/newsfirstlive-kannada/media/media_files/2025/10/24/job_bel-2025-10-24-14-14-46.jpg)
ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ಸಂಸ್ಥೆಯಲ್ಲಿ ಖಾಲಿ ಇರುವುದಂತಹ ಪ್ರೊಬೇಷನರಿ ಉದ್ಯೋಗಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ತಾಂತ್ರಿಕ ವಿದ್ಯಾರ್ಹತೆ ಪಡೆದವರು ಈ ಕೆಲಸಗಳಿಗೆ ಅರ್ಹರು ಆಗಿರುತ್ತಾರೆ. ಭಾರತದ ಅತ್ಯುತ್ತಮ ಸಂಸ್ಥೆಯಲ್ಲಿ ಹುದ್ದೆ ಪಡೆಯಲು ಆಸಕ್ತಿ ಇದ್ದವರು ಈ ಉದ್ಯೋಗಗಳನ್ನು ಪಡೆಯಲು ಯತ್ನಿಸಬಹುದು.
ತಾಂತ್ರಿಕ ವಿದ್ಯಾರ್ಹತೆ ಪಡೆದವರಿಗಾಗಿ ಬಿಇಎಲ್ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು ಖಾಲಿ ಇವೆ. ಇದರಿಂದ ಇದೀಗ ನೋಟಿಫಿಕೇಶನ್ ಅನ್ನು ಸಂಸ್ಥೆಯು ರಿಲೀಸ್ ಮಾಡಿದೆ. ಅದರಲ್ಲಿ ಯಾವೆಲ್ಲ ಮಾಹಿತಿ ಅಡಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ. ಎಷ್ಟು ಉದ್ಯೋಗಗಳು, ಅರ್ಜಿ ಶುಲ್ಕ, ಕೊನೆ ದಿನಾಂಕ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇತರೆ ಮಾಹಿತಿ ಇದೆ.
ಉದ್ಯೋಗದ ಹೆಸರು, ಎಷ್ಟು ಹುದ್ದೆಗಳು?
ಪ್ರೊಬೇಷನರಿ ಇಂಜಿನಿಯರ್, ಎಲೆಕ್ಟ್ರಾನಿಕ್ಸ್, ಇ ಗ್ರೇಡ್- 2; 175 ಹುದ್ದೆಗಳು
​ಪ್ರೊಬೇಷನರಿ ಇಂಜಿನಿಯರ್, ಮೆಕಾನಿಕಲ್ಸ್, ಇ ಗ್ರೇಡ್- 2; 109 ಜಾಬ್ಸ್
​ಪ್ರೊಬೇಷನರಿ ಇಂಜಿನಿಯರ್, ಕಂಪ್ಯೂಟರ್ ಸೈನ್ಸ್, ಇ ಗ್ರೇಡ್- 2; 42 ಹುದ್ದೆಗಳು
​ಪ್ರೊಬೇಷನರಿ ಇಂಜಿನಿಯರ್, ಎಲೆಕ್ಟ್ರಿಕಲ್, ಇ ಗ್ರೇಡ್- 2; 14 ಕೆಲಸಗಳು
ಒಟ್ಟು ಹುದ್ದೆಗಳು- 340
ಇದನ್ನೂ ಓದಿ:500ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಕೋರ್ಸ್ ಮಾಡಿದ್ರೆ ನಿಮಗೂ ಚಾನ್ಸ್​
/filters:format(webp)/newsfirstlive-kannada/media/media_files/2025/10/11/jobs_railway-2025-10-11-14-35-08.jpg)
ವಿದ್ಯಾರ್ಹತೆ
B.E / B.Tech / B.Sc, Engineering Graduate, in Electronics, Electronics and Communication, Electronics & Telecommunication, Communication, Telecommunication, Mechanical, Computer Science,
ಅರ್ಜಿ ಶುಲ್ಕ ಎಷ್ಟು?
ಒಬಿಸಿ, ಜನರಲ್ ಅಭ್ಯರ್ಥಿಗಳಿಗೆ- 1180 ರೂಪಾಯಿ
ಎಸ್​ಸಿ, ಎಸ್​ಟಿಗೆ ವಿನಾಯತಿ ಇದೆ
ಮಾಸಿಕ ಸಂಬಳ
40,000 ಇಂದ 1,40,000 ರೂಪಾಯಿಗಳು
ವಯೋಮಿತಿ- 25 ವರ್ಷಗಳು
ಉದ್ಯೋಗಗಳ ವರ್ಗೀಕರಣ
- ಯುಆರ್- 139
- ಇಡಬ್ಲುಎಸ್​- 34
- ಒಬಿಸಿ- 91
- ಎಸ್​ಸಿ- 51
- ಎಸ್​​ಟಿ- 25
ಉದ್ಯೋಗ ಮಾಡುವ ಸ್ಥಳಗಳು- ಬೆಂಗಳೂರು, ಪುಣೆ, ಹೈದರಾಬಾದ್, ಚೆನ್ನೈ ಮಚಲಿಪಟ್ಟಣ, ಪಂಚಕುಲ, ಕೊಟ್ವಾದ್ವಾರ, ನವಿ ಮುಂಬೈ,
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 14 ನವೆಂಬರ್ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us