/newsfirstlive-kannada/media/media_files/2025/09/06/chinnayya-2-2025-09-06-08-23-50.jpg)
ಧರ್ಮಸ್ಥಳ ವಿರುದ್ಧದ ಬುರುಡೆ ಪ್ರಕರಣಕ್ಕೆ ಇಂದು ಎರಡೆರಡು ದೊಡ್ಡ ಟ್ವಿಸ್ಟ್ ಸಿಕ್ಕಿವೆ. ಪ್ರಕರಣದ ಕೆಂದ್ರವಾಗಿದ್ದ ಚಿನ್ನಯ್ಯ ತಂದ ಬುರುಡೆಯ ಅಸಲಿಯತ್ತು ಬಯಲಿಗೆ ಬಂದಿದೆ. ಮತ್ತೊಂದೆಡೆ ವಿಠಲಗೌಡಗೂ ಎಸ್‌ಐಟಿ ವಿಚಾರಣೆ ಮಾಡಿದೆ. ಇತ್ತ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೆದಿದ್ದು, ಖಾವಂದರು ಧರ್ಮದೇವತೆಗಳ ಸಂದೇಶವನ್ನ ಭಕ್ತರಿಗೆ ತಿಳಿಸಿದ್ದಾರೆ.
ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಹೊರಬರ್ತಿರೋ ಸತ್ಯಸಂಗತಿಗಳು ಒಂದೊಂದಲ್ಲ. ಬುರುಡೆ ಗ್ಯಾಂಗ್‌ನ ಅಸಲಿಯತ್ತು ಬಯಲಾಗಿ ಬಿ ಗ್ಯಾಂಗ್‌ನ ಸದಸ್ಯರು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಇದೀಗ ಬುರುಡೆ ಗ್ಯಾಂಗ್‌ಗೆ ಮತ್ತೊಬ್ಬರ ಸೇರ್ಪಡೆ ಆಗಿದ್ಯಾ ಎಂಬ ಸಂಶಯ ಮೂಡಿದೆ.
SIT ಮುಂದೆ ವಿಚಾರಣೆಗೆ ಹಾಜರಾದ ವಿಠಲ ಗೌಡ!
ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ, ಜಯಂತ್ ಟಿ, ಸುಜಾತಾ ಭಟ್ ಸೇರಿದಂತೆ ಹಲವರಿಗೆ ಎಸ್‌ಐಟಿ ವಿಚಾರಣೆ ಮಾಡಿದೆ. ಬುರುಡೆ ಹಿಂದಿರೋ ಅಸಲಿಯತ್ತನ್ನ ಬಯಲಿಗೆಳೆಯುವ ಕೆಲಸದಲ್ಲಿ ನಿರತವಾಗಿದೆ. ಇದ್ರ ಮಧ್ಯೆ ಬುರುಡೆ ರಹಸ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಸ್ಥಿಪಂಜರ ಪ್ರಕರಣದಲ್ಲಿ ಎಸ್‌ಐಟಿ ಮತ್ತೊಬ್ಬ ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸಿದೆ.
ವಿಠಲ ಗೌಡಗೆ ಎಸ್‌ಐಟಿ ವಿಚಾರಣೆ
- ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ವಿಠಲ ಗೌಡ
- ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ಸಂಪರ್ಕ
- ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ
- ಬುರುಡೆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ
- ಇದೇ ಆಯಾಮದಲ್ಲಿ ವಿಠಲ ಗೌಡಗೆ ಎಸ್‌ಐಟಿ ಪ್ರಶ್ನೆ
ಇದನ್ನೂ ಓದಿ:ಆಫರ್; 2,500 ರೂಪಾಯಿ ದಂಡ ಪಾವತಿಸಿದ ಸಿಎಂ ಸಿದ್ದರಾಮಯ್ಯ
ಆಪತ್ತು ದೂರಾಗಲಿ.. ವೀರೇಂದ್ರ ಹೆಗ್ಗಡೆ ಸಂದೇಶ!
ಬುರುಡೆ ಕೇಸ್ ಬಳಿಕ ಧರ್ಮಸ್ಥಳದಲ್ಲಿ ಸಮಾವೇಶಗಳು, ಜಾಥಾ, ಚಲೋ ನಡೆಯುತ್ತಲೇ ಇವೆ. ಇದೀಗ ನಿನ್ನೆ ಧರ್ಮಜಾಗೃತಿ ಸಮಾವೇಶ ನಡೀತು. ಈ ಸಮಾವೇಶದಲ್ಲಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಕುಟುಂಬಕ್ಕೆ ಅಪಾರ ಬೆಂಬಲ ವ್ಯಕ್ತವಾಯ್ತು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಭಾವುಕ ಮಾತುಗಳನ್ನಾಡಿದರು. ಕ್ಷೇತ್ರಕ್ಕೆ ಬಂದಿರುವ ಆಪತ್ತು ದೂರ ಆಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದರು.
ಧರ್ಮಸ್ಥಳದಲ್ಲಿ ಕವಿದಿದ್ದ ಅಪಪ್ರಚಾರದ ಕಾರ್ಮೋಡ ಸರಿಯುತ್ತಿದೆ. ಮತ್ತದೆ ಬೆಳಕಿನ ತೇಜಸ್ಸು ಹೆಚ್ಚಾಗುತ್ತಿದೆ. ಮಂಜುನಾಥನ ಭಕ್ತರಲ್ಲಿ ಅಚ್ಚಳಿಯದ ಭಕ್ತಿ ಭಾವ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ