Advertisment

ಅಶ್ವಿನಿ ಅವರೇ ಇನ್ನೂ ಚಿಕ್ಕವರಾಗೋಕೆ ಹೋಗಬೇಡಿ -ಕಿಚ್ಚ ಸುದೀಪ್ ಮತ್ತೆ ಕ್ಲಾಸ್​..!

ಬಿಗ್​ಬಾಸ್​ನಲ್ಲಿ ಇವತ್ತು ಕಿಚ್ಚ ಸುದೀಪ್ ಮತ್ತೆ ಗರಂ ಆಗಿದ್ದಾರೆ. ಕಾಕ್ರೋಚ್ ಸುಧೀ ಹಾಗೂ ಅಶ್ವಿನಿ ಗೌಡಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಡುವೆ ತೂರಿ ಬರುತ್ತಿರುವ ಪದಬಳಕೆಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ಕಾಕ್ರೋಚ್ ಸುಧೀ ಹಾಗೂ ಅಶ್ವಿನಿ ಗೌಡ ಮತ್ತೊಮ್ಮೆ ಹೆಡ್​ಲೈನ್ ಆಗಿದ್ದಾರೆ.

author-image
Ganesh Kerekuli
Ashwini Gowda (5)
Advertisment

ಬಿಗ್​ಬಾಸ್​ನಲ್ಲಿ ಇವತ್ತು ಕಿಚ್ಚ ಸುದೀಪ್ ಮತ್ತೆ ಗರಂ ಆಗಿದ್ದಾರೆ. ಕಾಕ್ರೋಚ್ ಸುಧೀ ಹಾಗೂ ಅಶ್ವಿನಿ ಗೌಡಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. 

Advertisment

ಗೇಮ್ ಆಡುವ ಆತುರ, ಆವೇಶದಲ್ಲಿ ಸ್ಪರ್ಧಿಗಳ ನಡುವೆ ತೂರಿ ಬರುತ್ತಿರುವ ಪದಬಳಕೆಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ಕಾಕ್ರೋಚ್ ಸುಧೀ ಹಾಗೂ ಅಶ್ವಿನಿ ಗೌಡ ಮತ್ತೊಮ್ಮೆ ಹೆಡ್​ಲೈನ್ ಆಗಿದ್ದಾರೆ. ಕಾಕ್ರೋಚ್ ಸುಧೀ, ರಕ್ಷಿತಾ ಶೆಟ್ಟಿಗೆ ಬಳಸಿರುವ ಸೆಡೆ ಪದದ ಅರ್ಥ ಕೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ: BBK 12 : ಮಲ್ಲಮ್ಮನ ಮಾತು ಚಪ್ಪಲಿಯಲ್ಲಿ ಹೊಡ್ದಂಗಾಯ್ತು ಅಂತ ಕಣ್ಣೀರಾಕಿದ್ಯಾಕೆ ಧ್ರುವಂತ್?

  • ಸುದೀಪ್: ಮಿಸ್ಟರ್ ಸುಧೀ ಸರ್.. ಸೆಡೆ ಎಂದರೆ ಏನು?
  • ಸುಧೀ: ಅದ್ ಚೈಲ್ಡ್ ಅಂತಾನೂ ಬರುತ್ತೆ ಸರ್..
  • ಸುದೀಪ್: ಅದು ಚೈಲ್ಡಾ..? ಹಂಗರೆ ನನಗೆ ಇನ್ಮೇಲೆ ನೀವು ಮಗು ಥರಾನೇ ಕಾಣ್ತೀರಾ.. ಕರೀಲಾ..?
  • ಸುಧೀ: ಕೋಪದಲ್ಲಿ ಬಂದುಬಿಡ್ತಣ್ಣ.. ಜಗಳದಲ್ಲಿ..
  • ಸುದೀಪ್: ಕೋಪದಲ್ಲಿ ಬಂದಿಲ್ಲ ಸರ್​.. ನಿಮ್ಮ ಮುಖದ ದೃಷ್ಟಿಕೋನ ಹಂಗಿದೆ.. ಈ ಥರಾ ಓವರ್​ ಡ್ರಾಮಾ ಮಾಡ್ಕೊಂಡು.. 10 ರೂಪಾಯಿ ಆ್ಯಕ್ಟಿಂಗ್ ಮಾಡ್ತಿರೋದು ಯಾರು?
  • ಸುದೀಪ್: ಅಶ್ವಿನಿ ಅವರೇ.. ಏಕವಚನದಲ್ಲಿ ಮಾತನ್ನಾಡಿದ್ರೆ ತಪ್ಪು.. ಹೆಣ್ಣಿನ ಮೇಲೆ ಮಾತನ್ನಾಡಿದ್ರೆ ತಪ್ಪು.. ಅದು ತಪ್ಪು, ಇದು ತಪ್ಪು ಅಂತೀರಿ.. ಈ ಥರಾ ವರ್ಡ್ಸ್​ ಮಾತಾಡಬೇಕಾದ್ರೆ ಸೈಲೆಂಟ್ ಆಗಿರ್ತೀರಿ.. ಅಶ್ವಿನಿ ಅವರೇ ಆಕಸ್ಮಾತ್ ನಿಮಗೆ ಕರೆದಿದ್ದರೆ.. ಏನ್ಮಾಡ್ತಿದ್ರಿ.. ನೀವು ಇನ್ನೂ ಚಿಕ್ಕವರಾಗೋಕೆ ಹೋಗಬೇಡಿ..
Advertisment

ಸುದೀಪ್ ಅವರು ಅಶ್ವಿನಿ ಮತ್ತು ಕಾಕ್ರೋಚ್​ ಸುಧೀಗೆ ಇವತ್ತೂ ಕೂಡ ಕ್ಲಾಸ್​ ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ಕಿಚ್ಚನ ಎದುರಲ್ಲೇ ಜಾಹ್ನವಿಗೆ ರಿಷಾ ಗೌಡ ಚಾಲೆಂಜ್ ಮಾಡಿದ್ದಾಳೆ. ಹೀಗಾಗಿ ಇವತ್ತಿನ ಕಿಚ್ಚನ ಎಪಿಸೋಡ್​ ತುಂಬಾನೇ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ: ಭಾಗ್ಯಳಿಗೆ ಹೊಸ ಪೂಜಾ ಸಿಕ್ಕಾಯ್ತು.. ಯಾರು ಇವರು..? 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ashwini Gowda Bigg Boss Ashwini Gowda kiccha sudeep Bigg Boss Kannada 12 Bigg boss BBK12
Advertisment
Advertisment
Advertisment