Advertisment

ರಾಶಿಕಾರ ‘ಲವ್ ಬುಟ್ಟಿ’ಯಲ್ಲಿ ಸೂರಜ್ ಪರವಶ.. ಗೇಮ್​​ನಲ್ಲಿ ತಮಾಷೆಗೆ ಲೈನ್ ಹೊಡೆಯೋಕೂ ಬೇಕು ಪರ್ಮಿಷನ್..!

ಬಿಗ್​ಬಾಸ್​ ಮನೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್​ ಲವ್ ವಿಚಾರಕ್ಕೆ ಸುದ್ದಿ ಆಗ್ತಿದ್ದಾರೆ. ಇಬ್ಬರ ಮಧ್ಯೆ ಲವ್ ಎಂಬ ಹಾರ್ಟ್​ ಬೀಟ್ ಜೋರಾಗಿದ್ದು, ಸೂರಜ್ ಸಿಂಗ್ ಸಂಪೂರ್ಣವಾಗಿ, ರಾಶಿಕಾರ ಲವ್ ಬುಟ್ಟಿಗೆ ಬಿದ್ದಂತೆ ಕಾಣ್ತಿದೆ.

author-image
Ganesh Kerekuli
Suraj singh and Rashika Shetty (1)
Advertisment

ಬಿಗ್​ಬಾಸ್​ ಮನೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್​ ಲವ್ ವಿಚಾರಕ್ಕೆ ಸುದ್ದಿ ಆಗ್ತಿದ್ದಾರೆ. ಇಬ್ಬರ ಮಧ್ಯೆ ಲವ್ ಎಂಬ ಹಾರ್ಟ್​ ಬೀಟ್ ಜೋರಾಗಿದ್ದು, ಸೂರಜ್ ಸಿಂಗ್ ಸಂಪೂರ್ಣವಾಗಿ, ರಾಶಿಕಾರ ಲವ್ ಬುಟ್ಟಿಗೆ ಬಿದ್ದಂತೆ ಕಾಣ್ತಿದೆ. 

Advertisment

ಇದನ್ನೂ ಓದಿ: ಗಿಲ್ಲಿಗೂ ಭೇಷ್ ಹೇಳುತ್ತ, ಮೊದಲ ಬಾರಿಗೆ ಅಶ್ವಿನಿಯನ್ನು ಪ್ರಶಂಸಿದ ಕಿಚ್ಚ ಸುದೀಪ್..!

Suraj singh and Rashika Shetty

ಕಲರ್ಸ್ ಕನ್ನಡ ಇವತ್ತು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋ ಬಿಡುಗಡೆ ಮಾಡಿದೆ. ಪ್ರಮೋ ಪ್ರಕಾರ, ಬಿಗ್​​ಬಾಸ್ ಮನೆಯು ‘ಬಿಬಿ ಕಾಲೇಜು ಕ್ಯಾಂಪಸ್’ ಆಗಿ ಪರಿವರ್ತನೆಗೊಂಡಿದೆ. ಅಂತೆಯೇ, ಎಲ್ಲಾ ಸ್ಪರ್ಧಿಗಳು ಸ್ಟುಡೆಂಟ್​ ಲೈಫ್​​​ಗೆ ಮರಳಿದ್ದಾರೆ.. 

ಇದನ್ನೂ ಓದಿ: BBK12; ನಿನ್ನ ಫ್ರೆಂಡ್​ಶಿಪ್​ನಿಂದ ನನಗೆ ಕಳಂಕ ಬಂತು.. ಜಾಹ್ನವಿ- ಅಶ್ವಿನಿ ಗೌಡ ನಡುವೆ ಬಿಗ್ ಫೈಟ್​

Advertisment

SURAJ_RASHIKA

ಈ ಗೋಲ್ಡನ್​​ ಲೈಫ್​​ನಲ್ಲಿ ಸ್ಪರ್ಧಿಗಳು ಸಖತ್ತಾಗಿ ಎಂಜಾಯ್ ಮಾಡ್ತಿರೋದು ಕಂಡು ಬಂದಿದೆ. ಬಿಗ್​ಬಾಸ್ ಘೋಷಣೆ ಮಾಡ್ತಿದಂತೆಯೇ ಎಲ್ಲಾ ಸ್ಪರ್ಧಿಗಳು ಜೋರಾಗಿ ಕೂಗಿದ್ದು, ಅವರದ್ದೇ ಲೋಕದಲ್ಲಿ ಮುಳುಗಿದ್ದಾರೆ. ಕಾಲೇಜು ಲೈಫು ಅಂದ್ರೆ ಕೇಳೋದೇ ಬೇಡ. ಱಗಿಂಗ್, ಮಸ್ತಿ, ಲವ್ ಸ್ಟೋರಿ, ಫ್ರೆಂಡ್​ಶಿಪ್ ಎಲ್ಲವೂ ಇದ್ದೇ ಇರುತ್ತೆ. ಅಂತೆಯೇ ಬಿಬಿಕೆ ಕಾಲೇಜು ಕಾಂಪ್ಯಸ್​​ನಲ್ಲೂ ಅದು ಜೋರಾಗಿದೆ. 

ಇದನ್ನೂ ಓದಿ:‘ನಾನೇನಾದ್ರೂ..’ ಕೈಮುಗಿದು ಕ್ಷಮೆ ಕೇಳಿದ ಅಶ್ವಿನಿ ಗೌಡ.. ಯಾವ ವಿಷಯಕ್ಕೆ..?

Rashika and Suraj (1)

ಅದರಲ್ಲಿ ರಾಶಿಕಾ ಹಾಗೂ ಸೂರಜ್ ನಡುವಿನ ಸಂಭಾಷಣೆಯೊಂದು ವೀಕ್ಷಕರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಡೈನಿಂಗ್ ಹಾಲ್​​ನಲ್ಲಿ ಕೂತಿರುವ ಸೂರಜ್, ‘ನಾನು ಹುಡುಗಿಯರಿಗೆ ಲೈನ್ ಹೊಡೆಯಬಹುದಾ’ ಎಂದು ಕೇಳಿದ್ದಾರೆ. ಅದಕ್ಕೆ ರಾಶಿಕಾ ‘ನೀನು ಅದ್ರಲ್ಲೇ ಇದ್ದುಬಿಡು’ ಎಂದು ಹಸಿ ಕೋಪದಲ್ಲಿ ಹೇಳಿದ್ದಾರೆ. 

Advertisment

ಇದನ್ನೂ ಓದಿ: ಅಯ್ಯಯ್ಯೋ ಗಿಲ್ಲಿ ಹೆಂಗೆಲ್ಲ ಟ್ರೋಲ್ ಆಗವ್ರೆ ನೋಡ್ರಿ.. Video

Rashika and Suraj

ವೀಕ್ಷಕರ ಪ್ರಶ್ನೆ ಏನೆಂದರೆ, ‘ಬಿಬಿಕೆ ಕಾಲೇಜು ಕ್ಯಾಂಪಸ್’ ಎಂಬ ಗೇಮ್​​ನಲ್ಲೂ ತಮಾಷೆ, ತುಂಟಾಟ ಮಾಡಲು ರಾಶಿಕಾರ ಬಳಿ ಪರ್ಮಿಷನ್ ಕೇಳಬೇಕಾದ ಪರಿಸ್ಥಿತಿ ಸೂರಜ್​ ಸಿಂಗ್​ಗೆ ಬಂದು ಬಿಡ್ತಾ? ಸೂರಜ್ ಸಿಂಗ್, ಸಂಪೂರ್ಣವಾಗಿ ರಾಶಿಕಾರ ತೋಳಬಂಧಿಯಲ್ಲಿ ಸೆರೆಯಾಗಿಬಿಟ್ರಾ? ಹೀಗಾದ್ರೆ ಹೆಣ್ಮಕ್ಕಳ ಫೇವರಿಟ್ ಕಂಟೆಸ್ಟೆಂಟ್ ಸೂರಜ್ ಸಿಂಗ್ ಗೇಮ್ ಹೇಗೆ ಆಡ್ತಾರೆ ಎಂಬ ಕನ್ಸರ್ನ್​ ವೀಕ್ಷಕರದ್ದಾಗಿದೆ.  

ಇದನ್ನೂ ಓದಿ: BIGG BOSS ಕಾಲೇಜ್​​ ಆರಂಭ.. ಇವನು ನನಗೆ ಇಷ್ಟ, ಸೂರಜ್​ ನೋಡಿ ಹೇಳಿದ್ರಾ ರಾಶಿಕಾ..? 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Suraj Singh Rashika Shetty BBK12 Bigg Boss Kannada 12 Bigg boss
Advertisment
Advertisment
Advertisment