Advertisment

ಪರೀಕ್ಷೆ ಶುಲ್ಕದಲ್ಲಿ KEA ಸುಲಿಗೆ.. ಪರೀಕ್ಷಾರ್ಥಿಗಳಿಗೆ ಬಿಗ್ ಶಾಕ್..!

ಖಾಲಿ ಇರೋ ಹುದ್ದೆಗಳಿಗೆ ಸರ್ಕಾರ ನೋಟಿಫಿಕೇಶನ್ ಮಾಡ್ತಿಲ್ಲ ಅಂತ ಆಕಾಂಕ್ಷಿಗಳು ಇಷ್ಟು ದಿನ ಒದ್ದಾಡ್ತಿದ್ದರು. ಆದ್ರೀಗ ನೋಟಿಫಿಕೇಶನ್ ಆಗ್ತಿದೆ. ಉದ್ಯೋಗಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಶುಲ್ಕದ ಬರೆ ಎಳೆದು ಶಾಕ್ ಕೊಟ್ಟಿದೆ.

author-image
Ganesh Kerekuli
SAAD ಮುಖ್ಯ ಪರೀಕ್ಷೆಗೆ ಅಧಿಸೂಚನೆ ರಿಲೀಸ್.. ಈ ಉದ್ಯೋಗಗಳಿಗೆ ಯಾರು ಅಪ್ಲೇ ಮಾಡಬಹುದು?
Advertisment

ಖಾಲಿ ಇರೋ ಹುದ್ದೆಗಳಿಗೆ ಸರ್ಕಾರ ನೋಟಿಫಿಕೇಶನ್ ಮಾಡ್ತಿಲ್ಲ ಅಂತ ಆಕಾಂಕ್ಷಿಗಳು ಇಷ್ಟು ದಿನ ಒದ್ದಾಡ್ತಿದ್ದರು. ಆದ್ರೀಗ ನೋಟಿಫಿಕೇಶನ್ ಆಗ್ತಿದೆ. ಉದ್ಯೋಗಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಶುಲ್ಕದ ಬರೆ ಎಳೆದು ಶಾಕ್ ಕೊಟ್ಟಿದೆ. ಬೆಂಕಿಯಿಂದ ಬಾಟಲೆಗೆ ಬಿದ್ದ ಪರಿಸ್ಥಿತಿಯಲ್ಲಿ ಸದ್ಯ ಅಭ್ಯರ್ಥಿಗಳು ಒದ್ದಾಡ್ತಿದ್ದಾರೆ.

Advertisment

ಇಷ್ಟು ದಿನಗಳ ಕಾಲ ಒಳಮೀಸಲಾತಿ ಸಮೀಕ್ಷೆ ಹಾಗೂ ಇನ್ನಿತರ ಕಾರಣಗಳಿಂದ ಯಾವುದೇ ಹುದ್ದೆಗಳ ನೇಮಕಾತಿ ಆಗಿರಲಿಲ್ಲ. ತಿಂಗಳಾನುಗಟ್ಟಲೇ ಓದುತ್ತಾ ಕೂತಿದ್ದ ಆಕಾಂಕ್ಷಿಗಳು ಆರ್ಥಿಕ ಸಮಸ್ಯೆ ಸೇರಿ ಸಾಕಷ್ಟು ತೊಂದರೆಗಳನ್ನ ಅನುಭವಿಸಿದರು‌. ‌ಅಂತೂ ಇಂತೂ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡ್ತಿದ್ದಾರೆ. ಅರ್ಜಿಗಳನ್ನ ಸಲ್ಲಿಸಲು ಹೋದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಶುಲ್ಕದ ಶಾಕ್ ಕೊಟ್ಟಿದೆ.

ಇದನ್ನೂ ಓದಿ:ತಾನೇ ಜನ್ಮ ಕೊಟ್ಟ ಮುದ್ದು ಮಕ್ಕಳ ಜೀವ ತೆಗೆದ ತಾಯಿ.. ಕಾರಣ ಏನ್ ಗೊತ್ತಾ..?

ಪರೀಕ್ಷೆಗೆ ತಾಗಿದ ಬೆಲೆ ಬಿಸಿ

  • ಬಿಡಿಎ, ಕಲ್ಯಾಣ ಕರ್ನಾಟಕ & ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ
  • ಕೃಷಿ ಮಾರಾಟ ಇಲಾಖೆ, KSDL ಸೇರಿ 8 ಇಲಾಖೆಗಳಿಗೆ ಅರ್ಜಿ ಆಹ್ವಾನ
  • FDA,SDA ಕಿರಿಯ ಸಹಾಯಕ ಸೇರಿ 708 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಸಾಮಾನ್ಯ ವರ್ಗದ ಅಭ್ಯರ್ಥಿಗಳು 1 ಅರ್ಜಿಗೆ ₹750 ಪಾವತಿಸಬೇಕಿದೆ
  • ಜೊತೆಗೆ ಪ್ರತಿ ಹೆಚ್ಚುವರಿ ಅರ್ಜಿಗೆ 100 ರೂಪಾಯಿ ಪಾವತಿಸಲು ಸೂಚನೆ
  • Puc, ಪದವಿ ಮೇಲೆ ಅರ್ಜಿ ಸಲ್ಲಿಸಿದ ಹುದ್ದೆಗಳಿಗೆ 2100ಕ್ಕೂ ಅಧಿಕ ಶುಲ್ಕ
  • ಎಸ್ಟ್​, ಎಸ್​ಸಿ ಅಭ್ಯರ್ಥಿಗಳು ಒಂದು ಅರ್ಜಿಗೆ ₹ 500 ಪಾವತಿಸಬೇಕಿದೆ
  • ಜೊತೆಗೆ ಹೆಚ್ಚುವರಿ ಪ್ರತಿ ಅರ್ಜಿಗೂ 100 ರೂಪಾಯಿ ಪಾವತಿಸಲು ಸೂಚನೆ
  • ಎಲ್ಲಾ ಹುದ್ದೆಗಳಿಗೂ 1600 ರೂ. ಹೆಚ್ಚು ಶುಲ್ಕ ಪಾವತಿಸಲು ಸೂಚನೆ
Advertisment

ಹಾಗ್ನೋಡಿದ್ರೆ ಕೆಪಿಎಸ್ಸಿ, ಯುಪಿಎಸ್ಸಿಯಲ್ಲೂ ಈ ರೀತಿಯಾದ ಪರೀಕ್ಷಾ ಶುಲ್ಕ ಇರಲ್ಲ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿ ನೋಟಿಫಿಕೇಶನ್‌ಗೂ ಶುಲ್ಕ ವಿಧಿಸಿ ಹಗಲು ದರೋಡೆ ಮಾಡ್ತಿದೆ. ಮೊದಲೇ ನಿಗದಿತ ಸಮಯಕ್ಕೆ ಸರಿಯಾಗಿ ನೋಟಿಫಿಕೇಶನ್ ಆಗಲ್ಲ. ಇದರ ಪರಿಣಾಮ, ಅಭ್ಯರ್ಥಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರ್ತಾರೆ.. ಈಗ ಪರೀಕ್ಷಾ ಶುಲ್ಕದಲ್ಲೂ ವಸೂಲಿಗೆ ಉದ್ಯೋಗಾಂಕ್ಷಿಗಳು ನಾವು ಏನ್ ಮಾಡೋದು? ಎಲ್ಲಿಗೆ ಹೋಗೋದು ಅನ್ನೋದು ಅಭ್ಯರ್ಥಿಗಳ ಮುಂದಿನ ಪ್ರಶ್ನೆಯಾಗಿದೆ. 

ಇದನ್ನೂ ಓದಿ: ಗಡಿನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ VN ರೆಡ್ಡಿ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KEA ಕರ್ನಾಟಕ ಪ್ರರೀಕ್ಷಾ ಪ್ರಾಧಿಕಾರ
Advertisment
Advertisment
Advertisment