newsfirstkannada.com

ಆರ್​​​ಸಿಬಿಗೆ ಮತ್ತೊಂದು ಆಘಾತ; ಇಂದು ಕ್ಯಾಮೆರಾನ್​ ಗ್ರೀನ್​ ಆಡೋದು ಡೌಟ್​; ಕಾರಣವೇನು?

Share :

Published May 22, 2024 at 5:26pm

Update May 22, 2024 at 5:43pm

    ಇಂದು ಆರ್​​ಸಿಬಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ಎಲಿಮಿನಿನೇಷನ್​​ ಪಂದ್ಯ

    ಎಲಿಮಿನೇಷನ್​​ ಪಂದ್ಯಕ್ಕೆ ಮುನ್ನವೇ ಆರ್​​ಸಿಬಿಗೆ ಮತ್ತೊಂದು ಆಘಾತ!

    ಆರ್​​ಸಿಬಿ ಪರ ಸ್ಟಾರ್​ ಆಲ್​​ರೌಂಡರ್​​ ಕ್ಯಾಮೆರಾನ್​ ಗ್ರೀನ್​ ಆಡೋದು ಡೌಟ್​​

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​ ಹೈವೋಲ್ಟೇಜ್​​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ವಿರುದ್ಧ 27 ರನ್​ಗಳಿಂದ ಗೆದ್ದು ಬೀಗುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಗ್ರ್ಯಾಂಡ್​ ಎಂಟ್ರಿ ನೀಡಿತ್ತು. ಆರ್​​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ನೀಡಲು ಕಾರಣರಾದ ಪ್ರಮುಖ ಆಟಾಗಾರರ ಪೈಕಿ ಸ್ಟಾರ್​ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​​ ಕೂಡ ಒಬ್ಬರು.

ಯೆಸ್​​, ಕ್ಯಾಮೆರಾನ್​ ಗ್ರೀನ್​​ ಚೆನ್ನೈ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಬಾಲ್​ ಮತ್ತು ಬ್ಯಾಟ್​​​ನಲ್ಲೂ ಸಾಕಷ್ಟು ಕೊಡುಗೆ ನೀಡಿದ್ರು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​​ಸಿಬಿ ಕೈ ಹಿಡಿದ ಕ್ಯಾಮೆರಾನ್​ ಗ್ರೀನ್​​ 17 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಚಚ್ಚಿದ್ರು. ಜತೆಗೆ 2 ಓವರ್​ ಬೌಲಿಂಗ್​​ ಮಾಡಿ 1 ವಿಕೆಟ್​ ತೆಗೆದ್ರು.

ಸದ್ಯ ಚೆನ್ನೈ ವಿರುದ್ಧ ಗೆದ್ದು ಆರ್​​ಸಿಬಿ ಪ್ಲೇ ಆಫ್​ಗೆ ಹೋಗಿದೆ. ಇಂದು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆರ್​​ಸಿಬಿ ಪ್ಲೇ ಆಫ್​​ ಪಂದ್ಯ ಆಡಲಿದೆ. ಈ ಮುನ್ನವೇ ಆರ್​​ಸಿಬಿಗೆ ಬಿಗ್​ ಶಾಕ್​ ಕಾದಿದೆ. ಕಳೆದ ಪಂದ್ಯದಲ್ಲಿ ಕ್ಯಾಮೆರಾನ್​ ಗ್ರೀನ್​ ಇಂಜುರಿಗೆ ಒಳಗಾಗಿದ್ದು, ಇಂದು ಆಡ್ತಾರೋ ಇಲ್ಲವೋ ಅನ್ನೋ ಚರ್ಚೆ ಶುರುವಾಗಿದೆ. ಒಂದು ವೇಳೆ ಆಡಿದ್ರೂ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಬಹುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಜಸ್ಥಾನ್​​ ವಿರುದ್ಧ ಪಂದ್ಯಕ್ಕೂ ಮುನ್ನವೇ ಆರ್​​​ಸಿಬಿಗೆ ಬಿಗ್​ ಶಾಕ್​​.. ಹೀಗಾದ್ರೆ ಏನ್​ ಕಥೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಮತ್ತೊಂದು ಆಘಾತ; ಇಂದು ಕ್ಯಾಮೆರಾನ್​ ಗ್ರೀನ್​ ಆಡೋದು ಡೌಟ್​; ಕಾರಣವೇನು?

https://newsfirstlive.com/wp-content/uploads/2024/05/Cameron-Green_RCB1.bmp

Load More