/newsfirstlive-kannada/media/media_files/2025/10/26/kiccha-sudeep-8-2025-10-26-22-40-30.jpg)
ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್​, ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರ ಆಟವನ್ನು ಹೊಗಳಿದ್ದಾರೆ. ಇಷ್ಟುದಿನ ಸುದೀಪ್ ಅವರಿಂದ ಬುದ್ಧಿ ಹೇಳಿಸಿಕೊಂಡು ಅಶ್ವಿನಿ ಗೌಡ ಹೆಚ್ಚು ಸುದ್ದಿ ಆಗುತ್ತಿದ್ದರು.
ಏನಂದ್ರು ಸುದೀಪ್..?
ಸಂಡೆ ವಿತ್ ಬಾದ್​ ಶಾ ಸುದೀಪ್​ ಎಪಿಸೋಡ್​ನಲ್ಲಿ ಕಿಚ್ಚ ಎಲ್ಲಾ ಸ್ಪರ್ಧಿಗಳಿಗೂ ಪ್ರಶ್ನೆ ಕೇಳಿದರು. ಬಿಗ್​ಬಾಸ್​ ಮನೆಯ ಟ್ರೋಫಿ ಗೆಲ್ಲುವ ರೇಸ್​ನಲ್ಲಿ ಇರುವ ಸ್ಪರ್ಧಿಗಳು ಯಾಱರು ಎಂದು ಕೇಳಿದ್ದರು. ಅದಕ್ಕೆ ಮನೆಯ ಬಹುತೇಕ ಸ್ಪರ್ಧಿಗಳು ಗಿಲ್ಲಿ ಮತ್ತು ಅಶ್ವಿನಿ ಗೌಡ ಹೆಸರು ಹೇಳಿದರು. ಬಳಿಕ ಯಾಕೆ ಅವರಿಬ್ಬರ ಹೆಸರು ಹೆಚ್ಚು ಕೇಳಿ ಬರ್ತಿದೆ ಎಂದು ಸುದೀಪ್ ಕೇಳ್ತಾರೆ. ಅದಕ್ಕೆ ಯಾರೂ ಕೂಡ ಸರಿಯಾದ ಉತ್ತರ ಕೊಡಲ್ಲ.
ಇದನ್ನೂ ಓದಿ:ಅಯ್ಯಯ್ಯೋ ಗಿಲ್ಲಿ ಹೆಂಗೆಲ್ಲ ಟ್ರೋಲ್ ಆಗವ್ರೆ ನೋಡ್ರಿ.. Video
/filters:format(webp)/newsfirstlive-kannada/media/media_files/2025/10/26/ashwini-gowda-9-2025-10-26-21-47-12.jpg)
ನಂತರ ಸುದೀಪ್ ಅವರೇ ಪ್ರತಿಕ್ರಿಯಿಸಿ.. ಅಶ್ವಿನಿ ಹಾಗೂ ಗಿಲ್ಲಿ ಹೆಚ್ಚು ರೇಸ್​ನಲ್ಲಿ ಇದ್ದಾರೆ ಎಂದು ನೀವೇ ಉತ್ತರ ಕೊಟ್ಟಿದ್ದೀರಿ. ಗಿಲ್ಲಿ ಹಾಗೂ ಅಶ್ವಿನಿ ಅವರೇ, ನೀವು, ಮಾತಾಡ್ತೀರಿ ಮಾತಾಡಲ್ಲ. ಜಗಳ ಆಡ್ತೀರಿ, ಆಡಲ್ಲ. ರೂಲ್ಸ್ ಬ್ರೇಕ್ ಮಾಡ್ತೀರಿ, ಮಾಡಲ್ಲ. ಇದೆಲ್ಲವನ್ನೂ ಬಿಟ್ಟು ನೀವಿಬ್ಬರೂ ಬಿಗ್​ಬಾಸ್ ಮನೆಯಲ್ಲಿ ಜೀವಿಸಿದ್ದೀರಿ. ಅದರ ಅರ್ಥ ನೀವು ಬಿಗ್​ಬಾಸ್ ಮನೆಯಲ್ಲಿ ಇದ್ದೀರಿ ಅದಕ್ಕೆ ರೇಸ್​ನಲ್ಲಿ ಇರೋದು. ಎಲ್ಲಾ ಸ್ಪರ್ಧಿಗಳು ಬಿಗ್​ಬಾಸ್ ಮನೆಯಲ್ಲಿ ಇರೋದಕ್ಕೆ ಪ್ರಯತ್ನಿಸಿ. ಹೇಗೆ ಇರ್ತೀರೋ, ನಿಮಗೆ ಬಿಟ್ಟಿದ್ದು ಎನ್ನುತ್ತ.. ಅಶ್ವಿನಿ ಗೌಡ ಜೈಲಿಗೆ ಹೋದ ಸಂದರ್ಭದಲ್ಲಿ ಜೈಲಿನ ಕಂಬಿಗಳ ಮೇಲೆ ಕೂತಿರುವ ಫೋಟೋ ತೋರಿಸಿದರು.
ಇದನ್ನೂ ಓದಿ: ‘ನಾನೇನಾದ್ರೂ..’ ಕೈಮುಗಿದು ಕ್ಷಮೆ ಕೇಳಿದ ಅಶ್ವಿನಿ ಗೌಡ.. ಯಾವ ವಿಷಯಕ್ಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us