/newsfirstlive-kannada/media/media_files/2025/10/26/kiccha-sudeep-7-2025-10-26-16-08-17.jpg)
ಬಿಗ್​​ಬಾಸ್​ನಲ್ಲಿ ಇವತ್ತು ‘ಸಂಡೆ ವಿತ್ ಬಾದ್​ ಷಾ ಸುದೀಪ್’ ಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್​ ಕನ್ನಡ, ಪ್ರೊಮೋ ಬಿಟ್ಟು ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದೆ.
ಮಲ್ಲಮ್ಮ ಆಟದ ಮೇಲೆ ಅಸಮಾಧಾನ
ಇವತ್ತು ಯಾವೆಲ್ಲ ವಿಚಾರಗಳು ಹೈಲೆಟ್​ ಆಗಲಿವೆ ಅನ್ನೋದು ಪ್ರೊಮೋದಲ್ಲಿ ತಿಳಿಸಲಾಗಿದೆ. ಮಲ್ಲಮ್ಮ ಮತ್ತು ಧ್ರುವಂತ್​ ಆಟದ ಬಗ್ಗೆ ಕಿಚ್ಚನ ಎದುರು ಚರ್ಚೆ ಆಗಿದೆ. ಈ ವೇಳೆ ಕಾಕ್ರೋಚ್​, ಧ್ರುವಂತ್ ಹಾಗೂ ಮಲ್ಲಮ್ಮರ ಆಟದ ವೈಖರಿ ಬಗ್ಗೆ ಮಾತನ್ನಾಡಿದ್ದಾರೆ. ಜೊತೆಗೆ ಗಿಲ್ಲಿ ಕೂಡ ಮಲ್ಲಮ್ಮ ಆಟದ ಮೇಲೆ ರಾಗ ಎಳೆದಿದ್ದಾರೆ. ಮಲ್ಲಮ್ಮ ವಿಚಾರದಲ್ಲಿ ಕಾಕ್ರೋಚ್ ಮಾತನ್ನಾಡಿದ್ದಕ್ಕೆ, ಬೇಸರಗೊಂಡಿದ್ದಾರೆ. ಈ ವಿಚಾರದಲ್ಲಿ ಧ್ರುವಂತ್ ಹಾಗೂ ಕಿಚ್ಚ ಸುದೀಪ್ ಅವರ ರಿಯಾಕ್ಷನ್ ಏನಾಗಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಅಶ್ವಿನಿ ಅವರೇ ಇನ್ನೂ ಚಿಕ್ಕವರಾಗೋಕೆ ಹೋಗಬೇಡಿ -ಕಿಚ್ಚ ಸುದೀಪ್ ಮತ್ತೆ ಕ್ಲಾಸ್​..!
ಮಲ್ಲಮ್ಮನ ಆಟಕ್ಕೆ ಧ್ರುವಂತ್ ಮುಳ್ಳಾದ್ರಾ?
— Colors Kannada (@ColorsKannada) October 26, 2025
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/KmbdJYe8Sk
ಕ್ಲೀನ್ ಕೃಷ್ಣಪ್ಪ ಗಿಲ್ಲಿ..!
ಇವತ್ತೂ ಕೂಡ ನಕ್ಕು ಸುಸ್ತಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಗಿಲ್ಲಿ ನೋಡ್ತಿದ್ದಂತೆಯೇ ಕ್ಲೀನ್ ಕೃಷ್ಣಪ್ಪ ಎಂದು ತಮಾಷೆ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಹಾಗೂ ಕಾವ್ಯ ನಡುವಿನ ಸಂಭಾಷಣೆ ನಗುವಿನ ಚಟಾಕಿ ಸಿಗಲಿದೆ. ಅದಕ್ಕೆ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದು, ಪ್ರೊಮೋ ಮಸ್ತ್ ಆಗಿದ್ದು, ವೀಕ್ಷಕರು ಕಾತುರರಾಗಿದ್ದಾರೆ.
ಕಾವುನ ಗಿಲ್ಲಿ ನೋಡಿದ್ದು ಎಲ್ಲಿ?
— Colors Kannada (@ColorsKannada) October 26, 2025
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/qrdmRdlN5S
ತಲೆಗೆ ಪಟಾರ್​ ಅಂತಾ ಕೊಟ್ಟ ಎದುರಾಳಿಗಳು..
ಇನ್ನು ತಮಗೆ ಇಷ್ಟವಾಗದ ಅಸ್ಪರ್ಧಿಗಳ ಮೇಲೆ ಆಕ್ರೋಶ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಬಿಗ್​ಬಾಸ್​ ಕಿಚ್ಚನ ಸಮ್ಮುಖದಲ್ಲಿ ವಿಶೇಷ ಚಟುವಟಿಕೆ ನೀಡಿದ್ದಾರೆ. ಅದರಲ್ಲಿ ಯಾರಾದರೂ ಸ್ಪರ್ಧಿಗಳಿಗೆ ಏನಾದರೂ ಹೇಳಬೇಕು ಅಂದರೆ ತಲೆ ಮೇಲೆ ಹೊಡೆದಂಗೆ ವಿಷಯ ಹೇಳಿಬಿಟ್ಟು ಬನ್ನಿ ಎಂದಿದ್ದಾರೆ. ಈ ಚಟುವಟಿಕೆಯಲ್ಲಿ ಮಲ್ಲಮ್ಮ ಕೂಡ ರೊಚ್ಚಿಗೆದ್ದಿದ್ದಾರೆ. ಅಶ್ವಿನಿ ಗೌಡ ಮೇಲೆ ಕಾವ್ಯ ಶೈವ ಆಕ್ರೋಶ ವ್ಯಕ್ತಪಡಿಸಿದ್ರೆ, ಜಾಹ್ನವಿ ಮೇಲೆ ರಿಷಾ ಗೌಡ, ರಿಷಾ ಗೌಡ ಮೇಲೆ ಜಾಹ್ನವಿ ರೊಚ್ಚಿಗೆದ್ದಿದ್ದಾರೆ.
ಇದನ್ನೂ ಓದಿ:ಅಶ್ವಿನಿ ಹಿಂದೆ ಬಿದ್ದಿದ್ದ ಜಾಹ್ನವಿಗೆ ವಾರ್ನ್ ಮಾಡಿದ ಕಿಚ್ಚ ಸುದೀಪ್..!
ಸ್ಪರ್ಧಿಗಳ ಆಟದ ದಿಕ್ಕನ್ನು ಒಡೆದ ಮಡಿಕೆನೇ ಸೂಚಿಸ್ತಾ?
— Colors Kannada (@ColorsKannada) October 26, 2025
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/JY6qg20woh
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us