/newsfirstlive-kannada/media/media_files/2025/08/11/sslc_exams-1-2025-08-11-09-54-00.jpg)
ಬೆಂಗಳೂರು: ಪರೀಕ್ಷೆಯಲ್ಲಿ ಯಾವ ಪ್ರಶ್ನೆ ಬರುತ್ತೋ, ಯಾವುದೋ ಬರಲ್ಲ ಎಂದು ನೆನಪಲ್ಲಿ ಇಟ್ಟುಕೊಳ್ಳಲು ಮಕ್ಕಳು ಇಡೀ ಪುಸ್ತವನ್ನು ಕಂಠಪಾಠ ಮಾಡುತ್ತಿದ್ದರು. ಇಷ್ಟು ದಿನ ಮನೆಯಲ್ಲಿ ಓದಿಕೊಂಡು ಹೋಗಿ ಶಾಲಾ ಮಕ್ಕಳು ಪರೀಕ್ಷೆ ಬರೆಯುತ್ತಿದ್ದರು. ಇನ್ಮುಂದೆ ಇಂತದ್ದಕ್ಕೆಲ್ಲ ಟೆನ್ಷನ್ ಬೇಡವೇ ಬೇಡ. ಏಕೆಂದರೆ ಪರೀಕ್ಷೆಯಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳ ಕೈಗೆ ಪುಸ್ತಕವನ್ನೇ ಕೊಡುತ್ತಾರಂತೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಸಿ)ಯು 9ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದೆ. ಅಂದರೆ ಇನ್ನು ಮುಂದೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗುತ್ತಿದೆ. 2026-27ರಿಂದ ಇದು ಜಾರಿಗೆ ಬರುತ್ತದೆ. ಕಂಠ ಪಾಠಕ್ಕೆ ಗುಡ್ ಬೈ ಹೇಳಿ, ಸಾಮರ್ಥ್ಯ ಕೌಶಲಕ್ಕೆ ಹಾಯ್ ಹಾಯ್ ಹೇಳಲಾಗುತ್ತಿದೆ. ಅಂದರೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಕೌಶಲಕ್ಕೆ ಇಲ್ಲಿ ಹೆಚ್ಚಿನ ಸಮಯ ನೀಡಲಾಗುತ್ತದೆ.
ಇದನ್ನೂ ಓದಿ:‘ಗಜ’ನಿಗೆ ಕೋಪ ತರಿಸಿದ ಟೂರಿಸ್ಟ್.. ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದವನ ಮೇಲೆ ಕಾಡಾನೆ ಅಟ್ಯಾಕ್
ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಇನ್ಮುಂದೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಹಳೆಯ ಪರೀಕ್ಷಾ ಪದ್ಧತಿ ಕಂಠ ಪಾಠಕ್ಕೆ ಸಮಯ ಕೊಡುತ್ತೆ ಅನ್ನೋ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸಾಮರ್ಥ್ಯವನ್ನ ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ.
ನ್ಯಾಷನಲ್ ಕರಿಕುಲಮ್ ಫ್ರೇಮ್ವರ್ಕ್ ಫಾರ್ ಸ್ಕೂಲ್ ಎಜುಕೇಶನ್ ಚೌಕಟ್ಟು (ಎನ್ಸಿಎಫ್ಎಸ್ಸಿ) 2023 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ಕ್ಕೆ ಇದು ಅನುಗುಣವಾಗಿ ಈ ಪ್ರಸ್ತಾನವೆ ಇದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿನ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ವಿಷಯಗಳನ್ನು ಪುಸ್ತಕ ಮೌಲ್ಯಮಾಪನ ಒಳಗೊಂಡಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ