/newsfirstlive-kannada/media/media_files/2025/10/26/ashwini-gowda-7-2025-10-26-21-44-49.jpg)
ಬಿಗ್​ಬಾಸ್ ಹಾಗೂ ಬಿಗ್​ಬಾಸ್ ತಂಡಕ್ಕೆ ಕೊನೆಗೂ ಅಶ್ವಿನಿ ಗೌಡ ಕ್ಷಮೆ ಕೇಳಿದ್ದಾರೆ. ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರಿಂದ ಮತ್ತೊಂದು ಬಾರಿಗೆ ಕ್ಲಾಸ್ ಆದ ಬೆನ್ನಲ್ಲೇ ಕರ್ನಾಟಕದ ಜನತೆಗೆ ಹಾಗೂ ಬಿಗ್​ಬಾಸ್​​ ತಂಡಕ್ಕೆ ಕ್ಷಮೆ ಕೇಳಿದ್ದಾರೆ.
ಯಾಕೆ ಕ್ಷಮೆ ಕೇಳಿದ್ದಾರೆ..?
ಕಳೆದ ವಾರ ಬಿಗ್​ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆ ನಂತರ.. ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಆಯ್ಕೆ ನಡೆಯಿತು. ಕಳಪೆ ಪ್ರದರ್ಶನ ನೀಡಿರೋದು ಅಶ್ವಿನಿ ಗೌಡ ಎಂದು ಕ್ಯಾಪ್ಟನ್ ರಘು ಹೇಳಿದರು. ಆಟದ ನಿಯಮಗಳ ಪ್ರಕಾರ ಕಳಪೆ ಪಡೆದುಕೊಂಡವರು ಜೈಲಿಗೆ ಹೋಗಬೇಕು.
ಇದನ್ನೂ ಓದಿ:ಅಯ್ಯಯ್ಯೋ ಗಿಲ್ಲಿ ಹೆಂಗೆಲ್ಲ ಟ್ರೋಲ್ ಆಗವ್ರೆ ನೋಡ್ರಿ.. Video
/filters:format(webp)/newsfirstlive-kannada/media/media_files/2025/10/26/ashwini-gowda-8-2025-10-26-21-46-39.jpg)
ಕಳಪೆ ಪಟ್ಟ ಅಲಂಕರಿಸಿ ಜೈಲಿಗೆ ಹೋಗಿದ್ದ ಅಶ್ವಿನಿ ಗೌಡ ರೂಲ್ಸ್​ ಪದೇ ಪದೇ ಬ್ರೇಕ್ ಮಾಡಿದ್ದರು. ಜೈಲಿನಲ್ಲಿ ಇದ್ದಿರೋದಕ್ಕಿಂತ ಹೊರಗಡೆ ಇದ್ದದ್ದೇ ಹೆಚ್ಚಾಗಿತ್ತು. ಅಲ್ಲದೇ ಆ್ಯಪಲ್ ಹಾಗೂ ಇತರೆ ಪದಾರ್ಥವನ್ನು ತಿಂದು ಬಿಗ್​ಬಾಸ್​ ಮನೆಯ ಮೂಲ ರೂಲ್ಸ್ ಬ್ರೇಕ್ ಮಾಡಿದ್ದರು. ಯಾರ ಮಾತನ್ನೂ ಕೇಳದೇ ರೂಲ್ಸ್ ಬ್ರೇಕ್ ಮಾಡ್ತಿದ್ದ ಅಶ್ವಿನಿ ಗೌಡ ಮೇಲೆ ಸ್ಪರ್ಧಿಗಳು ಮಾತ್ರವಲ್ಲೂ, ವೀಕ್ಷಕರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಹಿಂದೆ ಬಿದ್ದಿದ್ದ ಜಾಹ್ನವಿಗೆ ವಾರ್ನ್ ಮಾಡಿದ ಕಿಚ್ಚ ಸುದೀಪ್..!
/filters:format(webp)/newsfirstlive-kannada/media/media_files/2025/10/26/ashwini-gowda-9-2025-10-26-21-47-12.jpg)
ಏನಂದ್ರು ಅಶ್ವಿನಿ ಗೌಡ..?
ರಘು ಅವರು ನನಗೆ ಕಳಪೆ ಕೊಟ್ಟಿರುತ್ತಾರೆ. ಆ ಕೋಪದಲ್ಲಿ ನಾನು ಬಿಗ್​ಬಾಸ್​ನ ಮೂಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದೇನೆ. ಇದನ್ನೂ ಸುದೀಪ್ ಸರ್ ಕೂಡ ಹೇಳಿದ್ದಾರೆ. ನಿಜವಾಗಿಯೂ ನನ್ನಿಂದ ನಿಯಮ ಉಲ್ಲಂಘನೆ ಆಗಿದ್ದರೆ ಕ್ಷಮೆ ಕೇಳ್ತೀನಿ.. ಇಡೀ ಬಿಗ್​ಬಾಸ್ ತಂಡಕ್ಕೆ ಕ್ಷಮೆ ಕೇಳ್ತಿದ್ದೀನಿ. ಹಾಗೆಯೇ ಇಡೀ ಕರ್ನಾಟಕಕ್ಕೆ ಕ್ಷಮೆ ಕೇಳ್ತೀನಿ. ನಾನೇನಾದ್ರೂ ತಪ್ಪು ಮಾಡಿದ್ರೆ ಖಂಡಿತ ಕ್ಷಮೆ ಕೇಳ್ತೀನಿ.. ಎಂದಿದ್ದಾರೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us