/newsfirstlive-kannada/media/media_files/2025/08/11/cmr_elephant_new-2025-08-11-08-33-10.jpg)
ಚಾಮರಾಜನಗರ: ರಸ್ತೆ ಬದಿ ನಿಂತಿದ್ದ ಕಾಡಾನೆಯೊಂದು ವ್ಯಕ್ತಿ ಮೇಲೆ ಅಟ್ಯಾಕ್ ಮಾಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಪ್ರವಾಸಿಗರು ಕಿರುಚಾಡಿ ಹುಚ್ಚಾಟ ಮಾಡಿದ್ದಕ್ಕೆ ಆನೆ ದಾಳಿ ಮಾಡಿದೆ.
ಬಂಡೀಪುರ- ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಕಾಡಿನ ರಸ್ತೆ ಬದಿಯಲ್ಲಿ ಕಾಡಾನೆ ನಿಂತುಕೊಂಡಿರುತ್ತದೆ. ಈ ವೇಳೆ ಬೈಕ್, ಕಾರಿನಿಂದ ಇಳಿದ ಪ್ರವಾಸಿಗರು ಹುಚ್ಚಾಟ ಮಾಡುತ್ತಿರುತ್ತಾರೆ. ಆಗ ಕೇರಳದ ಓರ್ವ ಪ್ರವಾಸಿಗ ಆನೆ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ಮುಂದಾಗಿದ್ದಾನೆ. ಜನ ಕಿರುಚಾಡಿದ್ದರಿಂದ ಆನೆ ಉದ್ವೇಗಗೊಂಡು ಫೋಟೋ ತೆಗೆಯುತ್ತಿದ್ದವನ ಮೇಲೆ ಅಟ್ಯಾಕ್ ಮಾಡಿದೆ.
ಇದನ್ನೂ ಓದಿ: BJP ನಾಯಕನ ಹೆಂಡತಿಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಕಿರಾತಕರು
ಆನೆ, ಪ್ರವಾಸಿಗನ ಬೆನ್ನು ಹತ್ತಿ ಗುಮ್ಮಲು ಹೋಗಿದೆ. ಆಗ ಓಡುತ್ತಿದ್ದ ಪ್ರವಾಸಿಗ ರಸ್ತೆ ಮೇಲೆ ಎಡವಿ ಬಿದ್ದಿದ್ದಾನೆ. ಅವನನ್ನು ಕಾಲಿನಿಂದ ಒದ್ದು ಆನೆ ಅರಣ್ಯದೊಳಕ್ಕೆ ಹೋಗಿದೆ. ಗಾಯಗೊಂಡ ಪ್ರವಾಸಿಗನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅದೃಷ್ಟವಶಾತ್ ಬದುಕುಳಿದಿದ್ದಾನೆ. ಕಾಡು ಪ್ರಾಣಿಗಳ ಜೊತೆ ಹುಷಾರ್ ಆಗಿರಿ. ಮನುಷ್ಯರಂತೆ ವರ್ತಿಸಿ ಎಂದರೆ ಜನರೇ ಪ್ರಾಣಿಗಳಂತೆ ವರ್ತಿಸಿ ಇಂತಹ ಅನಾಹುತಕ್ಕೆ ಒಳಗಾಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ