/newsfirstlive-kannada/media/media_files/2025/10/27/jahnavi_ashwini-2025-10-27-09-41-37.jpg)
ಫ್ರೆಂಡ್ ಶಿಫ್ ಗೆ ಗುಡ್ ಬೈ ಹೇಳಿ ಬೇರೆಯಾದ ಅಶ್ವಿನಿಗೌಡ- ಜಾಹ್ನವಿ
ಕನ್ನಡದ ಬಿಗ್ ರಿಯಾಲಿಟಿ ಶೋ, ಕಿಚ್ ಸುದೀಪ್ ಅವರು ನಡೆಸಿಕೊಡುವಂತಹ ಬಿಗ್ ಬಾಸ್​ ರಂಗೇರಿದ್ದು ಮನೆಯಲ್ಲಿ ಯಾರ್ ಮೇಲೆ ಯಾರು ಜಗಳ ಮಾಡುತ್ತಾರೋ ಗೊತ್ತಾಗುತ್ತಿಲ್ಲ. ಇಷ್ಟು ದಿನ ಸ್ನೇಹಿತೆಯರಾಗಿ ಓಡಾಡಿಕೊಂಡಿದ್ದ ಜಾಹ್ನವಿ ಹಾಗೂ ಅಶ್ವಿನಿ ಗೌಡ ಮಧ್ಯೆ ದೊಡ್ಡ ಬೆಂಕಿ ಕೆಂಡ ಬಿದ್ದಿದೆ. ಬಿಗ್​ಬಾಸ್ ಮನೆಯಲ್ಲಿ ಇಬ್ಬರ ನಡುವೆ ಮಾತಿನ ಸಮರವೇ ನಡೆದಿದೆ.
ತಮ್ಮ ಎದುರಾಳಿ ಸ್ಪರ್ಧಿ ದೊಡ್ಮನೆಯಲ್ಲಿ ಇರಲು ಯಾಕೆ ಯೋಗ್ಯರಲ್ಲ ಎಂದು ತಿಳಿಸುವಂತೆ ಬಿಗ್​ ಬಾಸ್ ಪ್ರಶ್ನೆ ಮಾಡಿದ್ದರು. ಇದಕ್ಕೆ ಮನೆಯಲ್ಲಿ ಮೊದಲು ಮಾತನಾಡಿದ ಅಶ್ವಿನಿ ಗೌಡ, ಜಾಹ್ನವಿ ಫ್ರೆಂಡ್​ಶಿಪ್​ನಿಂದ ನನಗೆ ಕಳಂಕ ಬಂದಿದೆ ಎಂದು ನೇರವಾಗಿಯೇ ಹೇಳಿದ್ದಾರೆ. ಈ ವೇಳೆ ಎದುರುತ್ತರ ಕೊಟ್ಟ ಜಾಹ್ನವಿ ನಿಮ್ಮ ಆಟನ ನೀವು ಆಡುತ್ತಿದ್ದೀರಾ, ನನ್ನ ಆಟವನ್ನು ನಾನು ಆಡುತ್ತಿದ್ದೇನೆ. ಕೆಲವರ ಆಟ ತುಂಬಾ ಫಾಸ್ಟ್​ ಆಗಿ ಕಾಣಿಸಬಹುದು, ಇನ್ನು ಕೆಲವರ ಆಟ ತುಂಬಾ ಸ್ಲೋ ಆಗಿ ಕಂಡು ಗುರಿ ಮುಟ್ಟಬಹುದು ಎಂದು ಜಾಹ್ನವಿ ಹೇಳಿದ್ದಾರೆ.
ಇದನ್ನೂ ಓದಿ:BBK12; ಸೆಡೆ, ನಾಲಿಗೆ ಸೀಳಿ ಬಿಡ್ತೀನಿ.. ಅಯ್ಯೋ ಕಾಕ್ರೂಚ್ ಸುಧಿ ಮಾತುಗಳಿಗೆ ಸ್ಪರ್ಧಿಗಳು ಫುಲ್ ಶಾಕ್!
/filters:format(webp)/newsfirstlive-kannada/media/media_files/2025/10/13/bbk-jhanavi-2025-10-13-11-35-56.png)
ಇದಕ್ಕೆ ಕೋಪದಿಂದಲೇ ಜಾಹ್ನವಿಗೆ ಉತ್ತರಿಸಿದ ಅಶ್ವಿನಿ ಗೌಡ, ನನ್ನನ್ನು ಮೊದಲು ಮುಂದೆ ಬಿಟ್ಟು ಹಿಂದೆ ನೀವು ತಮಾಷೆ ನೋಡಿ, ಆ ಮೇಲೆ ನನ್ನನ್ನು ಬಿಗ್​ ಬಾಸ್ ಮನೆಯಿಂದ ಹೊರಗಡೆ ಕಳಿಸಬೇಕು ಎಂದು ಕಾಯುತ್ತಿದ್ದೀರಾ ನೀವು ಅಂತ ಪ್ರಶ್ನೆ ಮಾಡಿದ್ದಾರೆ. ನೀವು ಫ್ರೆಂಡ್​ಶಿಪ್ ಅಂತ ಹೇಳಿಕೊಂಡು ನನಗೆ ಬಾವಿ ತೋಡುತ್ತಿದ್ದಾರಾ ಅಂತ ನನಗೆ ಗೊತ್ತಿರಲಿಲ್ಲ. ಆ ತರದ ಸ್ನೇಹಕ್ಕೆ ನಾವು ಬ್ರೇಕ್ ಕೊಡುವುದು ಉತ್ತಮ ಎಂದು ಅಶ್ವಿನಿ ಗೌಡ ಖಡಾ ಖಂಡಿತವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸ್ನೇಹ- ಪ್ರೀತಿ ಯಾವುದು ಕೆಲಸಕ್ಕೆ ಬರಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತೆ. ಬಿಗ್ ಬಾಸ್ ಆರಂಭದಿಂದಲೂ ಆಶ್ವಿನಿ ಗೌಡ ಹಿಂದೆ ಸುತ್ತುತ್ತಿದ್ದ ಜಾಹ್ನವಿ ಈಗ ಅಶ್ವಿನಿ ವಿರುದ್ಧವೇ ಮಾತನಾಡಿದ್ದಾರೆ. ಇದರಿಂದ ಇಬ್ಬರು ದೂರ ದೂರ ಆಗಿದ್ದಾರೆ. ಒಬ್ಬರಿಗೊಬ್ಬರು ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದ ಗೆಳೆತನ ಈಗ ಹಗೆತನಕ್ಕೆ ಬಂದು ನಿಂತಿದೆ. ಇಬ್ಬರು ಮಾತನಾಡಿದ್ದು ನೋಡಿದರೆ ವೀಕ್ಷಕರಿಗೆ ಶಾಕ್ ಆಗೋದು ಪಕ್ಕಾ. ಕಲರ್ಸ್ ಕನ್ನಡ ಚಾನಲ್ ನಲ್ಲಿ ಇದರ ಪ್ರಮೋ ಹಾಕಿದ್ದಾರೆ. ಅದನ್ನು ತಾವು ಇಲ್ಲಿ ನೋಡಬಹುದು.
ಜೋಡೆತ್ತುಗಳು ಬೇರೆಯಾಗಿ ಬಿಟ್ರಾ?
— Colors Kannada (@ColorsKannada) October 27, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/SILhNGySZy
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us