/newsfirstlive-kannada/media/media_files/2025/10/24/suddi-2025-10-24-10-03-26.jpg)
ಕಾಕ್ರೂಚ್ ಸುಧಿ Photograph: (ಕಲರ್ಸ್ ಕನ್ನಡ)
ಬಿಗ್​ಬಾಸ್​ ಮನೆಯಲ್ಲಿ ಸ್ಫರ್ಧಿಗಳು ಹೀಟ್​ ಆಫ್​ ದಿ ಮೂಮೆಂಟ್​ನಲ್ಲಿ ಅವಾಚ್ಯ ಶಬ್ಧಗಳನ್ನು ಬಳಸುತ್ತಿದ್ದಾರೆ. ಬಳಸುವ ಪದಗಳು ಅವಾಚ್ಯ ಅಲ್ಲದಿದ್ದರೂ ಕೇಳಲು ಅಷ್ಟೇನೂ ಕೆಟ್ಟದ್ದು ಅನಿಸುತ್ತದೆ. ಹೀಗಾಗಿ ಮನೆಯಲ್ಲಿಯೇ ವಿರೊಧ ವ್ಯಕ್ತವಾಗುತ್ತಿದೆ. ಇದೀಗ ಕಾಕ್ರೂಚ್ ಸುಧಿ ಮಾತು ಅಸಮಾಧಾನಕ್ಕೆ ಕಾರಣವಾಗಿದೆ.
ಮನೆಯಲ್ಲಿ ಮತ್ತೊಂದು ಅವಾಚ್ಯ ಶಬ್ಧ ಕೇಳಿ ಬಂದಿದ್ದು ಕಾಕ್ರೂಚ್ ಸುಧಿ, ಸಹ ಸ್ಫಧಿ ರಕ್ಷಿತಾಗೆ ‘ಸೆಡೆ’ ಎನ್ನುವ ಅವಾಚ್ಯ ಶಬ್ಧ ಬಳಿಸಿದ್ದಾರೆ. ಇದೀಗ ಕಾಕ್ರೂಚ್ ಸುಧಿ ಸದಸ್ಯರ ಎದುರು ಆಡಿರುವ ಮಾತು ಮನೆ ಮಂದಿಯಲ್ಲಿ ಅಸಮಾಧಾನ ಉಂಟು ಮಾಡಿದೆ.
/filters:format(webp)/newsfirstlive-kannada/media/media_files/2025/10/24/suddi-fight-2025-10-24-10-10-01.jpg)
ಎಲ್ಲರೂ ಒಟ್ಟಿಗೆ ಸೇರಿ ಮನೆ ಕೆಲಸದ ಬಗ್ಗೆ ಚರ್ಚೆ ಮಾಡ್ತಿದ್ದರು. ಅದೇ ಸಂದರ್ಭದಲ್ಲಿ ಕಾಕ್ರೂಚ್ ಸುಧಿಯ ರಕ್ಷಿತಾಳನ್ನ ಕರೆಯುತ್ತಾರೆ. ಆಕೆ ರಿಯಾಕ್ಟ್ ಮಾಡಿರುವುದಿಲ್ಲ. ಇದ್ದರಿಂದ ಸಿಟ್ಟಿಗೆದ್ದ ಕಾಕ್ರೂಚ್ ಸುಧಿ ‘ಇವಳ್ಯಾರೋ ನಿನ್ನೆ ಮೊನ್ನೆ ಬಂದ ‘ಸೆಡೆ’ ಹತ್ತು ಸಾರಿ ಕರೆದ್ದರು ತಿರುಗಿ ನೋಡಲ್ಲ ಅಂತಾ ಬೈದಿದ್ದಾರೆ. ಇದು ಅಲ್ಲಿದ್ದ ಹಲವರಿಗೆ ಬೇಸರ ತರಿಸಿದೆ, ಗಿಲ್ಲಿ, ಜಾಹ್ನವಿ ನೇರವಾಗಿ ವಿರೋಧಿಸಿದ್ದಾರೆ.
ಅದಾದ ಬಳಿಕವೂ ನಮಗೂ ಬೆಲೆ ಇದೆ ನಾನು ಯಾಕೇ ಕರಿಬೇಕು ಅವಳು ಕೀಲಾಡಿ ತರ ಮಾತನಾಡ್ತಿದ್ದಾರೆ. ನಾವು ಮಾತನಾಡುವಾಗ ಬೇರೆ ಅವರು ಮಧ್ಯೆ ಮಾತನಾಡಿದ್ದರೆ, ನಾಲಿಗೆ ಸೀಳಿ ಬಿಡ್ತೀನಿ’ ಮರ್ಯಾದಿ ಕೊಟ್ಟು ಮಾರ್ಯಾದಿ ತಗೋಬೇಕು ಎಂದು ಬೆದರಿಕೆ ಹಾಕಿದರು. ಸದ್ಯ ಕಾಕ್ರೂಚ್​ ಸುಧಿಯ ಅತಿರೇಖದ ವರ್ತನೆ ಮನೆ ಮಂದಿಯಲ್ಲಿ ಅಸಮಾಧಾನ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us