newsfirstkannada.com

ಎಲೆಕ್ಷನ್ ಹೊತ್ತಿನಲ್ಲೇ ಪ್ರಧಾನಿ ಮೋದಿ ಸರ್ಕಾರದಿಂದ CAA ಪ್ರಮಾಣ ಪತ್ರ ಹಸ್ತಾಂತರ

Share :

Published May 15, 2024 at 9:10pm

Update May 16, 2024 at 10:24am

  ಪಾಕಿಸ್ತಾನ ಮೂಲದ ಹಿಂದೂಗಳು ಸಲ್ಲಿಸಿದ್ದ ಅರ್ಜಿದಾರರಿಗೆ ಪೌರತ್ವ!

  ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ CAA ಜಾರಿಗೆ ತರುವ ಭರವಸೆ

  ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪೌರತ್ವದ ಹಕ್ಕಿನ ಪ್ರಮಾಣ ಪತ್ರ

ನವದೆಹಲಿ: ದೇಶಾದ್ಯಂತ 4 ಹಂತದ ಲೋಕಸಭಾ ಚುನಾವಣೆ ಮುಗಿದಿದ್ದು, ಇನ್ನೂ 3 ಹಂತದ ಮತದಾನ ಬಾಕಿ ಇದೆ. ಅತಿ ಹೆಚ್ಚು ಮತದಾರರ ಹಾರ್ಟ್‌ಲ್ಯಾಂಡ್‌ ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 163 ಕ್ಷೇತ್ರಗಳಲ್ಲಿ ಪ್ರಚಾರ ರಂಗೇರಿದೆ.

ಇದನ್ನೂ ಓದಿ: 380ರಲ್ಲಿ BJP ಗೆದ್ದಿರೋದು ಎಷ್ಟು? ಅಣ್ಣಾಮಲೈ ಬಿಚ್ಚಿಟ್ರು ಸ್ಫೋಟಕ ಚುನಾವಣಾ ಭವಿಷ್ಯ; ಹೇಳಿದ್ದೇನು? 

ಲೋಕಸಭಾ ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿರುವಾಗಲೇ ಪ್ರಧಾನಿ ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯಿದೆ (CAA)ಯ ಪ್ರಮಾಣ ಪತ್ರವನ್ನು ಹಸ್ತಾಂತರ ಮಾಡಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇದೇ ಮೊದಲ ಬಾರಿಗೆ ಪೌರತ್ವ ಪ್ರಮಾಣ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ. 14 ನಾಗರಿಕರು ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಆಯ್ಕೆಯಾಗಿದ್ದು, ಫಲಾನುಭವಿಗಳಿಗೆ ಇಂದು ಪ್ರಮಾಣ ಪತ್ರವನ್ನು ಹಸ್ತಾಂತರ ಮಾಡಲಾಗಿದೆ.

2014, ಡಿಸೆಂಬರ್ 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದವರು ಭಾರತದ ನಾಗರಿಕ ಹಕ್ಕು ಪಡೆಯಲು ಅವಕಾಶ ನೀಡಲಾಗಿದೆ. ಈ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ 300 ಜನ ತಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದರು. ಇದರಲ್ಲಿ ಮೊದಲ ಬಾರಿಗೆ ಇಂದು 14 ಮಂದಿಗೆ ಪೌರತ್ವ ಸರ್ಟಿಫಿಕೇಟ್ ನೀಡಲಾಗಿದ್ದು, ಭಾರತದ ನಾಗರಿಕ ಹಕ್ಕು ಪಡೆದಿದ್ದಾರೆ. CAA ಸರ್ಟಿಫಿಕೇಟ್ ಪಡೆಯಲು ಪಾಕಿಸ್ತಾನ ಮೂಲದ ಹಿಂದೂಗಳೇ ಅತಿ ಹೆಚ್ಚು ಅರ್ಜಿದಾರರಾಗಿದ್ದರು.

CAA ಸರ್ಟಿಫಿಕೇಟ್ ಪಡೆದ ಭಾರತದ ನೂತನ ನಾಗರಿಕರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ನಮಗೆ ಈಗ ಹೊಸ ಜೀವನವೇ ಸಿಕ್ಕಂತೆ ಆಗಿದೆ. ಸತತ 10-12 ವರ್ಷದಿಂದ ನಾವು ನಾಗರಿಕ ಹಕ್ಕು ಪಡೆಯಲು ಹೋರಾಟ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಪೌರತ್ವದ ಹಕ್ಕಿನ ಪ್ರಮಾಣ ಪತ್ರ ನೀಡಿರೋದು ಇಡೀ ರಾಷ್ಟ್ರದಲ್ಲೇ ಸಂಚಲನ ಸೃಷ್ಟಿಸಿದೆ. ಬಿಜೆಪಿ ಪಕ್ಷ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ CAA ಜಾರಿಗೆ ತರುವ ಭರವಸೆ ನೀಡಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದಲ್ಲಿ CAA ಜಾರಿಗೆ ತರೋದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ದೇಶದ ಜನರಿಗೆ ಬಿಜೆಪಿ ಪಕ್ಷ, ಪ್ರಧಾನಿ ಮೋದಿ ಕೊಟ್ಟಿದ್ದ ಭರವಸೆಯನ್ನು 2024ರ ಲೋಕಸಭಾ ಚುನಾವಣೆ ಮುಗಿಯೋ ಮುನ್ನವೇ ಭರವಸೆ ಈಡೇರಿಸಿದ್ದಾರೆ.

ಮತದಾನದ ಹಕ್ಕು ಯಾವಾಗ?
ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಈಗ ಭಾರತದ ನಾಗರಿಕ ಹಕ್ಕಿನ ಪ್ರಮಾಣ ಪತ್ರ ನೀಡಲಾಗಿದೆ. ಸರ್ಟಿಫಿಕೇಟ್ ಸ್ವೀಕರಿಸಿದವರು ಇಂದಿನಿಂದ ಭಾರತದ ಪ್ರಜೆಯಾಗಿದ್ದಾರೆ. ಆದರೆ ನಾಗರಿಕರಾದರೂ ಸದ್ಯಕ್ಕೆ ಮತದಾನದ ಹಕ್ಕು ಇರುವುದಿಲ್ಲ. ಲೋಕಸಭಾ ಚುನಾವಣೆ ಮುಗಿದ ಬಳಿಕ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಬೇಕು. ಅದಾದ ಮೇಲೆ ಪೌರತ್ವ ಪಡೆದವರು ತಮ್ಮ ನಾಗರಿಕ ಹಕ್ಕು ಚಲಾಯಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲೆಕ್ಷನ್ ಹೊತ್ತಿನಲ್ಲೇ ಪ್ರಧಾನಿ ಮೋದಿ ಸರ್ಕಾರದಿಂದ CAA ಪ್ರಮಾಣ ಪತ್ರ ಹಸ್ತಾಂತರ

https://newsfirstlive.com/wp-content/uploads/2024/05/India-CAA-Certificate.jpg

Load More