/newsfirstlive-kannada/media/media_files/2025/10/27/suraj_rashika-2025-10-27-14-32-48.jpg)
ಕನ್ನಡ ನಾಡಿನ ಬಿಗ್ ಶೋ ಎಂದರೆ ಅದು ಬಿಗ್ ಬಾಸ್. ಈ 12ನೇ ಸೀಸನ್​ ಅಂದ, ಚೆಂದ ಹಾಗೂ ಜಗಳ, ಟಾಸ್ಕ್​ಗಳಿಂದ ಮುನ್ನುಗ್ಗುತ್ತಿದೆ. ಈಗಾಗಲೇ ನಾಲ್ವರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ಈ ವಾರವೂ ಯಾರದರೂ ದೊಡ್ಮನೆಯಿಂದ ಗೇಟ್​ಪಾಸ್ ಪಡೆಯಬಹುದು. ಮೂವರು ವೈಲ್ಡ್​ಕಾರ್ಡ್​ ಎಂಟ್ರಿಯಾಗಿ, ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಈ ಎಲ್ಲದರ ನಡುವೆ ಬಿಗ್ ಹೌಸ್​ನಲ್ಲಿ ಬಿಬಿ ಕಾಲೇಜ್ ಆರಂಭವಾಗಿದೆ.
ಎಲ್ಲ ಸ್ಪರ್ಧಿಗಳನ್ನು ಗೋಲ್ಡನ್​ ಪೀರಿಯಡ್​ಗೆ ಬಿಗ್ ಬಾಸ್​ ಕರೆದುಕೊಂಡು ಹೋಗಿದ್ದಾರೆ. ಅಂದರೆ ತಮ್ಮ ಕಾಲೇಜು ದಿನಗಳ ನೆನಪಿಸುವಂತೆ ಬಿಗ್ ಬಾಸ್​ ಕಾಲೇಜು ಕ್ಯಾಂಪಸ್​ನಲ್ಲಿ ಕಂಟೆಸ್ಟೆಂಟ್​ಗಳು ರಂಜಿಸಬೇಕಿದೆ. ಕಾಲೇಜು ಸ್ಟುಡೆಂಟ್ಸ್​ಗಳಂತೆ ಎಲ್ಲರೂ ತಮ್ಮ ತಮ್ಮ ಡ್ರೆಸ್​ಗಳನ್ನು ಧರಿಸಿಕೊಂಡು ಫುಲ್ ಎಂಜಾಯ್ ಮೂಡ್​ನಲ್ಲಿದ್ದಾರೆ. ಈ ನಡುವೆ ಗಿಲ್ಲಿ ನಟ, ಮಲ್ಲಮ್ಮರನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/10/27/bbk12_college-2025-10-27-14-41-29.jpg)
ಚಂದ್ರಪ್ರಭ ಅಂತೂ ಪಿಂಕ್ ಶರ್ಟ್​, ಬ್ಲ್ಯಾಕ್ ಪ್ಯಾಂಟ್ ಹಾಕ್ಕೊಂಡು ಫುಲ್ ಸೈಲೆಂಟ್ ಸ್ಟುಂಡೆಂಟ್ ಎನ್ನುವಂತೆ ನಮಸ್ಕಾರ ಸರ್. ನನ್ನ ಹೆಸರು ಚಂದ್ರಪ್ರಭ, ನನ್ನ ವಯಸ್ಸು 21 ಎಂದು ಹೇಳುತ್ತಿದ್ದಂತೆ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಬಿಬಿ ಕಾಲೇಜ್​ ಕ್ಯಾಂಪಸ್​ನಲ್ಲಿ ಎರಡು ಗ್ರೂಪ್​ ಆಗಿದ್ದು ಅಭಿಷೇಕ್ ನೇರ ಹೋಗಿ ಸ್ಪಂದನಾ ಅವರ ಕೆನ್ನೆ ಮುಟ್ಟಿದ್ದಾರೆ. ಇದಕ್ಕೆ ನನ್ನ ಕೆನ್ನೆ ಮುಟ್ಟೋಕೆ ಬರುತ್ತಿದ್ದಾರೆ ಎಂದು ಗಿಲ್ಲಿಗೆ ಸ್ಪಂದನಾ ಹೇಳಿದ್ದಾರೆ.
ಆದರೆ ಗಿಲ್ಲಿ ಸುಮ್ಮನೇ ಇರ್ತಾನಾ.. ನಮ್ಮ ಟೀಮ್ ಹುಡುಗಿನ ನೀನು ಏನ್ ಮುಟ್ಟೋದು, ನಾನು ಮುಟ್ಟುತ್ತೇನೆ ಎಂದು ಸ್ಪಂದನಾ ಅವರ ಕೆನ್ನೆ ಮುಟ್ಟಿ ಹೋಗಿದ್ದಾರೆ. ಸೂರಜ್ ಹಾಗೂ ರಾಶಿಕಾ ಲವ್ ಮುಂದುವರೆದಿದ್ದು ಹುಡುಗಿಯರಿಗೆ ಲೈನ್ ಹೊಡೆಯಬಹುದಾ ಎಂದು ಸೂರಜ್ ಕೇಳಿದ್ದಾರೆ. ಅದಕ್ಕೆ ರಾಶಿಕಾ ನೀನು ಅದರಲ್ಲೇ ಇದ್ದು ಬಿಡು ಎಂದು, ನನಗೆ ಇವನು ಇಷ್ಟ ಎಂದು ರಾಶಿಕಾ ಕೈ ತೋರಿಸುತ್ತಾ ಹೇಳಿದ್ದಾರೆ. ಅಯ್ಯೋ..ಅಯ್ಯೋ ಇವೆಲ್ಲಾ ಟಾಸ್ಕ್​ ಇಲ್ಲ ಎಂದಿದ್ದಕ್ಕೆ ಎಲ್ಲರೂ ಹ್ಯಾಪಿಯಾಗಿ ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us