/newsfirstlive-kannada/media/media_files/2025/10/27/jahnvi-and-kavya-2025-10-27-20-39-49.jpg)
ಅಶ್ವಿನಿ ಗೌಡ ಮತ್ತು ಜಾಹ್ನವಿ ಬಿಗ್​ಬಾಸ್​ ಮನೆಯಲ್ಲಿ ಬಿಟ್ಟಿರಲಾಗದ ಕಿಚಿಕು ಗೆಳತಿಯರು ಎಂದು ಬಿಂಬಿತವಾಗಿತ್ತು. ಇದೀಗ ಜೀವದ ಗೆಳತಿಯರ ಮಧ್ಯೆ ಬಿರುಕು ಮೂಡಿದ್ದು ಒಬ್ಬರಿಗೊಬ್ಬರು ಕಿರುಚಾಡಿದ್ದಾರೆ. ಇವತ್ತಿನ ಎಪಿಸೋಡ್​ನ ಹೈಲೈಟ್ಸ್​ ಜಾಹ್ನವಿ vs ಅಶ್ವಿನಿ ಗೌಡ ಅವರ ಮುನಿಸಿನ ಕಹಾನಿಯಾಗಿದೆ..
ಗೆಳತಿ ಜಾಹ್ನವಿ ಮೇಲಿನ ಕೋಪಕ್ಕೆ ಸಂಬಂಧಿಸಿ ಅಶ್ವಿನಿ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ರಾಶಿಕಾ ಶೆಟ್ಟಿ ಜೊತೆ ಜಾಹ್ನವಿ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಆರಂಭದಲ್ಲಿ ಮಾತಿಗೆ ಎಳೆಯುವ ರಾಶಿಕಾ ಶೆಟ್ಟಿ.. ಇವಾಗ ನೀವು ಎಷ್ಟೆಲ್ಲ ಹೇಳಿಕೊಂಡು ಕೋಪ ಮಾಡಿಕೊಂಡ್ರಿ. ಭಿನ್ನಾಭಿಪ್ರಾಯ ಇದ್ದಾಗ ನೀವು ಕೂತ್ಕೊಂಡು ಬಗೆಹರಿಸಿಕೊಳ್ಳಬಹುದಿತ್ತು ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/10/27/jahnavi_ashwini-2025-10-27-09-41-37.jpg)
ಅದಕ್ಕೆ ಉತ್ತರಿಸುವ ಅಶ್ವಿನಿ ಗೌಡ.. ಹೌದು, ನಾನು ತುಂಬಾ ಸಲ ಹೇಳಿದ್ದೀನಿ. ಇವರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಯಾಕೋ ನನಗೆ ಇದು ಸರಿ ಬರುತ್ತಿಲ್ಲ. ಮೊದಲ ಬಾರಿಗೆ ಜಾಹ್ನವಿಯನ್ನ ಎಚ್ಚರಿಸಿದ್ದೇ ನಾನು. ಹೋಗಿ ಹೊರಗಡೆ ಬಂದು ಮಾತನ್ನಾಡಿ ಅಂತಾ. ಎಲ್ಲರೂ ಬಂದು ಒಂದು ರೀತಿ ಹೇಳಿದರೆ ಅವರು ಎಲ್ಲಿಯೂ ಕೂಡ ಸ್ಟ್ಯಾಂಡ್ ತೆಗೆದುಕೊಂಡಿರಲಿಲ್ಲ.
ಅವಳಿಂದಾಗಿಯೇ ನಾನು ಮಾತನ್ನಾಡಿ, ಮತನ್ನಾಡಿ ಎಲ್ಲಾ ಜಂಟಿಗಳಿಂದಲೂ ದುಷ್ಮನಿ ಕಟ್ಟಿಕೊಂಡೆ. ಆದರೆ ನಂಗೆ ಗೊತ್ತಿಲ್ಲ. ಇವರೆಲ್ಲ, ನೀನು ಮುಂದೆ ಹೋಗು, ನಿನ್ನ ಹಳ್ಳವನ್ನು ನೀನೇ ತೋಡಿಕೋ. ನಿಧಾನಕ್ಕೆ ನಿನ್ನನ್ನು ಮನೆಯಿಂದ ಕಳುಹಿಸಿ, ನಾವು ರೇಸ್​ನಲ್ಲಿ ನಿಧಾನಕ್ಕೆ ಬರ್ತೀವಿ ಅಂತಾ ಅವರು ಕತೆ ಹೇಳಿದರು ಗೊತ್ತಾ? ಅವರು ಆಮೆ ಮತ್ತು ಮೊಲದ ಕತೆ ಹೇಳಿದರು. ಆಗಲೇ ನನಗೆ ಅರ್ಥವಾಯಿತು. ಅದರ ಅರ್ಥ ಏನು?
ಆಮೆ ಮೊಲದ ಕತೆ ಅಶ್ವಿನಿ-ಜಾನ್ವಿ ಸ್ನೇಹಕ್ಕೆ ಕತ್ತರಿ ಹಾಕ್ತಾ?
— Colors Kannada (@ColorsKannada) October 27, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/c4WE7XqWSD
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us