Advertisment

ಅಯ್ಯೋ ಪಾಪ.. 25 ದಿನಗಳಿಂದ ಅಮ್ಮನಿಗಾಗಿ ದುಃಖಿಸಿ, ದುಃಖಿಸಿ ಪ್ರಾಣಬಿಟ್ಟ ಮರಿಯಾನೆ

author-image
Ganesh
Updated On
ಅಯ್ಯೋ ಪಾಪ.. 25 ದಿನಗಳಿಂದ ಅಮ್ಮನಿಗಾಗಿ ದುಃಖಿಸಿ, ದುಃಖಿಸಿ ಪ್ರಾಣಬಿಟ್ಟ ಮರಿಯಾನೆ
Advertisment
  • ಕೊಡಗಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ
  • 25 ದಿನಗಳಿಂದ ತಾಯಿಗಾಗಿ ಕಾಡು-ಊರು ಅಲೆಯುತ್ತಿತ್ತು
  • ಅರಣ್ಯ ಇಲಾಖೆ ರಕ್ಷಣೆ ಮಾಡಿ ಮರಿಯಾನೆಗೆ ಆರೈಕೆ ಮಾಡ್ತಿತ್ತು

ಕೊಡಗು: ತಾಯಿಯಿಂದ ಬೇರ್ಪಟ್ಟು ತಬ್ಬಲಿಯಾಗಿದ್ದ ಮರಿಯಾನೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ.

Advertisment

5 ತಿಂಗಳ ಮರಿಯಾನೆ ತಾಯಿಗಾಗಿ ಅಲೆದು, ಅಲೆದು ನಿತ್ರಾಣಗೊಂಡಿತ್ತು. ಇದನ್ನು ಗಮನಿಸಿದ್ದ ಅರಣ್ಯ ಸಿಬ್ಬಂದಿ ಮರಿಯಾನೆಯನ್ನು ರಕ್ಷಿಸಿ ದುಬಾರೆ ಶಿಬಿರಕ್ಕೆ ಶಿಫ್ಟ್ ಮಾಡಿದ್ದರು. ಗಂಜಿ, ಹಾಲು ನೀಡಿ ಆರೈಕೆ ಮಾಡುತ್ತಿದ್ದರು. ವನ್ಯಜೀವಿ ವೈದ್ಯ ಡಾ.ಚೆಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು.

ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ನಟನ ಕೊಲೆ ಮಾಡಲು ಬಂದವರು ಅಂತಿಂಥ ಜನ ಅಲ್ಲ..!

ಕೊಂಚ ಚೇತರಿಸಿಕೊಂಡಿದ್ದ ಮರಿಯಾನೆ ಬೆಳಗ್ಗೆ ಸಾವನ್ನಪ್ಪಿದೆ. ಅರಣ್ಯ ಇಲಾಖೆಯಿಂದ ಮೃತ ಆನೆ ಮರಿಯ ಅಂತ್ಯಸಂಸ್ಕಾರ ನಡೆದಿದೆ. 25 ದಿನಗಳಿಂದ ತಾಯಿಗಾಗಿ ಕಾಡು-ಊರು ಅಲೆಯುತ್ತಿತ್ತು. ಎಲ್ಲಿಯೂ ತಾಯಿ ಸಿಗದ ಹಿನ್ನಲೆ ಮರಿಯಾನೆ ಉಂಟಿಯಾಗಿತ್ತು. ರಕ್ಷಣೆಯಾದರೂ ಕೂಡ ಬದುಕುಳಿಯದ ದುರಂತ ಅಂತ್ಯ ಕಂಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment