ಯಾಯಾಲಯದ ತೀರ್ಮಾನ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದ್ವೇಳೆ ತಾತ್ಕಾಲಿಕ ತಡೆಯನ್ನು ಹೈಕೋರ್ಟ್​ ವಿಸ್ತರಣೆ ಮಾಡಿದ್ರೆ ಸಿದ್ದರಾಮಯ್ಯಗೆ ಸಮಸ್ಯೆ ಏನು ಇಲ್ಲ. ಹೀಗಾಗಿ ಇವತ್ತಿನ ಹೈಕೋರ್ಟ್​ ವಿಚಾರಣೆ ಮೇಲೆ ಮುಂದಿನ ರಾಜಕೀಯ ಹಾಗೂ ಕಾನೂನು ಆಗುಹೋಗುಗಳು ನಿರ್ಧಾರ ಆಗಲಿವೆ.

ಇದನ್ನೂ ಓದಿ:Breaking: ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲು; ದರ್ಶನ್ ಕರೆದೊಯ್ದ ಪೊಲೀಸರು..!

ಡಿಸಿಎಂ ಡಿಕೆಶಿ ಪಾಲಿಗೂ ಇವತ್ತು ಮಹತ್ವದ ದಿನ
ಸಿಎಂ ಸಿದ್ದರಾಮಯ್ಯಗೆ ಮಾತ್ರವಲ್ಲ.. ಡಿಸಿಎಂ ಡಿ.ಕೆ.ಶಿವಕುಮಾರ್​ಗೂ ಇವತ್ತು ಅತಂತ್ಯ ಮಹತ್ವದ ದಿನವಾಗಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತೀರ್ಪು ಕೂಡ ಇವತ್ತು ಪ್ರಕಟವಾಗಲಿದೆ. ಸಿಬಿಐ ಮತ್ತು ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ಇವತ್ತಿಗೆ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಇದು ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆ.. ಇವತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿ ಇಬ್ಬರಿಗೂ ಬಿಗ್ ಡೇ. ಹೀಗಾಗಿ ರಾಜ್ಯ ಕಾಂಗ್ರೆಸ್​ನ ಚಿತ್ತ ಹೈಕೋರ್ಟ್​ನತ್ತ ಹರಿದಿದೆ. ರಾಜ್ಯಪಾಲರ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್​ಗೆ ಇವತ್ತು ಹೈಕೋರ್ಟ್​​​​​ನ ಹೈವೋಲ್ಟೇಜ್ ವಿಚಾರಣೆ ಏನಾಗಲಿದೆ ಅನ್ನೋ ಆತಂಕದಲ್ಲಿದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ.. ಬೂಮ್ರಾ ವಿಶ್ರಾಂತಿ ಹಿಂದಿನ ಸಿಕ್ರೇಟ್ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯಗೆ ಇಂದು ಮಹತ್ವದ ದಿನ; ಡಿಸಿಎಂ ಡಿಕೆಶಿಗೂ ಟೆನ್ಷನ್, ಟೆನ್ಷನ್..!

https://newsfirstlive.com/wp-content/uploads/2024/06/SIDDU-DKS.jpg

Load More