ತಾನೇ ಜನ್ಮ ಕೊಟ್ಟ ಮುದ್ದು ಮಕ್ಕಳ ಜೀವ ತೆಗೆದ ತಾಯಿ.. ಕಾರಣ ಏನ್ ಗೊತ್ತಾ..?

author-image
Ganesh Kerekuli
Koppala Mother
Advertisment

    ಕೊಪ್ಪಳ: ಇಬ್ಬರು ಪುಟ್ಟ ಮಕ್ಕಳ ಜೀವ ತೆಗೆದು ತಾಯಿ ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಬೆಣಕಲ್ ಗ್ರಾಮದಲ್ಲಿ ನಡೆದಿದೆ. 

    30 ವರ್ಷದ ಲಕ್ಷ್ಮವ್ವ ಬಜಂತ್ರಿ ಮಕ್ಕಳಿಗೆ ನೇಣು  ಬಿಗಿದು, ನಂತರ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ. ಮೂರು ವರ್ಷ ಹಾಗೂ ಎರಡು ವರ್ಷದ ಇಬ್ಬರು ಮಕ್ಕಳು ಅಮ್ಮನ ಕೃತ್ಯಕ್ಕೆ ದಾರುಣ ಅಂತ್ಯ ಕಂಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ ನಡೆದಿದೆ. ಮಕ್ಕಳಾದ ಜಾನವಿ, ರಮೇಶ್ ಮೃತ ಮಕ್ಕಳು. 

    ಘಟನಾ ಸ್ಥಳಕ್ಕೆ ಕೊಪ್ಪಳ ಎಸ್​ಪಿ ರಾಮ್ ಅರಸಿದ್ದಿ ಭೇಟಿ ನೀಡಿದ್ದಾರೆ. ಈವರೆಗೆ ಯಾರೂ ದೂರು ಕೊಟ್ಟಿಲ್ಲ. ಲಕ್ಷ್ಮವ್ವ 2016 ರಲ್ಲಿ ವಿವಾಹ ವಾಗಿದ್ದರು. ಲಕ್ಷ್ಮವ್ವ ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಒಂದೇ ಕೊಠಡಿಯಲ್ಲಿ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಇದು ಆಮೆ ಮೊಲದ ಕತೆ.. ಜಾಹ್ನವಿ ಬಗ್ಗೆ ಇಂಚಿಂಚು ಮಾಹಿತಿ ಹೊರಹಾಕಿದ ಅಶ್ವಿನಿ ಗೌಡ..! VIDEO

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

    Koppal
    Advertisment