newsfirstkannada.com

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ನಟನ ಕೊಲೆ ಮಾಡಲು ಬಂದವರು ಅಂತಿಂಥ ಜನ ಅಲ್ಲ..!

Share :

Published April 16, 2024 at 8:06am

  ಶೂಟರ್ಸ್​​ ಅರೆಸ್ಟ್, ಹೊಣೆ ಹೊತ್ತ ಆ ಗ್ಯಾಂಗ್..!

  ಭಾನುವಾರ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ

  ಗುಜರಾತ್​​ನಿಂದ ಮುಂಬೈಗೆ ಬಂದಿದ್ದ ದಾಳಿಕೋರರು

ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಬಳಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಗುಜರಾತ್‌ನ ಭುಜ್‌ನಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ವಿಕ್ಕಿ ಗುಪ್ತ (24), ಸಾಗರ್ ಪಾಲ್ (21) ಬಂಧಿತ ಆರೋಪಿಗಳು.

ಇಬ್ಬರು ಆರೋಪಿಗಳನ್ನು ಗುಜರಾತ್​ನಿಂದ ಮುಂಬೈಗೆ ಕರೆ ತಂದಿದ್ದಾರೆ. ಬಂಧಿತ ಆರೋಪಿಗಳು ಬಿಹಾರದ ಚಂಪರಣ್ ಜಿಲ್ಲೆಯವರು ಎಂದು ತನಿಖೆಯಿಂದ ತಿಳಿದುಬಂದಿದೆ. ಕಳೆದ ಭಾನುವಾರ ಮುಂಜಾನೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಗುಂಡಿನ ದಾಳಿ ನಡೆದಾಗ ಸಲ್ಮಾನ್ ಖಾನ್ ಮನೆಯಲ್ಲೇ ಇದ್ದರು ಎನ್ನಲಾಗಿದ್ದು, ಕೃತ್ಯದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಇದನ್ನೂ ಓದಿ:ಯುವಕನಿಂದ ನಿರಂತರ ಕಿರುಕುಳ; ನೊಂದು ವಿಷ ಸೇವಿಸಿ ಪ್ರಾಣಬಿಟ್ಟ ಬಾಲಕಿ

ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕಳೆದ ಭಾನುವಾರ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ದಾಳಿ ನಡೆಸಿದ ಆರೋಪಿಗಳು ಇವರೇ ಆಗಿದ್ದಾರೆ. ಗುಜರಾತ್​​ನ ಭುಜ್ ಜಿಲ್ಲೆಯಿಂದ ಕಳೆದ ಗುರುವಾರ ಬೆಳಗ್ಗೆ ಮುಂಬೈಗೆ ಬಂದಿದ್ದರು ಎಂದು ತಿಳಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ಮನೆ ಮೇಲೆ ನಡೆದ ದಾಳಿಯನ್ನು ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಹೊತ್ತುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿ, ದಾಳಿ ನಡೆಸಿದ್ದು ನಾವೇ ಎಂದಿದ್ದಾನೆ.

ಇದನ್ನೂ ಓದಿ:ಮೇಲ್ಸೇತುವೆಯಿಂದ ಬಸ್ ಪಲ್ಟಿ, ಐವರು ಸಾವು.. 38 ಪ್ರಯಾಣಿಕರು ಗಂಭೀರ

ಜೈಲು ಸೇರಿರುವ ಗ್ಯಾಂಗ್​ಸ್ಟರ್​ ಬಿಷ್ಣೋಯಿ ಮತ್ತೊಬ್ಬ ಗ್ಯಾಂಗ್​ಸ್ಟರ್​ ಬ್ರಾರ್​ ಹಲವು ಬಾರಿ ಸಲ್ಮಾನ್ ಖಾನ್ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ವರದಿಗಳ ಪ್ರಕಾರ, ಇವರೇ ಶೂಟರ್ಸ್​​ ಅನ್ನು ಮುಂಬೈಗೆ ಕಳುಹಿಸಿದ್ದರು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ನಟನ ಕೊಲೆ ಮಾಡಲು ಬಂದವರು ಅಂತಿಂಥ ಜನ ಅಲ್ಲ..!

https://newsfirstlive.com/wp-content/uploads/2024/04/SALMAN_KHAN.jpg

Load More