/newsfirstlive-kannada/media/media_files/2025/10/25/rashika-3-2025-10-25-22-20-59.jpg)
ಬಿಗ್​ಬಾಸ್​ ಸೀಸನ್ 12ರಲ್ಲಿ (Bigg Boss) ಮತ್ತೊಂದು ಪ್ರೇಮಕತೆ ಹುಟ್ಟಿಕೊಂಡಿದೆ. ಇಷ್ಟುದಿನ ಗಿಲ್ಲಿ, ಕಾವ್ಯ ಮತ್ತು ರಿಷಾ ಗೌಡ ನಡುವಿನ ತಮಾಷೆ ಎನ್ನಬಹುದಾದ ತ್ರೀಕೋನ ಲವ್​ಸ್ಟೋರಿ ವೀಕ್ಷಕರನ್ನ ರಂಜಿಸಿತ್ತು. ಆದರೆ ರಾಶಿಕಾ ಹಾಗೂ ಸೂರಜ್ ಸಿಂಗ್ ನಡುವಿನ ಮನಸಿನ ಮಾತುಗಳು ಪ್ರೇಮದೆದೆಯ ಆಳಕ್ಕೆ ಇಳಿದಂತೆ ಕಾಣ್ತಿದೆ..
ಇದನ್ನೂ ಓದಿ: ಅಶ್ವಿನಿ ಅವರೇ ಇನ್ನೂ ಚಿಕ್ಕವರಾಗೋಕೆ ಹೋಗಬೇಡಿ -ಕಿಚ್ಚ ಸುದೀಪ್ ಮತ್ತೆ ಕ್ಲಾಸ್​..!
/filters:format(webp)/newsfirstlive-kannada/media/media_files/2025/10/25/rashika-and-suraj-2025-10-25-22-22-03.jpg)
ಇಂದು ರಾತ್ರಿ ಪ್ರಸಾರವಾದ ಸಂಚಿಕೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಚೇರ್​ (Rashika Shetty and Suraj Singh) ಮೇಲೆ ಕೂತು ಮಾತನ್ನಾಡ್ತಿದ್ದಾರೆ. ಮೊದಲಿಗೆ ಮಾತು ಆರಂಭಿಸುವ ರಾಶಿಕಾ ಶೆಟ್ಟಿ.. ಯಾಕೆ ನಿನ್ನೆಯಿಂದ ನನ್ನ ಮಾತನ್ನಾಡಿಸಬೇಕು ಅನಿಸಲಿಲ್ವಾ? ಯಾಕೆ ಸಪ್ಪೆಯಾಗಿ ಕೂತ್ಕೊಂಡು ಇದ್ದಾಳೆ ಅನಿಸಲೇ ಇಲ್ವಾ? ಎಂದು ಕೇಳಿದ್ದಾರೆ. ಅದಕ್ಕೆ ಮೌನ ಮುರಿದ ಸೂರಜ್​, ಇಲ್ಲ, ಇಲ್ಲ! ನೀವು ಕೂತಿರೋದನ್ನು, ನೋಟಿಸ್ ಮಾಡಿದೆ ಎನ್ನುತ್ತಾರೆ.
ಇದನ್ನೂ ಓದಿ: ಭಾಗ್ಯಳಿಗೆ ಹೊಸ ಪೂಜಾ ಸಿಕ್ಕಾಯ್ತು.. ಯಾರು ಇವರು..?
/filters:format(webp)/newsfirstlive-kannada/media/media_files/2025/10/25/rashika-and-suraj-3-2025-10-25-22-22-49.jpg)
ಆಮೇಲೆ ಏನಾಯ್ತ? ಎಂದು ಕೇಳುವ ರಾಶಿಕಾ ತಮ್ಮ ಮಾತನ್ನು ಮುಂದುರಿಸುತ್ತಾರೆ.. ‘ಏನೋ ನಿನ್ನೆ ರಕ್ಷಿತಾ ಟಾಪಿಕ್ ಆಯಿತು’ ಎಂದು ಕೇಳ್ಪಟ್ಟೆ. ಅದಕ್ಕೆ ನೀವು ಬೇಸರ ಮಾಡಿಕೊಂಡು ನನ್ನನ್ನು ಮಾತನ್ನಾಡಿಸಲಿಲ್ಲ ಅಂದುಕೊಂಡೆ. ಅದಕ್ಕೆ ಉತ್ತರಿಸುವ ಸೂರಜ್ ಹಾಗೆಲ್ಲ ಏನೂ ಇಲ್ಲ. ನೀವು ಒಂದೇ ಕಡೆ ಸ್ಟ್ರಕ್ ಆಗಿದ್ದೀರಿ.. ಗೇಮ್ ಆಡಿ ಅಂತಾ ಅವರ ಯೋಚನೆಯಲ್ಲಿ ಮಾತನ್ನಾಡಿದರು. ಅದು ಬಿಟ್ಟರೆ ಏನೂ ಇಲ್ಲ.
ಅದು ಓಕೆ. ನನ್ನನ್ನ ಯಾಕೆ ಮಾತನ್ನಾಡಿಸಿಲ್ಲ. ನಾನೇನಾದರೂ ಮಾಡಿದನಾ? ಏನಾದರೂ ಇದ್ದರೆ ಹೇಳು. ಬೆಳಗ್ಗೆ ಕೂಡ ಸ್ಪಂದನಾ ಜೊತೆಯಲ್ಲೇ ಕೂತು ಮಾತಾಡ್ತಾ ಇದ್ದೆ. ನಾನು ಅಂದುಕೊಂಡೆ ಅವರ ಜೊತೆ ಕಂಪರ್ಟಬಲ್ ಆಗಿದ್ದೀರಿ ಅನಿಸಿತು ಎಂದು ಪಿಸು ಗುಟ್ಟಿದ್ದಾರೆ ರಾಶಿಕಾ.
ಇದನ್ನೂ ಓದಿ: BBK 12 : ಮಲ್ಲಮ್ಮನ ಮಾತು ಚಪ್ಪಲಿಯಲ್ಲಿ ಹೊಡ್ದಂಗಾಯ್ತು ಅಂತ ಕಣ್ಣೀರಾಕಿದ್ಯಾಕೆ ಧ್ರುವಂತ್?
/filters:format(webp)/newsfirstlive-kannada/media/media_files/2025/10/25/rashika-and-suraj-1-2025-10-25-22-23-22.jpg)
ಇದೇ ವೇಳೆ ಕಿಚನ್​ನಿಂದ ಮಾತನ್ನಾಡುವ ಅಶ್ವಿನಿ ಗೌಡ.. ಸೂರಜ್ ಸಿಂಗ್ ನನ್ನ ಮಗ. ಆತನಿಗೆ 29 ವರ್ಷ. ಮನೆಯಲ್ಲಿರುವ ಮಗನಿಗೆ 19 ವರ್ಷ ಎನ್ನುತ್ತಾರೆ. ಸೂರಜ್ ಯಾವಾಗ ನಿಮ್ಮ ಮಗನಾದ ಎಂಬ ಪ್ರಶ್ನೆಗೆ, ಗಿಲ್ಲಿ ಉತ್ತರಿಸುತ್ತ ಯಾವಾಗ ರಾಶಿಕಾ ಸೊಸೆ ಆದಳೋ, ಆಗಲೇ ಸೂರಜ್ ಅವರ ಮಗನಾದ ಎಂದು ತಮಾಷೆ ಮಾಡಿದ್ದಾರೆ. ಆಗ ಅಶ್ವಿನಿ ಗೌಡ, ಹೌದು ಆ ವಿಚಾರವನ್ನು ಅವರಿಬ್ಬರಿಗೆ ಬಿಟ್ಟಿದ್ದೀನಿ ಎನ್ನುತ್ತಾರೆ.
ಇಷ್ಟೆಲ್ಲ ಮಾತನ್ನಾಡಿದರೂ ಸೂರಜ್ ಮತ್ತು ರಾಶಿಕಾ ತಲೆ ಕೆಡಿಸಿಕೊಳ್ಳದೇ ಮಾತನ್ನಾಡುತ್ತ ಇರುತ್ತಾರೆ. ಅವರು ಯಾರೇ ಏನೇ ಬಂದು ಹೇಳಿದರೂ ನಾನು ತಲೆ ಕೆಡಿಸಿಕೊಳ್ಳಲು. ನಾನು ಕಂಪರ್ಟಬಲ್ ಆಗಿರೋದಕ್ಕೆ ಮಾತಾಡ್ತಿದ್ದೀನಿ. ನೀನು ಯಾಱರೋ ಮಾತನ್ನು ಕೇಳಬೇಡ. ಚೆನ್ನಾಗಿಯೇ ಆಡುತ್ತಿದ್ದೆ. ಅದನ್ನೇ ಕಂಟಿನ್ಯೂ ಮಾಡು ಎನ್ನುತ್ತ.. ಬೇಜಾರಾಯ್ತಾ ನಿಂಗೆ.. ಎಂದು ಪ್ರಶ್ನೆ ಮಾಡಿದ್ದಾರೆ.
ಇಲ್ಲ, ನಾನು ಇಲ್ಲೇ ಕೂತ್ಕೊಂಡು ಇದ್ದರೂ, ನೀನು ಮುಂದೆ ಹೋಗ್ತಾನೇ ಇದ್ದೆ. ನಾನು ಕೂಡ ನಿನ್ನನ್ನು ನೋಡ್ತಿದ್ದೆ. ಎಲ್ಲೇ ಇದ್ದರೂ ಸಹ ನೀನು ನನ್ನನ್ನೇ ನೋಡ್ತಿದ್ದೆ. ಬೇರೆ ಏನೂ ಇಲ್ಲ. ನನಗೆ ನಿನ್ನ ಮೇಲೆ ಯಾವುದೇ ಬೇಜಾರು ಇಲ್ಲ ಎನ್ನುತ್ತ ರಾಶಿಕಾ ಕಡೆ ತಿರುಗಿ ನೋಡ್ತಾರೆ. ಆಗ ನೀನು ನನ್ನ ಹಾಗೆ ನೋಡಬೇಡ.. ಮುಜುಗರ.. ಎಂದು ಪ್ರೇಮ ನಿವೇದನೆಯನ್ನ ಹೇಳಿಕೊಂಡಿದ್ದಾರೆ ರಾಶಿಕಾ..
ಇದನ್ನೂ ಓದು:BBK 12 : ನೀವು ಎಲ್ಲರಿಗೂ ಬಕೆಟ್ ಹಿಡಿತ್ತಿದ್ದೀರಾ ? ಅಶ್ವಿನಿ ಗೌಡಗೆ ಗಿಲ್ಲಿ ಸಖತ್ ಕ್ಲಾಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us