ಅಯ್ಯಯ್ಯೋ ಗಿಲ್ಲಿ ಹೆಂಗೆಲ್ಲ ಟ್ರೋಲ್ ಆಗವ್ರೆ ನೋಡ್ರಿ.. Video

ಬಿಗ್​ಬಾಸ್​ನಲ್ಲಿ ಕಾಮಿಡಿ ಮೂಲಕ ವೀಕ್ಷಕರ ಹೃದಯ ಗೆಲ್ಲುತ್ತಿರುವ ಗಿಲ್ಲಿ ನಟ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಅದನ್ನು ಇವತ್ತು ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದು, ಇವತ್ತು ರಾತ್ರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

author-image
Ganesh Kerekuli
Gilli (1)
Advertisment

ಬಿಗ್​ಬಾಸ್​​ ಮನೆಯಲ್ಲಿ ಕಾಮಿಡಿ ಕಚಗುಳಿ ಕೊಡ್ತಿರೋ ಗಿಲ್ಲಿ, ವೀಕ್ಷಕರ ಹೃದಯ ಗೆದ್ದಿದ್ದಾರೆ. ಕಾವು ಕಾವು ಅಂತಾ ಕಾವ್ಯ ಹಿಂದೆ ಬಿದ್ದಿರೋ ಗಿಲ್ಲಿ, ಇದೀಗ ಮೀಸೆ ಬೋಳಿಸಿಕೊಂಡು ಕ್ಲೀನ್ ಕೃಷ್ಣಪ್ಪ ಆಗಿದ್ದಾರೆ. 

ಕಾವ್ಯಾಳ ಹೃದಯ ಗೆಲ್ಲಲು ಶೇವ್ ಮಾಡ್ಕೊಂಡು ಕೊನೆಗೆ ಫಜೀತಿಗೆ ಸಿಲುಕಿ ಫುಲ್ ಶೇವ್ ಮಾಡಿದ್ದಾರೆ. ಈ ವಿಚಾರ ಸಂಡೆ ವಿತ್ ಬಾದ್​ಶಾ ಕಿಚ್ಚ ಸುದೀಪ್ ಎಪಿಸೋಡ್​ನಲ್ಲಿ ಚರ್ಚೆಯಾಗಿದೆ. ಆರಂಭದಲ್ಲೇ ಕಿಚ್ಚ ಸುದೀಪ್, ಕ್ಲೀನ್ ಕೃಷ್ಣಪ್ಪ ಗಿಲ್ಲಿ ಎಂದು ಗೇಲಿ ಮಾಡಿದ್ದಾರೆ.

ಇದನ್ನೂ ಓದಿ:Wow! ಬಿಗ್​ಬಾಸ್ ಬೆಡಗಿ.. ರಿಷಾ ಗೌಡ ತುಂಬಾನೇ ಸುಂದರಿ..!

Gilli

ಇದೀಗ ಕಲರ್ಸ್ ಕನ್ನಡ ಮತ್ತೊಂದು ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ಕಾವ್ಯ ಶೈವಗೆ ಗಿಲ್ಲಿ ವಿಚಾರದಲ್ಲಿ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸಂಪೂರ್ಣ ಅವಕಾಶವನ್ನು ಸುದೀಪ್ ನೀಡಿದ್ದಾರೆ. ಗಿಲ್ಲಿಯನ್ನು ನೀವು ಹೇಗೆಲ್ಲ ನೋಡಬೇಕು ಅಂತೀರೋ, ಹಾಗೆಲ್ಲ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. 

ಇತ್ತ ಕಾವ್ಯಾಳಿಗೆ ಕ್ಲೀನ್ ಕೃಷ್ಣಪ್ಪ ಆಗ್ತಿದ್ದಂತೆ ವೀಕ್ಷಕರು ಕೂಡ ಗಿಲ್ಲಿಯನ್ನು ವಿಭಿನ್ನ ರೀತಿಯಲ್ಲಿ ಕಂಡಿದ್ದಾರೆ. ಫೋಟೋ ಎಡಿಟ್ ಮಾಡಿ ಟ್ರೋಲ್ ಮಾಡಿದ್ದು, ಅದನ್ನು ಇವತ್ತು ಕಿಚ್ಚ ಸುದೀಪ್ ವೀಕ್ಷಕರಿಗೆ ತೋರಿಸಿದ್ದಾರೆ. ಆ ಫೋಟೋಗಳನ್ನು ನೋಡಿದ್ರೆ ನೀವು ಕೂಡ ಬಿದ್ದು, ಬಿದ್ದು ನಗ್ತೀರಿ.. 

ಇದನ್ನೂ ಓದಿ: ಗಿಲ್ಲಿ ನಗುವಿನ ಟಾನಿಕ್.. ಅಶ್ವಿನಿ ಮೇಲೆ ಕಾವ್ಯ ಬೆಂಕಿ ಕಿಡಿ.. ಬಿಗ್​ಬಾಸ್​ನಲ್ಲಿ ಇವತ್ತು ಏನೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Bigg Boss Kannada 12 Gilli Nata Bigg boss bigg boss kavya
Advertisment