/newsfirstlive-kannada/media/media_files/2025/09/06/punjab-2025-09-06-08-59-02.jpg)
ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಕೊಂಚ ಕಡಿಮೆಯಾದರೂ, ಮಳೆಯಿಂದಾಗಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ವರುಣನ ಅಬ್ಬರಕ್ಕೆ ಪಂಜಾಬ್, ಉತ್ತರ ಪ್ರದೇಶದ ಜನರು ಜೀವ ಕೈಯಲ್ಲಿ ಹಿಡಿದು ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಬೆಳೆ, ರಸ್ತೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಳೆಯಿಂದ ನದಿಗಳ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆ.. ತನ್ನ ರೌದ್ರ ಪ್ರತಾಪದಿಂದ ಉತ್ತರ ಭಾರತವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿದೆ. ವರುಣನ ಅಬ್ಬರಕ್ಕೆ ಉತ್ತರ ಭಾರತ ನಲುಗಿ ಹೋಗ್ತಿದ್ದು, ಪಂಜಾಬ್, ಉತ್ತರದಲ್ಲಿ ಮಳೆಗೆ ಕೆಲವು ಗ್ರಾಮಗಳು ಜಲಾವೃತವಾಗಿವೆ. ಮಳೆ ನೀರು ನಿಂತ ರಸ್ತೆಗಳಲ್ಲಿ ಜನರು ಬೋಟ್ನಲ್ಲಿ ಸಂಚಾರ ಮಾಡಿದ್ದಾರೆ.
ಧಾರಾಕಾರ ಮಳೆ ಪಂಜಾಬ್ನ 23 ಜಿಲ್ಲೆಗಳಲ್ಲಿ ಪ್ರವಾಹ
ದಶಕಗಳಲ್ಲೇ ಅತ್ಯಂತ ಭೀಕರ ಪ್ರವಾಹ ಪಂಜಾಬ್‌ನಲ್ಲಿ ಸಂಭವಿಸಿದೆ. ಎಲ್ಲಾ 23 ಜಿಲ್ಲೆಗಳಲ್ಲಿ ಪ್ರವಾಹದ ದೃಷ್ಟಿಯಾಗಿದೆ. ಪಂಜಾಬ್‌ನಲ್ಲಿ, ನಿರಂತರ ಮಳೆಯಿಂದಾಗಿ ಬಿಯಾಸ್, ಸಟ್ಲಜ್, ರಾವಿ ಮತ್ತು ಘಗ್ಗರ್ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತೀರದ ಪ್ರದೇಶದ 1.75 ಲಕ್ಷ ಎಕರೆ ಕೃಷಿಭೂಮಿಯನ್ನು ಜಲಾವೃತವಾಗಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ.
ಮಳೆಗೆ ರಸ್ತೆ ಜಲಾವೃತ.. ಸಂಚಾರ ಮಾಡಲು ಜನರ ಪರದಾಟ
ಧಾರಾಕಾರ ಮಳೆಗೆ ಅಮೃತಸರನ ರಸ್ತೆಗಳು ಜಲಾವೃತವಾಗಿ ಜನರು ಪರದಾಡಿದ್ದಾರೆ. 3.5 ಲಕ್ಷ ಜನರ ಪರಿಣಾಮ ಬೀರಿದ್ದು, 20 ಸಾವಿರ ಜನರನ್ನು ಸ್ಥಲಾಂತರ ಮಾಡಿದ್ದಾರೆ. ಮಳೆ ನೀರಲ್ಲಿ ಸಿಲುಕಿಕೊಂಡವರನ್ನು ಹಗ್ಗ ಕಟ್ಟಿ ಟ್ರ್ಯಾಕ್ಟರ್ನಲ್ಲಿ ರಕ್ಷಣೆ ಮಾಡಿದ್ದಾರೆ. ಮತ್ತೊಂಡೆದೆ ಫಿರೋಜ್ಪುರದಲ್ಲಿ ಮಳೆಯ ಅಬ್ಬರಕ್ಕೆ ರಸ್ತೆಗಳು ಮುಳುಗಿದ್ದು, ಜನರು ರಸ್ತೆ ದಾಟಲು ಪರದಡಿದ್ದಾರೆ.
ಇನ್ನೂ ಲುಧಿಯಾನಾದಲ್ಲಿ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ಜನರು ಮನೆಯಿಂದ ಆಚೆ ಬರಲು ಪರದಾಡುವಂತಾಗಿದೆ.. ಮಳೆ ನೀರಿನಲ್ಲಿ ಕಾರುಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬೋಟ್ಗಳಲ್ಲಿ ಆಹಾರ, ನೀರು ಸರಬರಾಜು ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಎನ್ಡಿಆರ್ಎಫ್, ಆರ್ಮಿ, ನೇವಿ ಹಾಗೂ ಏರ್ ಫೋರ್ಸ್ ನಿಯೋಜನೆ ಮಾಡಲಾಗಿದೆ. 23 ಎನ್ಡಿಆರ್ಎಫ್ ತಂಡ, 35 ಹೆಲಿಕಾಪ್ಟರ್ಗಳಲ್ಲಿ ಜನರ ರಕ್ಷಣೆ ಮಾಡಲಾಗಿದ್ದು, ಬೋಟ್ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಜನರನ್ನು ರಕ್ಷಣೆ ಮಾಡಲಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ
ಉತ್ತರ ಪ್ರದೇಶದ ಮಥುರಾದಲ್ಲಿ ಯಮುನಾ ನದಿ ಅಪಾಯದ ಮಟ್ಟಕ್ಕಿಂತ 50 ರಿಂದ 60 ಸೆಂಟಿಮೀಟರ್‌ಗಳಷ್ಟು ಎತ್ತರಕ್ಕೆ ಹರಿಯುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಗ್ತಿದೆ. ವಿಶ್ರಾಮ್ ಘಾಟ್‌ನ ದೇವಾಲಯಗಳು ಜಲಾವೃತವಾಗಿದ್ದು, ಮೊಣಕಾಲುದ್ದ ನೀರಿನಲ್ಲೇ ತೆರಳಿ ಜನರು ಠಾಕೂರ್ಜಿಗೆ, ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಬುರುಡೆ ಗ್ಯಾಂಗ್‌ಗೆ ಮತ್ತೊಬ್ಬ ಸೇರ್ಪಡೆನಾ?
ಇನ್ನೂ ಸದರ್ ಮತ್ತು ಅಜಿತ್ಮಲ್ ತಹಸಿಲ್‌ಗಳ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.. ಸಿಕ್ರೋಡಿ, ಜುಹಿಖಾ, ಬಡೇರಾ ಮತ್ತು ತತಾರ್‌ಪುರ್ ಕಲಾನ್ ಸೇರಿದಂತೆ 10 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಘಾಗ್ರ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, 11 ಗ್ರಾಮಗಳಿಗೆ ನದಿ ನೀರು ನುಗ್ಗಿವೆ.. ಸಂಚಾರ ಮಾಡುವ ಜನರು ಬೋಟ್ಗಳ ಮೊರೆ ಹೋಗುತ್ತಿದ್ದಾರೆ.. ಶಹಜಾನ್ ಪುರದಲ್ಲಿ ಎಲ್ಲಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ..
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರತ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಭೀತಿ ಮಧ್ಯೆಯೇ ಜನರು ಬದುಕು ನಡೆಸುವಂತಾಗಿದೆ. ಇದೇ ರೀತಿ ಮಳೆ ಮುಂದುವರೆದ್ರೆ ಮತ್ತಷ್ಟು ಅನಾಹುತವಾಗೋದ್ರಲ್ಲಿ ಸಂಶಯವಿಲ್ಲ. ಸರ್ಕಾರ ಆದಷ್ಟು ಬೇಗ ಕಾಳಜಿ ಕೇಂದ್ರ ತೆರೆದು ನೆರವಿಗೆ ಧಾವಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ