/newsfirstlive-kannada/media/media_files/2025/09/06/job_army-2025-09-06-09-20-16.jpg)
ಭಾರತೀಯ ಸೇನೆ ಸೇರಬೇಕೆಂಬ ಆಸೆಯೇ? ದೇಶ ಸೇವೆ ಮಾಡಬೇಕೆಂಬ ಹಂಬಲವೇ? ಗಡಿಯಲ್ಲಿ ಎದೆಯುಬ್ಬಿಸಿ ಹೋರಾಡಬೇಕು ಅನ್ನೋ ಛಲವೇ? ಹಾಗಾದ್ರೆ ಇಲ್ಲಿರುವ ಮಾಹಿತಿ ಕಂಪ್ಲೀಟ್ ಆಗಿ ಮನನ ಮಾಡಿಕೊಳ್ಳಿ. ಸೇನೆಗೆ ಸೇರಬೇಕು ಅನ್ನೋ ಸಾವಿರಾರು ಯುವಕರಿಗೆ ಸರ್ಕಾರವೇ ಉಚಿತ ಟ್ರೈನಿಂಗ್ ನೀಡುತ್ತಿದೆ.
ಭಾರತೀಯ ಸೇನೆ ಸೇರಿದಂತೆ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದವರಿಗೆ ಸರ್ಕಾರದಿಂದಲೇ ಫ್ರೀ ಟ್ರೈನಿಂಗ್ ನೀಡಲಾಗುತ್ತಿದೆ. ಪ್ರವರ್ಗ- 1, 2(ಎ), 3(ಎ), ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ತರಬೇತಿಗಾಗಿ 3ನೇ ಬ್ಯಾಚ್ ಪ್ರಾರಂಭಿಸಲು ಈಗ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಇನ್ನೂ ಅರ್ಜಿ ಹಾಕೋಕೆ ಅರ್ಹತೆ?
ಅಭ್ಯರ್ಥಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು. ಅದ್ರಲ್ಲೂ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿರಬೇಕು. ಕುಟುಂಬದ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ.ನಿಂದ 10 ಲಕ್ಷ ರೂ. ವರೆಗೂ ಇರಬೇಕು. ಅಭ್ಯರ್ಥಿ 10ನೇ ತರಗತಿ ಪಾಸ್ ಆಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕ ಪಡೆದಿರಬೇಕು. ಇವ್ರ ಪರ್ಸಂಟೇಜ್ 45ರಷ್ಟು ಇರಬೇಕು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಧಾರಾಕಾರ ಮಳೆ, ಭಾರೀ ಪ್ರವಾಹಕ್ಕೆ ಮುಳುಗಿದ ಹಳ್ಳಿಗಳು.. ಹೆಲಿಕಾಪ್ಟರ್ಗಳಿಂದ ರಕ್ಷಣಾ ಕಾರ್ಯಾಚರಣೆ
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವಯಸ್ಸು 17 ರಿಂದ 20 ವರ್ಷದೊಳಗಿರಬೇಕು. ತರಬೇತಿಯನ್ನು ಕಲಬುರಗಿ ಜಿಲ್ಲೆಯಲ್ಲಿ ಇರೋ ಕೇಂದ್ರ ಸ್ಥಳದಲ್ಲೇ ನೀಡಲಾಗುವುದು. ಆಸಕ್ತರು ಅರ್ಜಿಯನ್ನು ಕಲಬುರಗಿ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸಲ್ಲಿಸಬಹುದು. ಇಲ್ಲದಿದ್ರೆ ನೋಂದಾಯಿತ ಅಂಚೆ ಮೂಲಕ ಕೂಡ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 10 ಕೊನೆಯ ದಿನ ಆಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 81050 85410, 91484 89157 ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಕೂಡಲೇ ಅರ್ಹರು ಈ ಸುವರ್ಣಾವಕಾಶ ಬಳಸಿಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ